Showing posts with label ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ mahipati. Show all posts
Showing posts with label ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ mahipati. Show all posts

Wednesday, 11 December 2019

ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ ankita mahipati

ಬಿಹಾಗ್ ರಾಗ ದಾದರಾ ತಾಳ

ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ ||ಧ್ರುವ||

ನಂದಕುಮಾರನೀತ ನಂದಮಹಿಮನೀತ
ಕಂದರ್ಪಜನಕನೀತ ಸುಂದರವದನನೀತ ||೧||

ಇಂದಿರೇಶನು ಈತ ವಂದಿತ ತ್ರೈಲೋಕನಾಥ
ಚಂದವಾಗಿ ಸುಳಿದ ಬಾಲಮುಕುಂದನೀತ ||೨||

ಗಿರಿಯ ಬೆರಳಲೆತ್ತಿದಾತ ಕರಿಯ ಸೆರೆಯ ಬಿಡಿಸಿದಾತ
ಮೊರೆಯ ಕೇಳಿ ದ್ರೌಪದಿಯ ಕರುಣಿಸಿದಾತ ||೩||

ಅಸುವ ಪೂತನಿ ಹೀರಿದಾತ ಕಂಸನ ಮಡುಹಿದಾತ
ವಂಶ ಕೌರವರ ತಾನು ಸಂಹರಿಸಿದಾತ ||೪||

ಬಾಲಕನಹುದೀತ ಮೂಲೋಕ ಪಾಲಕನೀತ
ಸಲಹುತಿಹ ಮಹಿಪತಿ ಮೂಲಾಗ್ರಜನೀತ ||೫||
****
ಕಾಖಂಡಕಿ ಶ್ರೀ ಮಹಿಪತಿರಾಯರು

ಈತನೀಗ ಕೃಷ್ಣನಾಥನು ಶ್ರೀನಾಥನು ಶ್ರೀನಾಥನಮ್ಮಾ P

ನಂದಕುಮಾರನೀತ ನಂದಮಹಿಮನೀತ ಕಂದರ್ಪಜನಕನೀತ ಸುಂದರವದನನೀತ 1 
ಇಂದಿರೇಶನು ಈತ ವಂದಿತ ತ್ರೈಲೋಕ್ಯನಾಥ ಚಂದವಾಗಿ ಸುಳಿದ ಬಾಲ ಮುಕುಂದನೀತ 2 
ಗಿರಿಯ ಬೆರಳಲೆತ್ತಿದಾತ ಕರಿಯ ಸೆರೆಯ ಬಿಡಿಸಿದಾತ ಮೊರೆಯ ಕೇಳಿ ದ್ರೌಪದಿಯ ಕರುಣಿಸಿದಾತ 3 
ಅಸುವ ಪೂತನಿ ಹೀರಿದಾತ ಕಂಸನ ಮಡುಹಿದಾತ ವಂಶ ಕೌರವರ ತಾನು ಸಂಹರಿಸಿದಾತ 4 
ಬಾಲಕನಹುದೀತ ಮೂಲೋಕ ಪಾಲಕ ನೀತ ಸಲಹುತಿಹ ಮಹಿಪತಿ ಮೂಲಾಗ್ರಜನೀತ 5
****