Showing posts with label ರಮಾನುತ ಪಾದಪಲ್ಲವ ಶ್ರೀಕರ ಚರಣ vijayaramachandra vittala vijaya dasa stutih. Show all posts
Showing posts with label ರಮಾನುತ ಪಾದಪಲ್ಲವ ಶ್ರೀಕರ ಚರಣ vijayaramachandra vittala vijaya dasa stutih. Show all posts

Friday, 6 August 2021

ರಮಾನುತ ಪಾದಪಲ್ಲವ ಶ್ರೀಕರ ಚರಣ ankita vijayaramachandra vittala vijaya dasa stutih

 ..


Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ರಮಾನುತ ಪಾದಪಲ್ಲವ ಶ್ರೀಕರ ಚರಣ

ಸೇವಕರ ಸಂಗದೊಳಿರಿಸು ವಿಜಯರಾಯ ಪ


ನಿಮ್ಹೊರತು ಪೊರೆವರನ್ಯರನು ನಾಕಾಣೆ

ನಿಮ್ಮ ಚರಣವ ನಂಬಿದೆ ಕರುಣದಿ ಕಾಯೊ ಅ.ಪ


ಪಂಡಿತ ಪಾಮರರನು ಉದ್ಧಾರ

ಮಾಡೆ ಕರುಣದಿಂದ ಸಕಲ ವೇದಗಳ

ಕ್ರೋಡೀಕೃತವಾದ ನಿರ್ಣಯ ಭಾಷ್ಯಗಳರ್ಥವ

ಮಾಡಿದಿ ಪದಗಳ ಸಕಲರೂ ತಿಳಿವಂದದಿ 1


ನಿನ್ನವರಾದ ರಂಗ ಒಲಿದ ರಾಯರ ನೋಡು

ನಿನ್ನ ಉಕ್ತಿಯ ನಂಬಿದ ವೆಂಕಟರಾಯರ ನೋಡು

ನಿನ್ನವನೆಂದೆನ್ನನು ಅವರಂತೆ ನೋಡದೆ

ಎನ್ನ ಕೈ ಸಡಿಲ ಬಿಡುವದೇನೋ 2


ಎಂದಿಗಾದರು ನಿನ್ನ ದಾಸರ ಕರುಣದಿಂದ

ಪಾದದ್ವಂದ್ವ ಹೊಂದದೆ ಹೋಗುವೆನೆ ದಾಸರಪ್ರಿಯನೆ

ತಂದೆ ವಿಜಯ ರಾಮಚಂದ್ರವಿಠಲರಾಯನ

ಹೊಂದುವ ಮಾರ್ಗವ ಬಂದು ತೋರಿಸಬೇಕೊ 3

***