Showing posts with label ಮಗನೆಂದಾಡಿಸುವಳು ಜಗದುದರನ್ನ ಆನಂದದಿ ಗೋಪಿ purandara vittala MAGANENDAADISUVALU JAGADUDARANNA AANANDADI GOPI. Show all posts
Showing posts with label ಮಗನೆಂದಾಡಿಸುವಳು ಜಗದುದರನ್ನ ಆನಂದದಿ ಗೋಪಿ purandara vittala MAGANENDAADISUVALU JAGADUDARANNA AANANDADI GOPI. Show all posts

Monday, 8 November 2021

ಮಗನೆಂದಾಡಿಸುವಳು ಜಗದುದರನ್ನ ಆನಂದದಿ ಗೋಪಿ purandara vittala MAGANENDAADISUVALU JAGADUDARANNA AANANDADI GOPI



ಮಗನೆಂದಾಡಿಸುವಳು ಜಗದುದರನ್ನ 
ಆನಂದದಿ ಗೋಪಿ ||ಪ||

ಕುಕ್ಷಿಯೊಳೀರೇಳು ಜಗವೆಲ್ಲವ ತಾಳಿ
ರಕ್ಷಿಸಿಕೊಂಡಿಹ ಬಲವಂತನ
ಪಕ್ಷಿವಾಹನ ದೇವ ಅಂಜಿದಂಜಿದನೆಂದು
ರಕ್ಷೆಯಿಡುವ ಪುಣ್ಯವೆಲ್ಲಿ ಪಡೆದಳೊ ||

ಸಾಗರಪತಿಯಾಗಿ ಭೋಗಿ ಶಯನದಲಿ
ಯೋಗನಿದ್ರೆಯೊಳಿಪ್ಪ ಆ ಕಂದನ
ಆಗಮ ಶ್ರುತಿಗಳು ಅರಸಿ ಕಾಣದ ವಸ್ತು
ತೂಗಿ ನೋಡುವ ಪುಣ್ಯವೆಲ್ಲಿ ಪಡೆದಳೊ ||

ವೇದತತಿಗಳಿಂದ ಬೋಧ ತಪಗಳಿಂದ
ಹೋದ ಹೊಲಬನರಿಯದಾತನ
ಭೀತಿಯಲಾಡುವ ಮಗನನರಸಿ ವಿ-
ನೋದವಾಡುವ ಪುಣ್ಯವೆಲ್ಲಿ ಪಡೆದಳೊ ||

ಹೊನ್ನ ಮಣೆಯ ಮೇಲೆ ಚಿಣ್ಣನ ಕುಳ್ಳಿರಿಸಿ
ಎನ್ನ ಮೋಹದ ಮುದ್ದು ಮಗನೆನುತ
ಹೊನ್ನ ತಾ ಗುಬ್ಬಿ ತಾ ಹೊನ್ನ ಗುಬ್ಬಿಯೆಂದು
ಚಿಣ್ಣನಾಡಿಪ ಪುಣ್ಯವೆಲ್ಲಿ ಪಡೆದಳೊ ||

ಬಲಿಯಿತ್ತ ಧಾರೆಯ ಜಲವ ಕರದೊಳಿಟ್ಟು
ನೆಲವ ಈರಡಿ ಮಾಡಿದ ದೇವನ
ಲಲನೆ ತೊಡೆಯೊಳಿಟ್ಟು ತಲೆಯ ನೇವರಿಸುತ್ತ
ಮೊಲೆಯ ಕೊಡುವ ಪುಣ್ಯವಲ್ಲಿ ಪಡೆದಳೊ ||

ಮಡದಿ ಬಾಲಕನ ನಿಲ್ಲೋ ನಿಲ್ಲೋ ಎಂದು
ಬಿಡದೆ ಕೊನೆಬೆರಳಲ್ಲಿ ಕರಪಿಡಿದು
ಅಡಿಯಿಡು ಮಗನೆ ದಟ್ಟಡಿಯಿಡು ಇಡು ಎಂದು
ನಡೆಯ ಕಲಿಸುವ ಪುಣ್ಯವೆಲ್ಲಿ ಪಡೆದಳೊ ||

ಒಣಗಿದ ತನು ತಲೆಜಡೆ ಹಣೆಯಲಿ ನಾಮ
ಪ್ರಣವ ಜಪದಿ ಮಣಿಮಾಲೆಯನೆಣಿಸಿ
ಮುನಿಜನಗಳೆಂದೂ ಅರಸಿ ಕಾಣದವನೊಳ್
ಅಣಕವಾಡುವ ಪುಣ್ಯವೆಲ್ಲಿ ಪಡೆದಳೊ ||

ಪಶುಪತಿ ಬ್ರಹ್ಮರು ಸುರ ಸಿದ್ಧ ಸಾಧ್ಯರು
ವಸುಧೆಯೊಳಗೆ ಬಂದು ಕಾದಿರಲು
ಶಶಿಮುಖಿ ಸಾಸಿರ ಪೆಸರುಳ್ಳ ದೇವನಿಗೆ
ಪೆಸರಿಡುವ ಪುಣ್ಯವೆಲ್ಲಿ ಪಡೆದಳೊ ||

ಮಂದಗಮನೆ ಆನಂದದಿ ನಿಟ್ಟಿಸಿ
ಕುಂದದೆ ಜಯ ಜಯವೆನುತಿರಲು
ಮಂದರಧರ ಪುರಂದರವಿಠಲನ
ಬಂದಪ್ಪುವ ಪುಣ್ಯವೆಲ್ಲಿಪಡೆದಳೊ ||
****

ರಾಗ ಶಂಕರಾಭರಣ ಅಟತಾಳ (raga, taala may differ in audio)

pallavi

maganendADisuvaLu jagadudharanna Anandadi gOpi

caraNam 1

kukSiyoLIrELu jagavellava tALi rakSisi koNDiha balavantana
pakSivAhana dEva anjitanjitanendu rakSiyiDuva puNyavelli paDedaLo

caraNam 2

sAgarapatiyAgi bhOgi shayanadali yOga nidreyoLippa A kandana
Agama shrutigaLu arasi kANada vastu tUgi nODuva puNyavelli paDEdaLo

caraNam 3

vEdatatigaLinda bOdha tapagaLinda hOda holabanariyadAtana
bhItiyalADuva magananarasi vinOdavADuva puNyavelli paDedaLo

caraNam 4

honna maNeya mEle ciNNana kuLLirisi enna mOhada muddu maganenuta
honna tA gubbi tA honna gubbiyenduciNNanADipa puNyavelli paDedaLo

caraNam 5

baliyitta dAreya jalava karadoLiTTu nelava IraDi mADida dEvana
lalane toDeyoLiTTu taleya nEvarisutta moleya koDuva puNyavalli paDedaLo

caraNam 6

maDadi bAlakana nillO nillO endu biDade kona beraLalli kara piDidu
aDiyiDu magane taTTaDiyiDu iDu endu naDeya kalisuva puNyavelli paDedaLo

caraNam 7

onagida tanu tale jaDe haNeyali nAma praNava japadi maNimAleyaneNisi
muni janagaLendU arasi kANadavanoL aNakavADuva puNyavelli paDedaLo

caraNam 8

pashupati brahmaru sura siddha sAdyaru vasudeyoLage bandu kAdiralu
shashimukhi sAsira pEsaruLLa dEvanige pesariDuva puNyavelli paDedaLo

caraNam 9

mandagamane Anandadi niTTisi kundade jaya jayavenutiralu
mandaradhara purandara viTTalana bandappuva puNyavellipaDedaLo
***