ರಾಗ ಕೇದಾರಗೌಳ. ಆದಿ ತಾಳ
ಬಗೆಬಗೆ ಆಟಗಳೆಲ್ಲಿ ಕಲಿತೆಯ್ಯ
ಜಗವ ಮೋಹಿಪನೆ ||ಪ||
ಬಗೆಬಗೆ ಆಟಗಳೆಲ್ಲಿ ಕಲಿತೆಯ್ಯ
ಜಗವ ಮೋಹಿಪನೆ ||ಪ||
ಖಗವರಗಮನ ಅಗಣಿತಮಹಿಮ
ಜಗದವರೊಳು ನೀ ಮಿಗಿಲಾಗೀ ಪರಿ ||ಅ.ಪ||
ಒಬ್ಬಳ ಬಸಿರಿಂದಲಿ ಬಂದು ಮ-
ತ್ತೊಬ್ಬಳ ಕೈಯಿಂದಲಿ ಬೆಳೆದು
ಕೊಬ್ಬಿದ ಭೂಭಾರವನಿಳುಹಲು ಇಂಥ
ತಬ್ಬುಬ್ಬಿದಾಟಗಳೆಲ್ಲಿ ಕಲಿತೆಯ್ಯ
ಮಗುವಾಗಿ ನೀ ಪೂತನಿಯ ಮೊಲೆಯುಂಡು
ನಗುತ ಅವಳ ಅಸುವನೆ ಕೊಂಡ್ಯೋ
ಅಘಹರ ನೀ ಗೋಪಿಯೊಳು ಜನಿಸಿ ಇಂಥ
ಸೊಗಸಾದ ಲೀಲೆಗಳೆಲ್ಲಿ ಕಲಿತೆಯ್ಯ
ಲೋಕರಂತೆ ನೀ ಮೃತ್ತಿಕೆ ಮೆದ್ದು
ತಾ ಕೋಪಿಸೆ ಜನನಿಯು ಬೇಗ
ಓಕರಿಸೆನ್ನಲು ಬಾಯೊಳು ಬ್ರಹ್ಮಾಂಡ
ಲೋಕವ ತೋರಿದ್ದು ಎಲ್ಲಿ ಕಲಿತೆಯ್ಯ
ಮಡುವ ಧುಮುಕಿ ಕಾಳಿಂಗನ ಪಿಡಿದು
ಹೆಡೆಯ ಮೇಲೆ ಕುಣಿದಾಡುತಿರೆ
ಮಡದಿಯರು ನಿನ್ನ ಬಿಡದೆ ಬೇಡಲು
ಕಡು ದಯದೋರಿದ್ದು ಎಲ್ಲಿ ಕಲಿತೆಯ್ಯ
ಒಂದು ಪಾದ ಭೂಮಿಯೊಳು ವ್ಯಾಪಿಸಿ ಮ-
ತ್ತೊಂದು ಪಾದ ಗಗನಕಿಡಲು
ನಂದದಿ ಬಲಿಯ ಶಿರದಿ ಮೂರನೇದಿಟ್ಟು
ಬಂಧಿಸಿದಾಟಗಳೆಲ್ಲಿ ಕಲಿತೆಯ್ಯ
ತ್ವರೆಯಿಂದ ಭಸ್ಮಾಸುರ ವರ ಪಡೆದು
ಹರನ ಶಿರದಿ ಕರವಿಡಲು
ತರುಣಿ ರೂಪವ ತಾಳಿ ಅವನ ಹಸ್ತದ್ಯವನ
ಮರುಳು ಗೊಳಿಸಿ ಕೊಂದದ್ದೆಲ್ಲಿ ಕಲಿತೆಯ್ಯ
ಜಗಕೆ ಮೂಲನೆಂದು ನಾಗರಾಜ ಕರೆಯೆ
ಖಗವಾಹನನಾಗಿ ನೀ ಬಂದು
ವಿಗಡ ನಕ್ರನ ಚಕ್ರದಿ ಸವರಿದೆ
ಹಗರಣದಾಟವನೆಲ್ಲಿ ಕಲಿತೆಯ್ಯ
ವೇದಗಳರಸಿ ಕಾಣದ ದೇವನೆ
ಸಾದರದಲಿ ವಿದುರನ ಗೃಹದಿ
ಮೋದದಿ ಒಕ್ಕುಡುತೆಯ ಪಾಲನೆ ಕೊಂಡು
ಹಾದಿಲಿ ಹರಿಸಿದ್ದು ಎಲ್ಲಿ ಕಲಿತೆಯ್ಯ
ಡಂಭಕ ಹಿರಣ್ಯಕ ಕುಮಾರ ಪ್ರಹ್ಲಾದನ್ನ
ಹಂಬಲವಿಲ್ಲದೆ ಬಾಧಿಸ ಬರಲು
ಸ್ತಂಭದಿ ಹರಿರೂಪದೋರಿ ಭಕ್ತನ
ಇಂಬಿಟ್ಟು ಪೊರೆದದ್ದು ಎಲ್ಲಿ ಕಲಿತೆಯ್ಯ
ಚಕ್ರಧರನೆ ಜರೆತನಯನೊಳು ಕಾದಿ
ಸಿಕ್ಕದೆ ಓಡಿದನೆಂದೆನಿಸಿ
ಭಕ್ತ ಭೀಮನಿಂದ ಸೀಳಿಸಿದೆಯೊ ಇಂಥ
ಠಕ್ಕು ಆಟಗಳ ಎಲ್ಲಿ ಕಲಿತೆಯ್ಯ
ಪ್ರಾಣ ಕೊಳುವೆ ಈ ದಿನವೆಂದರ್ಜುನ
ಧೇನಿಸದಲೆ ಸೈಂಧವಗೆನಲು
ಕಾಣದಂತೆ ಚಕ್ರವ ಸೂರ್ಯಗೆ ಇಟ್ಟಾ
ಬಾಣ ಹೊಡೆಸಿದನು ಎಲ್ಲಿ ಕಲಿತೆಯ್ಯ
ಆ ಶಿರ ಆತನ ಪಿತನ ಕರದೊಳು
ಸೂಸುತ ರಕ್ತವ ಬೀಳುತಿರೆ
ಸೋಸಿ ನೋಡದೆ ರುಂಡ ಬಿಸುಡಲವನ ಶಿರ
ಸಾಸಿರ ಮಾಡಿದಾಟವೆಲ್ಲಿ ಕಲಿತೆಯ್ಯ
ಸರ್ಪನ ಬಾಣ ಉರಿಯುತ ಬರಲು ಕಂ-
ದರ್ಪನ ಪಿತ ನೀ ರಣದಲ್ಲಿ
ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ
ನೀ ತೋರ್ಪಡಿಸಿದ ಆಟ ಎಲ್ಲಿ ಕಲಿತೆಯ್ಯ
ದುರುಳ ದುಶ್ಯಾಸನ ಸಭೆಯೊಳು ದ್ರೌಪದಿ
ಸೀರೆಯ ಕರದಿಂ ಸೆಳೆಯುತಿರೆ
ಹರಿ ಶ್ರೀ ಕೃಷ್ಣನೆ ಪೊರೆಯೆನಲಾ ಕ್ಷಣ
ಅರಿವೆ ರೂಪದಿ ಬಂದದ್ದೆಲ್ಲಿ ಕಲಿತೆಯ್ಯ
ಕುರುಪತಿ ಸಭೆಯಲಿ ಗರುವದಿ ಕುಳಿತಿರೆ
ಸಿರಿ ಕೃಷ್ಣನ ನೀ ಬರೆ ವಂದಿಸದೆ
ಧರೆಯನು ಮೆಟ್ಟುತ ಚರಣಕೆ ಉರುಳಿಸಿ
ಪರಿಹಾಸ್ಯ ಮಾಡಿದುದೆಲ್ಲಿ ಕಲಿತೆಯ್ಯ
ದುರಿಯೋಧನ ತನ್ನ ಪಕ್ಷ ಸ್ವೀಕರಿಸೆ
ಮೊರೆ ನಿನಗಿಡಲು ಮರುಳುಗೊಳಿಸಿ
ಧುರದೊಳು ಪಾರ್ಥನ ಸಾರಥಿಯಾಗಿ ನೀ
ಕುರುಕುಲವಳಿದದ್ದನ್ನೆಲ್ಲಿ ಕಲಿತೆಯ್ಯ
ಪತಿ ಶಾಪದಿಂದಲಿ ಶಿಲೆಯಾದಹಲ್ಯೆಯ
ಹಿತದಿಂದವಳನುದ್ಧಾರ ಮಾಡಿ
ಪತಿಗೂಡಿಸಿ ಮಹಾಪತಿ ವ್ರತೆಯೆನಿಸಿದ
ಮಿತ ಮಹಿಮೆಯ ಆಟವೆಲ್ಲಿ ಕಲಿತೆಯ್ಯ
ಎಂದಿನಂತೆ ಅಂಬರೀಷ ದ್ವಾದಶಿ ವ್ರತ
ಒಂದೇ ಭಕುತಿಲಿ ಸಾಧಿಸಲು
ಬಂದು ದುರ್ವಾಸರು ಶಾಪವನೀಯಲು
ಅಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯ್ಯ
ಕುಲಶೀಲವನಿದಜಮಿಳನು ಸರಸದಿ
ಹೊಲತಿಯ ಕೂಡಿ ಮರಣ ವೇಳೆ
ಬಲು ಮೋಹದಿ ಸುತ ನಾರಗನೆಂದೊದರಲು
ಒಲಿದು ಸುಗತಿಯಿತ್ತದ್ದೆಲ್ಲಿ ಕಲಿತೆಯ್ಯ
ಬಡತನ ಪಾರ್ವನ ಬಿಡದೆ ಬಾಧಿಸಲು
ಮಡದಿಯ ನುಡಿ ಕೇಳಿ ಆ ಕ್ಷಣದಿ
ಒಡೆಯ ನೀನವನೊಪ್ಪಿಡಿ ಅವಲಕ್ಕಿ ಕೊಂಡು
ಕಡು ಭಾಗ್ಯ ಕೊಟ್ಟದ್ದೆಲ್ಲಿ ಕಲಿತೆಯ್ಯ
ಪಾಂಡುಸುತರು ಕೌರವ ಮಧ್ಯದೊಳು
ಸಂಧಿಯ ಮಾಡಲು ನೀ ಪೋಗಿ
ನಿಂದ್ಯ ಕೌರವಗೆ ದುಷ್ಪ್ರೇರಿಸಿ ನೀ
ಬಂದ ಕಾರ್ಯ ಮಾಡಿದ್ದೆಲ್ಲಿ ಕಲಿತೆಯ್ಯ
ಆ ಸಮಯದಿ ಕಲಿವಂಶದಿ ಕೌರವ
ಹೇಸದೆ ನಿನ್ನನು ಕಟ್ಟಿಸಲು
ಸಾಸಿರನಾಮನೆ ವಿಶ್ವ ರೂಪವ ತೋರಿ
ಮೋಸ ಗೊಳಿಸಿದಾಟವೆಲ್ಲಿ ಕಲಿತೆಯ್ಯ
ಎಂದಿಗೂ ನಿನ್ನ ಗುಣವೃಂದಗಳೆಣಿಸಲು
ಇಂದಿರೆ ಬ್ರಹ್ಮನಿಗಸದಳವು
ಮಂದರಧರ ಸಿರಿ ಪುರಂದರ ವಿಠಲನೆ
ಚಂದ ಚಂದದಾಟಗಳನೆಲ್ಲಿ ಕಲಿತೆಯ್ಯ
***
Bagebage atagalelli kaliteyo |jagada mohakane ||pa||
Pakagavara gamanane aganita mahimane |jagadolu ni bahu migilagi |pari||a.pa||
Obbala basirindali bandu-ma-|ttobbala kaiyindali beledu ||
Kobbida bubaravaniluhalu intha |tabbibbatagalelli kaliteyo ||1|||
Maguvagi putani moleya-undu |nagutalavala asuvane kondu |
Agahara ni gopiyolu janisi intha |sogasina atagalelli kaliteyo ||2||
Lokarante ni mannanu tinalu |ta kopisi jananiyu bega ||
Okarisennalu bayolu sakala |lokava toridudelli kaliteyo ||3||
Maduva dhumuki kalingana pididu |padeya mele kunidadutire ||
Madadiyaru ninna bidade bedalu |kadudayedoridudelli kaliteyo ||4||
Ondupadabumiyali vyapisi ma-|ttondupadagaganakkidalu ||
Andadi baliya Siradi muraneyadittu |bandhisidatagalelli kaliteyo ||5||
Baradi basmasura varavanu padedu |haranu Siradi karavida baralu ||
Tarunirupava tali urihastadavana |marulugolisidudanelli kaliteyo ||6||
Jagake mulanemdu nagaraja kareye |kagavahananagade ni bandu ||
Naguta naguta A vigadanakrana konda |hagaranadatagalelli kaliteyo ||7||
Vedagalarasiyu kanada brahma ni-|nadaradali vidurana gruhadi ||
Modadi okkuditeya palane kondu |hadiyol harisidudelli kaliteyo ||8||
Dambakahiranyakasipu prahladana |hambalavillade sikshisalu ||
Stambadi Baktage rupava tori |sambramavittudanelli kaliteyo ||9||
Cakradharane jaratanayanondige kadi |sikki odidavanivanendenisi ||
Bakta bimana kaiyali kollisida |thakkinatagalanelli kaliteyo ||10||
A siravatana tandeya karadolu |susuta raktava bilutire ||
Sosi nodade runda bisudalavana Sira |sasira madidudelli kaliteyo ||11||
Prana selevani dinavendarjuna |dhenisadale saindhavagenalu ||
Kanadante suryage cakravanittu |bana hodisidudanelli kaliteyo ||12||
Sarpana banavu uriyuta baralu kan-|darpana pita ni karunadali ||
Tappisi parthana ratha nelakotti |torpadisidatavelli kaliteyo ||13||
Duruladuhsasana draupadi sireya |karadinda sabeyolu seleyutire ||
Harisri krushna ni poreyenalakshana |arive rupade bandudelli kaliteyo ||14||
Kurupati sabeyolu guruvinindiruta |sirikrushnanu bare vandisade ||
Sthiravagi kulitire charanadi dharemetti |kurupananurulisiddelli kaliteyo ||15||
Duriyodhana pandavara sikshisalu |moreyidalavana marulugolisi ||
Dhuradoluparthage sarathiyagi ni |kurukulavalidudanelli kaliteyo ||16||
Patisapadi sileyada ahalyeya |hitadindavalanu uddharisi ||
Patiyodagudisi pativrateyenisida-a-|mitamahimeya krutiyelli kaliteyo ||17||
Ambarisha dvadasi vrata sadhise |dombetanadidurvasabare ||
Indudharamsanu rajana pidisa-|landu cakradi kaydudelli kaliteyo ||18||
Kulacalagalanalida ajamila sarasadi |holatiya kudire marana bare ||
Balu mohada suta naraganodaralu |olidu gatiyanittudelli kaliteyo ||19||
Badatana parvana bidade badhisalu |madadiya nudikeli^^akshanadi ||
Odeya ninavanoppidiyavalanu kondu |kadubagyanittudanelli kaliteyo ||20||
Endemdu ninna gunavrundagalenisalu |indirebommanigasadalavu ||
Mandaradharasire purandaravithalane |chenda-chendadatagalelli kaliteyo ||22||
***
pallavi
bagebage AtagaLelli kaliteyya jagava mOhipane
anupallavi
khagavara gamana agaNita mahima jagadavaroLu nI migilAgI pari
caraNam 1
oppaLa basirindali bandu mattoppaLa kaiyindali baLedu kobbida
bhUbhAravaLiluhalu intha tabbubbidATagaLelli kaliteyya
caraNam 2
maguvAgi nI pUtaniya moleyuNDu naguta avaLa asuvane koNDyO
akhahara nI gOpiyoLu janisi intha sogasAda lIlegaLelli kaliteyya
caraNam 3
lOkarante nI mrttike meddu tA gOpise jananiyu bEga
Okarisennalu bAyoLu brahmANDa lOkava tOriddu elli kaliteyya
caraNam 4
maDuva dhumuki kALingana piDidu heDeya mEle kuNidADutire
maDadiyaru ninna biDade bEDalu kaDu dayadOriddu elli kaliteyya
caraNam 5
ondu pAda bhUmiyoLu vyApisi mattondu pAda gaganakiDalu
Anandadi baliya shiradi mUranEdiTTu bandhisidATagaLelli kaliteyya
caraNam 6
dvareyinda bhasmAsura vara paDedu harana shiradi karaviDalu
taruNi rUpava tALi avana hastadyavana maruLu goLisi kondaddelli kaliteyya
caraNam 7
jagake mUlanendu nAgarAja kareye khaga vAhananAgi nI bandu
vigaDa nakrana cakradi savarida hagaraNadATavanelli kaliteyya
caraNam 8
vEdagaLarasi kANada dEvane sAdharadali vidurana gruhadi
mOdadi okkuDuteya pAlane koNDu hAdili harisiddu elli kaliteyya
caraNam 9
Dambhaka hiraNyaka kumAra prahlAdanna hambalavillade bAdhisa baralu
sthambadi hari rUpava tOri bhaktana imbiTTu poredaddu elli kaliteyya
caraNam 10
cakradharane jare tananoLu kAdi sikkade Odidanendenisi
bhakta bhImaninda sILisideyo intha dhakku AtagaLa elli kaliteyya
caraNam 11
prANa koLuve I dinavendarjuna dhELisadale saindhavagenalu
kANadante cakrava sUryage iTTA bANa hoDesidanu elli kaliteyya
1
caraNam 2
A shira Atana pitana karadoLu susuta raktava pILutire
sOsi nODade ruNDa bisuDalavana shira sAsira mADidATavelli kaliteyya
1
caraNam 3
sarpa bANa uriyuta baralu kandarpana pita nI raNadalli
tappisi pArttana ratha nelagotti nI tOrpaDisida Ata elli kaliteyya
1
caraNam 4
duruLa dushyAsana sabheyoLu draupadi sIreya karadim seLeyutire
hari shrI krSNane poreyeLalA kSaNa arive rUpadi bandaddelli kaliteyya
1
caraNam 5
gurupati sabheyali garuvadi kuLitire siri krSNana nI bare vandisade
dhareyanu meTTuta caraNake uruLisi parihAsya mADidudelli kaliteyya
1
caraNam 6
duriyOdhana tanna pakSa svIkarise more ninagiDalu maruLu kolisi
dhUradoLu pArttana sArathiyAgi nI gurukulavaLidaddanelli kaliteyya
1
caraNam 7
pati shApadindali shileyAdahelyeya hitadindavaLanuddhAra mADi
pati gUDisi mahApati vrateyenisida mita mahimeya Atavelli kaliteyya
1
caraNam 8
endinante ambarISa dvAdashi vrata ondE bhakutali sAdhisalu
bandu durvAsaru shApavanIyalu andu cakradi kAidudelli kaliteyya
1
caraNam 9
kula shIlavanidajamiLanu sarasadi holatiya kUDi maraNa vELe
balu mOhadi suta nAraganondharalu olidu sukhatiyittaddelli kaliteyya
20: baDatana pArvana biDade bAdhisalu maDadiya nuDi kELi A kSaNadi
oDeya nInavanoppiDi avalakki koNDu kaDu bhAgya koTTaddelli kaliteyya
21: pANDu sutaru kaurava madhyadoLu sandhiya mADalu nI pOgi
nindaya kauravage duSprErisi nI banda kArya mADiddelli kaliteyya
2
caraNam 2
A samayadi kaliyamshadi kaurava hesade ninnanu kaTTisalu
sAsiranAmane vishva rUpava tOri mOsa goLisidATavelli kaliteyya
2
caraNam 3
endigU ninna guNa vrndagaLeNisalu indire brahmaNigasadaLavu
mandharadhara siri purandara viTTalane canda candadATagaLanelli kaliteyya
***
ಬಗೆಬಗೆ ಆಟಗಳೆಲ್ಲಿ ಕಲಿತೆಯೊ |
ಜಗದ ಮೋಹಕನೆ
ಪಖಗವರ ಗಮನನೆ ಅಗಣಿತ ಮಹಿಮನೆ |
ಜಗದೊಳು ನೀ ಬಹು ಮಿಗಿಲಾಗಿ |ಪರಿ||ಅ.ಪ||
ಒಬ್ಬಳ ಬಸಿರಿಂದಲಿ ಬಂದು-ಮ-|
ತ್ತೊಬ್ಬಳ ಕೈಯಿಂದಲಿ ಬೆಳೆದು ||
ಕೊಬ್ಬಿದ ಭೂಭಾರವನಿಳುಹಲು ಇಂಥ |
ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ ||1|||
ಮಗುವಾಗಿ ಪೂತಣಿ ಮೊಲೆಯ-ಉಂಡು |
ನಗುತಲವಳ ಅಸುವನೆ ಕೊಂಡು |
ಅಘಹರ ನೀ ಗೋಪಿಯೊಳು ಜನಿಸಿ ಇಂಥ |
ಸೊಗಸಿನ ಆಟಗಳೆಲ್ಲಿ ಕಲಿತೆಯೊ ||2||
ಲೋಕರಂತೆ ನೀ ಮಣ್ಣನು ತಿನಲು |
ತಾ ಕೋಪಿಸಿ ಜನನಿಯು ಬೇಗ ||
ಓಕರಿಸೆನ್ನಲು ಬಾಯೊಳು ಸಕಲ |
ಲೋಕವ ತೋರಿದುದೆಲ್ಲಿ ಕಲಿತೆಯೊ ||3||
ಮಡುವ ಧುಮುಕಿ ಕಾಳಿಂಗನ ಪಿಡಿದು |
ಪಡೆಯ ಮೇಲೆ ಕುಣಿದಾಡುತಿರೆ ||
ಮಡದಿಯರು ನಿನ್ನ ಬಿಡದೆ ಬೇಡಲು |
ಕಡುದಯೆದೋರಿದುದೆಲ್ಲಿ ಕಲಿತೆಯೊ ||4||
ಒಂದುಪಾದಭೂಮಿಯಲಿ ವ್ಯಾಪಿಸಿ ಮ-|
ತ್ತೊಂದುಪಾದಗಗನಕ್ಕಿಡಲು ||
ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |
ಬಂಧಿಸಿದಾಟಗಳೆಲ್ಲಿ ಕಲಿತೆಯೊ ||5||
ಭರದಿ ಭಸ್ಮಾಸುರ ವರವನು ಪಡೆದು |
ಹರನು ಶಿರದಿ ಕರವಿಡ ಬರಲು ||
ತರುಣಿರೂಪವ ತಾಳಿ ಉರಿಹಸ್ತದವನ |
ಮರುಳುಗೊಳಿಸಿದುದನೆಲ್ಲಿ ಕಲಿತೆಯೊ ||6||
ಜಗಕೆ ಮೂಲನೆಂದು ನಾಗರಾಜ ಕರೆಯೆ |
ಖಗವಾಹನನಾಗದೆ ನೀ ಬಂದು ||
ನಗುತ ನಗುತ ಆ ವಿಗಡನಕ್ರನ ಕೊಂದ |
ಹಗರಣದಾಟಗಳೆಲ್ಲಿ ಕಲಿತೆಯೊ ||7||
ವೇದಗಳರಸಿಯು ಕಾಣದ ಬ್ರಹ್ಮ ನೀ-|
ನಾದರದಲಿ ವಿದುರನ ಗೃಹದಿ ||
ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |
ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ ||8||
ಡಂಬಕಹಿರಣ್ಯಕಶಿಪು ಪ್ರಹ್ಲಾದನ |
ಹಂಬಲವಿಲ್ಲದೆ ಶಿಕ್ಷಿಸಲು ||
ಸ್ತಂಭದಿ ಭಕ್ತಗೆ ರೂಪವ ತೋರಿ |
ಸಂಭ್ರಮವಿತ್ತುದನೆಲ್ಲಿ ಕಲಿತೆಯೊ ||9||
ಚಕ್ರಧರನೆ ಜರಾತನಯನೊಂದಿಗೆ ಕಾದಿ |
ಸಿಕ್ಕಿ ಓಡಿದವನಿವನೆಂದೆನಿಸಿ ||
ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |
ಠಕ್ಕಿನಾಟಗಳನೆಲ್ಲಿ ಕಲಿತೆಯೊ ||10||
ಆ ಶಿರವಾತನ ತಂದೆಯ ಕರದೊಳು |
ಸೂಸುತ ರಕ್ತವ ಬೀಳುತಿರೆ ||
ಸೋಸಿ ನೋಡದೆ ರುಂಡ ಬಿಸುಡಲವನ ಶಿರ |
ಸಾಸಿರ ಮಾಡಿದುದೆಲ್ಲಿ ಕಲಿತೆಯೊ ||11||
ಪ್ರಾಣ ಸೆಳೆವನೀ ದಿನವೆಂದರ್ಜುನ |
ಧೇನಿಸದಲೆ ಸೈಂಧವಗೆನಲು ||
ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |
ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ ||12||
ಸರ್ಪನ ಬಾಣವು ಉರಿಯುತ ಬರಲು ಕಂ-|
ದರ್ಪನ ಪಿತ ನೀ ಕರುಣದಲಿ ||
ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |
ತೋರ್ಪಡಿಸಿದಾಟವೆಲ್ಲಿ ಕಲಿತೆಯೊ ||13||
ದುರುಳದುಃಶಾಸನ ದ್ರೌಪದಿ ಸೀರೆಯ |
ಕರದಿಂದ ಸಭೆಯೊಳು ಸೆಳೆಯುತಿರೆ ||
ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |
ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ ||14||
ಕುರುಪತಿ ಸಭೆಯೊಳು ಗುರುವಿನಿಂದಿರುತ |
ಸಿರಿಕೃಷ್ಣನು ಬರೆ ವಂದಿಸದೆ ||
ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |
ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ ||15||
ದುರಿಯೋಧನ ಪಾಂಡವರ ಶಿಕ್ಷಿಸಲು |
ಮೊರೆಯಿಡಲವನ ಮರುಳುಗೊಳಿಸಿ ||
ಧುರದೊಳುಪಾರ್ಥಗೆ ಸಾರಥಿಯಾಗಿ ನೀ |
ಕುರುಕುಲವಳಿದುದನೆಲ್ಲಿ ಕಲಿತೆಯೊ ||16||
ಪತಿಶಾಪದಿ ಶಿಲೆಯಾದ ಅಹಲ್ಯೆಯ |
ಹಿತದಿಂದವಳನು ಉದ್ಧರಿಸಿ ||
ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|
ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ ||17||
ಅಂಬರೀಷ ದ್ವಾದಶಿ ವ್ರತ ಸಾಧಿಸೆ |
ಡೊಂಬೆತನದಿದೂರ್ವಾಸಬರೆ ||
ಇಂದುಧರಾಂಶನು ರಾಜನ ಪೀಡಿಸ-|
ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ ||18||
ಕುಲಛಲಗಳನಳಿದ ಅಜಮಿಳ ಸರಸದಿ |
ಹೊಲತಿಯ ಕೂಡಿರೆ ಮರಣ ಬರೆ ||
ಬಲು ಮೋಹದ ಸುತ ನಾರಗನೊದರಲು |
ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ ||19||
ಬಡತನ ಪಾರ್ವನ ಬಿಡದೆ ಬಾಧಿಸಲು |
ಮಡದಿಯ ನುಡಿಕೇಳಿಆಕ್ಷಣದಿ ||
ಒಡೆಯ ನೀನವನೊಪ್ಪಿಡಿಯವಲನು ಕೊಂಡು |
ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ ||20||
ಎಂದೆಂದು ನಿನ್ನ ಗುಣವೃಂದಗಳೆಣಿಸಲು |
ಇಂದಿರೆಬೊಮ್ಮನಿಗಸದಳವು ||
ಮಂದರಧರಸಿರೆಪುರಂದರವಿಠಲನೆ |
ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ ||22||
********