Showing posts with label ರಾಘವೇಂದ್ರ ಸಲಹೋ ಗುಣಸಾಂದ್ರಾ ಭಗವದ್ಗೀತಾ vidyaratnakara teertha. Show all posts
Showing posts with label ರಾಘವೇಂದ್ರ ಸಲಹೋ ಗುಣಸಾಂದ್ರಾ ಭಗವದ್ಗೀತಾ vidyaratnakara teertha. Show all posts

Saturday, 1 May 2021

ರಾಘವೇಂದ್ರ ಸಲಹೋ ಗುಣಸಾಂದ್ರಾ ಭಗವದ್ಗೀತಾ vidyaratnakara teertha

 ರಾಗ : ಕಲ್ಯಾಣಿ ತಾಳ : ಆದಿ 


ರಾಘವೇಂದ್ರ ಸಲಹೋ -

ಗುಣಸಾಂದ್ರಾ  ।। ಪಲ್ಲವಿ ।।


ಭಗವದ್ಗೀತಾ ವಿವರಣ ತಂತ್ರದೀಪ ।

ನಿಗಮತತಿಗೆ ಖಂಡಾರ್ಥವ ರಚಿಸಿ ।

ಋಗಾರ್ಥಗಳನು ಅತಿ -

ಸ್ಫುಟವಾಗಿ ವಿವರಿಸಿ ।

ಖಗವಾಹನನ ತೋಷ -

ಪಡಿಸಿದ ಧೀರ ।। ಚರಣ ।।


ಧರಣಿ ದಿವಿಜರರಿಗೆ -

ವರಗಳ ಕೊಡುವಂಥ ।

ಸುರತರುವೆ ನಿನಗೆ -

ಕರಗಳ ಮುಗಿದು ।

ಪರಮ ಪುರುಷ ಹರಿ -

ಚರಣ ಕಮಲದಲಿ ।

ಸ್ಥಿರವಾದ ಭಕುತಿಯ -

ಬೇಡುವೆ ಧೀರ ।। ಚರಣ ।।


ಚಂಡ ಕುಮತಗಳ -

ಖಂಡಿಸಿ ಬುಧ ಜನ ।

ಮಂಡಲದೊಳಗೆ ಪ್ರ-

ಚಂಡನೆಂದೆನಿಸಿ ।

ಕುಂಡಲಿಶಯನನ ಪಾದ -

ಮಂಡಿತ ಹೃದಯ । ಭೂ ।

ಮಂಡಲದೊಳಗೆ ಆ-

ಖಂಡಲನಾದ  ।। ಚರಣ ।।


ಶ್ರದ್ಧೆಯಿಂದಲಿ ವರ ಮಧ್ವಾಚಾರ್ಯರ ಮತ ।

ಪದ್ಧತಿ ಬಿಡದಂತೆ ಮಾಡಿ ಬುದ್ಧಿಯನಿತ್ತು ।

ಉದ್ಧರಿಸಯ್ಯಾ ಕೃಪಾಬ್ಧಿಯೇ ಬುಧ । ಜನಾ ।

ರಾಧ್ಯ ಚರಣ ಪರಿಶುದ್ಧ ಚರಿತ್ರ ।। ಚರಣ ।।


ಕಾಮ ಜನಕನಾದ । 

ನಾಮಗಿರೀಶ್ವರ ।

ಸ್ವಾಮಿ ನೃಹರಿ ಪಾದ -

ತಾಮರಸಂಗಳ ।

ಪ್ರೇಮದಿ ಪೂಜಿಪೆನೆಂಬೋ -

ಕಾಮಿತವರ ನೀಡೋ ।

ಶ್ರೀಮತ್ಸುಧೀಂದ್ರ ಕರ -

ತಾಮರಸಭವನೇ  ।। ಚರಣ ।।

****