ಪುರಂದರದಾಸರು
ಶ್ರೀಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪ
ಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1
ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2
ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3
ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4
ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5
ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6
ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7
ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8
ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
*********