Showing posts with label ರಂಗ ಕೊಳಲನೂದುವ ಮಂಗಳಸ್ವರಕೆ pranesha vittala. Show all posts
Showing posts with label ರಂಗ ಕೊಳಲನೂದುವ ಮಂಗಳಸ್ವರಕೆ pranesha vittala. Show all posts

Saturday, 16 November 2019

ರಂಗ ಕೊಳಲನೂದುವ ಮಂಗಳಸ್ವರಕೆ ankita pranesha vittala

by ಪ್ರಾಣೇಶದಾಸರು
ರಂಗ ಕೊಳಲನೂದುವ ಮಂಗಳಸ್ವರಕೆ ಮೂಜ-ಗಂಗಳೂ ಮೋಹಿಸುತಿಹವಲ್ಲೇ ನೋಡೆ ಏ ಸಖಿ ಪ

ಗೋಕುಲದಂಗನೆಯರು ಮೈಮರೆದು ತಮ್ಮ ಮನೆ ಕದ |ಹಾಕದೇ ಹರಿಯೆಲ್ಲಿಹನೆಂದರಸುತ ಬಂದರು ||ಗೋ ಕರುವೇನೆಂದೊಬ್ಬಳು ಹಾಕುವಳೆತ್ತಿಗೆ ದಾಳಿ |ನೂಕು ನೂಕಾಗುತ್ತ ಹಲವಂಗನೆರೋಡಿದರು 1

ಕಣ್ಣಿಗೆ ಕುಂಕುಮ ಫಣಿಯಲ್ಲಿ ಕಾಡಿಗೆ ಕೆಲವರು |ಬಣ್ಣದ ಸೀರೆಯ ಮಂಡೆಗೆ ಸುತ್ತುತ್ತ ಕೆಲವರು ||ಚಿನ್ನಗೆ ಹಾಲೆರೆವೆವೆಂದು ಗಂಡರ ಪಿಡಿದು ಒಲ್ಲೆ- |ನೆನ್ನೆ ಕೇಳದಲೆ ನೆಲಕಿಕ್ಕುವರು ಕೆಲವರು 2

ಹರಿಯ ನೋಡುವ ಭರದಿಂದ ಆಕಳಿವೇಯೆಂದು |ಹರದೇರು ಅತ್ತೇರಿಗೆ ಕುಟ್ಟಿ ಕಣ್ಣಿಯಿಕ್ಕೊರು ||ಒರಲಿದರೆ ನಾವಾಕಳಲ್ಲವೆಂದು ಕೇಳದಲೆ |ತ್ವರದಿ ಮಾಧವನ ನೋಡಬೇಕೆಂದೋಡಿದರು 3

ಕಾಲಿಕೆಕಟ್ಟಾಣಿಆಣಿಮೆಂಟು ಪಿಲ್ಯಾ ಸರ ಮಾಡಿ |ಮಾಲೆಯೆಂದು ಹಾಕುವರು ಕೊರಳಿಗೆ ಕೆಲವರು ||ಹಾಲಿಗೆ ಮೂಗುತಿ ಕಾನ ಬಾವುಲಿ ಮೂಗಿಗೆ ತಮ್ಮ |ಬಾಲೆರೆಂದಾಕಳ ಕರುವೆತ್ತಿಕೊಂಡೋಡುವರು 4

ಹೇಳಿದರೆ ಮಾತುಕೇಳಿಕಳ್ಳ ಕೃಷ್ಣಾ ಸಿಕ್ಕೆಂದು ಮೈ |ಘಾಳಿಗೊಂಡಾಳುವರಾ ಕೈ ಕಂಭಕೆ ಕಟ್ಟುವರು ||ಕೀಲ ಕಂಕಣ ಬಾಗಿಲ ಬೀಗವೆಂಜೋಡಿಸಿ ಲಕ್ಷ್ಮೀ |ಲೋಲನಂಘ್ರಿಯ ಕಾಣಬೇಕೆಂದೆಲ್ಲರು ಓಡಿದರು 5

ಎಲೆ ಯಶೋದೆಯಮ್ಮ ನಿನ್ನ ಮಗ ಮೊನ್ನೆ ನಿಶಿಯಲ್ಲಿ |ಮಲಗಂಟು ಬಿಚ್ಚಿ ಒಲ್ಲೆನೆನ್ನೆ ಕೇಳಾ ಥರವೆ ||ಬಲು ಶಬ್ದೆನೆಂದು ಕೇಳಲತ್ತೆಗೊಂದು ಪರಿಯಿಂದ |ತಿಳಿಸಿದೆನೆಂದೊಬ್ಬಳು ಅತ್ತೆಯ ಮುಂದೆ ಹೇಳುವಳು 6

ಬೀದಿಯೊಳ್ ಹೇಳಿದಂತೆ ನಮ್ಮನಿಗೆ ಬಾಯೆಂದೊಬ್ಬಳು |ಮಾಧವನಿವನೆಂದು ತನ್ನ ಪುರುಷಘೇಳುವಳು ||ಆ ದಿನ ನಾವೇಕತ್ರದಲ್ಲಿರೆಗಂಡಬರಲು ಸ್ತ್ರೀ |-ಯಾದಿ ಸೈ ಸೈಯೆಂದೊಬ್ಬಳು ಪತಿಗೇ ಪೇಳುವಳು7

ಬತ್ತಲೆ ಕೆಲವರು ಸೀರ್ಯುಟ್ಟವರ್ಕೆಲವರು ಉ- |ನ್ಮತ್ತರು ಕೆಲವರು ಪಾಡುತ್ತಲಿ ಕೆಲವರು ||ನೆತ್ತಿಹಿಕ್ಕುವರು ಕೆಲವರು ಹೂಸಿಕೊಂಡವರು |ತುತ್ತು ಬಾಯೊಳಿಟ್ಟವರೂ ತ್ವರದಿ ಓಡಿದರು 8

ಒಂದಾಡುತೊಂದಾಡುವರುನಿಂದುನಿಂದಾಲಿಸುವರು |ಮಂದಿಗಂಜದಲೆ ಹರಿದು ಹರಿದು ಹೋಗುವರು ||ಕಂದಗಳೆತ್ತಿದವರು ಕರುಗಳೆತ್ತಿದವರು |ಚಂದಿರ ವದನೆಯರು ತವಕದಿ ಓಡುವರು 9

ಹೆಂಣುಗಳಾ ಆವಾವ ಕೆಲಸದೊಳಿದ್ದಿರ್ಯಾ ಹ್ಯಾಂಗೆ |ಬನ್ನಿರೆನ್ನ ಬಳಿಗೆಂಬಂತೆವೇಣುಕೇಳಿಸುವುದು ||ಪನ್ನಗಶಯನನಾಜೆÕಯಂತೆ ಪ್ರವರ್ತಿಸಿದ ಮೇಲೆ |ಅನ್ಯಾಯವೇ ಸತಿಯರದು ಕೇಳಿರಿ ಕವಿಗಳು 10

ಕರಿಸಿಂಹಗಳು ಹುಲಿತುರುತುರುಗಮಹಿಷಿ|ಮರೆದು ವೈರತ್ವ ಹರಿಸ್ವರ ಕೇಳುತಿಹವು ||ಕರಗುತಿಹವು ಕಲ್ಲು, ಸುರರಾಕಾಶದಿ ಪುಷ್ಪ |ಸುರಿಸುತಿಹರು, ಗಂಧರ್ವರು ಪಾಡುತಿಹರು11

ಅಂಬುಜಾಕ್ಷಗೆ ಕೆಲವಂಗನೆರು ಆಲಿಂಗಿಸುವರು |ಚುಂಬಿಸುವರು ಕೆಲವರುನಿಂದುಪ್ರಾರ್ಥಿಸುವರು ||ಶಂಬುಪಾಣಿ ಕರುಣಿಸಿ ಇಬ್ಬರಿಗೊಬ್ಬೊಬ್ಬನಾಗಿ |ಹಂಬಲ ಪೂರೈಸುವಂತೆ ರಾಸಕ್ರೀಡೆಯಾಡಲು 12

ಕಾಮನಾ ಪೂರ್ತಿ ಮಾಡುತಿರೆ ಹೆಂಗಳೆರು ಇಂಥ |ಸ್ವಾಮಿಯಮ್ಮ ಕೈ ಸೇರಿದ ನೋಡಿರೆಂದ್ಯೋಚಿಸಲು ||ಭಾಮಿನಿಯರಹಂಕಾರ ತಿಳಿದಾಕ್ಷಣವೊಬ್ಬಳ |ಪ್ರೇಮದಿ ಕೊಂಡೊಯ್ದು ಎಲ್ಲರಿಗೆ ಮಾಯವಾದನು13

ಬಹುರೂಪದೊಳೊಮ್ಮಿಂದ ಒಮ್ಮೆ ಬಂದೂ ರೂಪವಿಲ್ಲ |ಮಹೀಪಾಲನೇನಾದನೋ ಆವಳನ ಕೊಂಡೊಯ್ದನು ||ಅಹಿವೇಣಿಯರೇ ನಿಮ್ಮ ನಿಮ್ಮ ಗುಂಪಿನೊಳಗೆ ಎ- |ಷ್ಟಿಹಿರೊ ನಾರೆರು ಎಣಿಸಿರೆ ಯಂದಾಳೊಬ್ಬಳು 14

ಒಂದೆರಡು ನೂರಿನ್ನೂರೈನೂರು ಸಾವಿರೆಂದೆಣಿಸಿ |ಮಂದಗಮನೆಯೊಬ್ಬಳಿಲ್ಲವಮ್ಮ ನಮ್ಮೊಳೆಂದರು ||ಇಂದ್ರಜಾಲದವಳೇ ಆವನು ಅಂಥ ವಂಚಕನೆ |ಸಂಧಿಸಿತಿಬ್ಬರಿಗೆ ಮುಂದೇನುಪಾಯವೆಂದರು 15

ಹರಿಹೋದಕಷ್ಟೊಂದು ಅವಳ ನಾ ವೈದ ದುಃಖೊಂದು |ಸ್ಮರಣೆದಪ್ಪಿ ಗಂಡರೊಡನೆ ಆಡಿದ್ದೊಂದು ||ಸ್ಮರನ ಬಾಣ ಬಾಧೆಯೊಂದು ಬೆರದಿತಿನಿತುಕ್ಲೇಶ|ಹರದೆರಚ್ಯುತನರಸುತವನಹೊಕ್ಕರು 16

ಹರಿಒಬ್ಬಳ ಒಯ್ದನು ಕಂಡಿರಾ ಯಿದ್ದಿರ್ಯಾ ಎಂದು |ನರರೆಂಬೊ ಭ್ರಾಂತಿಯಿಂದ ಮರನ ಕೇಳುವರು ||ಸ್ಮರಣೆ ಬಂದಾಗ ವಮ್ಮೆ ಗಿಡ ಕೇಳುತಿಹವೆಲ್ಲೆ |ಹರಿಹರಿ! ಜೀವಿಸುವದೆಂತು ಹೇಳಿರೆಂಬೊರು 17

ಅತ್ತ ಎಲ್ಲರ ವಂಚಿಸಿ ಯನ್ನ ರೂಪಾಧಿಕ ನೋಡಿ |ಎತ್ತಿಕೊಂಡು ಬಂದ ರಂಗನೆಂಬೊಳಾಕಿ ಮುದದಿ ||ಸತ್ಯ ಸಂಕಲ್ಪವಳ ಮನತಿಳಿದು ತಿಳಿಯದಂತೆ |ತೊತ್ತಿಗ ನಂದದಿ ಹೆಗಲೊಳಗಿಟ್ಟು ಪೋಗಲು 18

ದಣಿದೆ ಹಸಿದೆ ನೀರಡಸಿದೆನೆಂದರವಳ |ಅಣುಗನಂದದಿಂದಿಳಿಸೇರಿಸಿ ಕೊಂಬುವನು ||ಗೊನೆ ಹಣ್ಣು ನಿಲಕದೆಂದರೆ ನೀಡಿ ಕೊಡುತಲಿ |ಘನಸುಖ ಬಡಿಸುತ ದಕ್ಕಿದಂತಿರುವನು 19

ಸಾವಿರ ಪ್ರಕಾರಾ ಘೋರಿಸಿದರೂ ನಗುತಲೆ ಇಹ |ಕೇವಲ ದಕ್ಕಿದನೆಂದು ನಿಶ್ಚಯ ತಿಳಿದಳು ||ಮಾವಿರಿಂಚೇಶ ಜಂಭಾರಿಗಳನು ವಂಚಿಸುವಂಥ |ದೇವನು ಈ ನಾರಿ ಅಹಂಕಾರವ ತಾಳುವನೆ20

ಸೊಕ್ಕು ಬಂತಿವಳಿಗಿನ್ನು ಶೀಘ್ರ ತಗ್ಗಿಸಬೇಕೆಂದು |ಚೊಕ್ಕ ಮಾವು ಪಿಡಿಸಿ ಅಪ್ರತ್ಯಕ್ಷವಾಗಲಿತ್ತಲು ||ತುಕ್ಕಿ ತುಕ್ಕ್ಯಾರಂಣ್ಯಾ ಹೆಜ್ಜೆ ಪಿಡಿದಿಲ್ಲಿಹ ಅಲ್ಲಿಹ |ರಕ್ಕಸಾರೆನುತ ಬಂದೆಲ್ಲರವಳನು ಕಂಡರು 21

ಜಾರೆ ಚೋರೆ ಕುಲ್ಲೆ ಖೂಳೆ ಕುಲಕಂಟಿಕೆನವನೀತ|ಚೋರನೆಲ್ಲಡಗಿಸಿದ್ದೆ ತೋರೆಲೆ ತೋರೆಂದರು ||ಘೋರಪಾತಕಿಯ ಕುಟ್ಟಿರೆಂದು ಕೆನ್ನಿ ಕುಟ್ಟುವರು |ಗಾರುಮಾಡಿದರೆ ಬಟ್ಟಬವಣೆಹೇಳಿದಳು22

ಸಮದುಃಖಿಗಳಾಗಿಹರಿಹರಿಯೆಂದೊದರಲು ಈ |ಶ್ರಮ ನೋಡಿ ಪ್ರಾಣೇಶ ವಿಠಲ ಬಂದಾಲಿಂಗಿಸಿ ||ಸುಮನಗಂಧಿಯರೆ ನಿಮ್ಮಹಂಕಾರ ಬಿಡಿರೆಂದು |ಅಮರೇಶಮುಂಚಿನಂತೆಲ್ಲರೊಳಾಡಿದನು 23
*******