Showing posts with label ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ purandara vittala KANDE TIRUPATI VENKATESHANA KAARANAATMAKA. Show all posts
Showing posts with label ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ purandara vittala KANDE TIRUPATI VENKATESHANA KAARANAATMAKA. Show all posts

Saturday, 4 December 2021

ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ purandara vittala KANDE TIRUPATI VENKATESHANA KAARANAATMAKA

raga mukhari


ಪುರಂದರದಾಸರು

ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥವನೀವ ದೇವನ ಕರುಣ
ನಿಧಿಯೆಂದೆನಿಸಿ ಮೆರೆವನ ಪ

ಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು
ನೋಟಕ್ಕಚ್ಚರಿಯೆನಿಪ ನಗೆಮೊಗ
ನೊಸಲೊಳಗೆ ತಿರುಮಣಿಯ ಕಂಡೆನು
ಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನು
ಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ 1

ತಪ್ಪುಗಾಣಿಕೆ ಕಪ್ಪುಗಳನು ಸಪ್ತಲೋಕಗಳಿಂದ ತರಿಸುವ
ಉಪ್ಪು ವೋಗರವನ್ನು ಮಾರಿಸಿ
ಉಚಿತದಿಂದಲಿ ಹಣವ ಗಳಿಸುವ ||
ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದ
ಕ್ರಯ ಮಾಡಿ ಕೊಡಿಸುವ
ಸರ್ಪಶಯನನ ಸಾರ್ವಭೌಮನ ಅಪ್ಪ
ವೆಂಕಟರಮಣನಂಘ್ರಿಯ 2

ಉರದಿ ಶ್ರೀದೇವಿ ಇರಲು ಕಂಡೆನು
ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರ ನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||
ತರತರದಿ ಭಕ್ತರಿಗೆ ವರಗಳ ಕರೆದು
ಕೊಡುವುದ ನಾನು ಕಂಡೆನು
ಶರಧಿಶಯನನ ಶೇಷಗಿರಿವರ ಸಿರಿ ಪುರಂದರ ವಿಠಲನಂಘ್ರಿಯ 3
***

ಕಂಡೆ ತಿರುಪತಿ ವೆಂಕಟೇಶನಕಾರಣಾತ್ಮಕಸಾರ್ವಭೌಮನಕಾಮಿತಾರ್ಥವನೀವ ದೇವನ ಕರುಣನಿಧಿಯೆಂದೆನಿಸಿ ಮೆರೆವನ ಪ

ಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನುನೋಟಕ್ಕಚ್ಚರಿಯೆನಿಪ ನಗೆಮೊಗನೊಸಲೊಳಗೆ ತಿರುಮಣಿಯ ಕಂಡೆನುಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನುಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ 1

ತಪ್ಪುಗಾಣಿಕೆ ಕಪ್ಪುಗಳನು ಸಪ್ತಲೋಕಗಳಿಂದ ತರಿಸುವಉಪ್ಪು ವೋಗರವನ್ನು ಮಾರಿಸಿಉಚಿತದಿಂದಲಿ ಹಣವ ಗಳಿಸುವ ||ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದಕ್ರಯ ಮಾಡಿ ಕೊಡಿಸುವಸರ್ಪಶಯನನ ಸಾರ್ವಭೌಮನ ಅಪ್ಪವೆಂಕಟರಮಣನಂಘ್ರಿಯ 2

ಉರದಿ ಶ್ರೀದೇವಿ ಇರಲು ಕಂಡೆನುಉನ್ನತದ ಕೌಸ್ತುಭವ ಕಂಡೆನುಗರುಡಕಿನ್ನರನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||ತರತರದಿ ಭಕ್ತರಿಗೆ ವರಗಳ ಕರೆದುಕೊಡುವುದ ನಾನು ಕಂಡೆನುಶರಧಿಶಯನನ ಶೇಷಗಿರಿವರಸಿರಿಪುರಂದರವಿಠಲನಂಘ್ರಿಯ3
*******