Showing posts with label ಇದೇ ಸುಪಥನೋಡಿ ಸ್ವಹಿತ ಸಾಧು ಜನರ ಸುಸನ್ಮತ mahipati. Show all posts
Showing posts with label ಇದೇ ಸುಪಥನೋಡಿ ಸ್ವಹಿತ ಸಾಧು ಜನರ ಸುಸನ್ಮತ mahipati. Show all posts

Thursday, 2 September 2021

ಇದೇ ಸುಪಥನೋಡಿ ಸ್ವಹಿತ ಸಾಧು ಜನರ ಸುಸನ್ಮತ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇದೇ ಸುಪಥನೋಡಿ ಸ್ವಹಿತ ಸಾಧು ಜನರ ಸುಸನ್ಮತ ವೇದಾಂತದ ಸುಸಾರಬೋಧವ್ಹೇಳಿದ ವಸ್ತು ಭಗವದ್ಗೀತಾ ಸಂದಿಸೀಹ್ಯದÀು ಸದೋದಿತ ಭೇದಿಸಿ ನೋಡಲು ತನ್ನೊಳಗ ತಾಂ ದೋರುತಿದೆ ಸಿದ್ದಾಂತ 1 
ಮಮೈವಾಂಶೋ ಜೀವಲೋಕೇ ಜೀವಭೂತ ಸನಾತನ ಃ ಸ್ವಾಮಿ ಹೇಳಿದ್ದ ತಿಳಿಯಲಿಕ್ಕೆ ಆತ್ಮಾನುಸಂಧಾನದ ಖೂನ ನೇಮದಿಂದಲಿ ಹೇಳಿದ ಮಾತಿಗೆ ಮುಟ್ಟಿದನೊಬ್ಬರ್ಜುನ ತುಂಬೇದ ವಿಶ್ವದಿ ಪರಿಪೂರ್ಣ 2 
ಏಕಾಂಶೇನ ಸ್ಥಿತೋ ಜಗತ ವೆಂಬ ವಾಕ್ಯದನುಭವ ಸೇವಿಸಿದೊಬ್ಬ ಶುಕದೇವ ನಾಲ್ಕುಶೂನ್ಯವು ಮೆಟ್ಟಿನೋಡಲು ಭಾಸುತಿದೆ ಸುಮನದೈವ ತಾನಾಗೀ ಹ್ಯದು ಜೀವ 3 
ಜಾನಾತಿ ಪುರುಷೋತ್ತಮಂ ಮನುಷ್ಯರೊಳಗಧಮಾಧಮಾ ಕ್ರಮತಿಳಿದವನೆ ಪರಮಯೋಗಿ ಆತನೇ ಉತ್ತಮೋತ್ತಮಾ ತಾಂ ಕೇಳಿ ನಿಜಾಧ್ಯಾತ್ಮಾ 4 `
 ಹರಿ ಃ ಓಂ ತತ್ಸದಿತಿ ' ವೆಂಬ ನಿಜ ತಿಳಯಬೇಕಿದೆ ಮುಖ್ಯ ಏಳುನೂರು ಶ್ಲೋಕದವಾಕ್ಯ ತ್ವರ ತಾಂ ತಿಳಿಯದು ಒಂದೇ ಮಾತಿನ ಬ್ರಹ್ಮಾದಿಕರಿಗಾಟಕ್ಯ ತರಳಮಹಿಪತಿಗಿದೆ ಸೌಖ್ಯ 5
***