Showing posts with label ಏಳಮ್ಮ ಕೊಲ್ಲಾಪುರಧೀಶೆ ಇನ್ನೂ ಭಾಳ ಹೊತ್ತಾಯಿತು gopalakrishna vittala. Show all posts
Showing posts with label ಏಳಮ್ಮ ಕೊಲ್ಲಾಪುರಧೀಶೆ ಇನ್ನೂ ಭಾಳ ಹೊತ್ತಾಯಿತು gopalakrishna vittala. Show all posts

Sunday, 1 August 2021

ಏಳಮ್ಮ ಕೊಲ್ಲಾಪುರಧೀಶೆ ಇನ್ನೂ ಭಾಳ ಹೊತ್ತಾಯಿತು ankita gopalakrishna vittala

ಏಳಮ್ಮ ಕೊಲ್ಲಾಪುರಧೀಶೆ | ಇನ್ನೂ

ಭಾಳ ಹೊತ್ತಾಯಿತು ವೈಕುಂಠವಾಸೆ ಪ.


ಸೃಷ್ಟಿಸೆಂದೆನುತ ಆಂಬ್ರಣಿರೂಪದಿಂದ್ಹರಿ

ಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕು

ಅಷ್ಟ ಭುಜದ ಲಕುಮಿ ಪ್ರಕೃತಿರೂಪಿಣಿಯಾಗಿ

ಸೃಷ್ಟಿಕಾರ್ಯಕೆ ಅನುವಾಗಬೇಕು 1

ಸಕಲ ದೇವತೆಗಳ ಸೃಷ್ಟಿ ಮಾಡಲಿಬೇಕು

ಮುಕುತಿಯೋಗ್ಯರ ಸೇವೆ ಕೊಳ್ಳಬೇಕು

ಸಕಲರೂಪದಲಿ ಶ್ರೀಹರಿಯ ಸೇವಿಸಬೇಕು

ಅಕಳಂಕÉ ಆದಿದೇವತೆ ಎನಿಸಬೇಕು 2

ಶ್ರೀ ಪದ್ಮಭವೆ ವೆಂಕಟೇಶನ ಕೂಡುತ

ನೀ ಪರಿಪರಿ ಲೀಲೆಗೈಯ್ಯಬೇಕು

ಗೋಪಾಲಕೃಷ್ಣವಿಠ್ಠಲನ ವಕ್ಷಸ್ಥಳ

ವ್ಯಾಪಿಸಿ ಭಕ್ತರ ಕಾಪಾಡಬೇಕು 3

****