sung as neleyadikeshava ankita
ರಾಗ ಕಾಂಭೋಜ. ಝಂಪೆ ತಾಳ
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು ||ಪ||
ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು
ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು
ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ||
ಹರಿಯ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿಕಥಾಮೃತವೆನ್ನ ಕಿವಿಯೊಳಾಯ್ತು
ಹರಿದಾಸರು ಎನ್ನ ಬಂಧುಬಳಗಾಯಿತು
ಹರಿಮುದ್ರೆ ಎನಗಾಭರಣವಾಯಿತು ||
ಹಿಂದೆನ್ನ ಸಂತತಿಗೆ ಸಕಲ ಸಾಧನವಾಯ್ತು
ಮುಂದೆನ್ನ ಜನ್ಮವು ಸಫಲವಾಯ್ತು
ತಂದೆ ಪುರಂದರವಿಠಲನೆಂದೆಂಬ ಪರದೈವ
ಬಂದು ಹೃದಯದಲಿ ನೆಲೆಯಾಗಿ ನಿಂತ ||
***
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು ||ಪ||
ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು
ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು
ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ||
ಹರಿಯ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿಕಥಾಮೃತವೆನ್ನ ಕಿವಿಯೊಳಾಯ್ತು
ಹರಿದಾಸರು ಎನ್ನ ಬಂಧುಬಳಗಾಯಿತು
ಹರಿಮುದ್ರೆ ಎನಗಾಭರಣವಾಯಿತು ||
ಹಿಂದೆನ್ನ ಸಂತತಿಗೆ ಸಕಲ ಸಾಧನವಾಯ್ತು
ಮುಂದೆನ್ನ ಜನ್ಮವು ಸಫಲವಾಯ್ತು
ತಂದೆ ಪುರಂದರವಿಠಲನೆಂದೆಂಬ ಪರದೈವ
ಬಂದು ಹೃದಯದಲಿ ನೆಲೆಯಾಗಿ ನಿಂತ ||
***
ರಾಗ : ಚಾರುಕೇಶಿ ತಾಳ : ಖಂಡಛಾಪು
Badukidenu badukidenu Bavavenage hingitu
Padumanabana padadolume enagayitu ||pa||
Muktaradaru enna nurondu kuladavaru
Mukti margake yogya nanadenu
Muktidayakana Baktige manavu nelesitu
Vyaktavayitu naligeyolu harinama ||1||
Hariya tirtha prasadavindenage dorakitu
Harikathamrutavenna kivigodagito
Haridasaru enna bamdhu balagadaru
Harimudre enagabaranavayitu ||2||
Hindenna samtatige sakala sadhanavayitu
Mundenna janmavu sapalavayitu
Tande purandara vithalanemdemba paradaiva
Bandu hrudayadali neleyagi nimta ||3||
***
pallavi
badukidenu bdukidenu bhavavenage hingidu padumanAbhana pADadolume enagAyitu
caraNam 1
muktarAdaru enna nUrondu kuladavaru mukti mArgake yOgya nAnAdenu
mukyi dAyakana bhaktige manavu vyaktavAyitu nAligeyoLu harinAma
caraNam 2
hariya tIrtta prasAdavindenage dorakitu hari kathAmrtavenna kiviyoLAitu
haridAsaru enna bandhu baLagAyitu harimudre enagAbharaNavAyitu
caraNam 3
hindenna santatige sakala sAdhanavAitu mundenna janmavu saphalavAitu
tande purandara viTTalanendemba paradaiva bandu hrdayadali neleyAgi ninta
***
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು ||ಪ||
ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು
ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು
ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ||೧||
ಹರಿಯ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿಕಥಾಮೃತವೆನ್ನ ಕಿವಿಗೊದಗಿತೋ
ಹರಿದಾಸರು ಎನ್ನ ಬಂಧು ಬಳಗಾದರು
ಹರಿಮುದ್ರೆ ಎನಗಾಭರಣವಾಯಿತು ||೨||
ಹಿಂದೆನ್ನ ಸಂತತಿಗೆ ಸಕಲ ಸಾಧನವಾಯಿತು
ಮುಂದೆನ್ನ ಜನ್ಮವು ಸಫಲವಾಯಿತು
ತಂದೆ ಪುರಂದರ ವಿಠಲನೆಂದೆಂಬ ಪರದೈವ
ಬಂದು ಹೃದಯದಲಿ ನೆಲೆಯಾಗಿ ನಿಂತ ||೩||
*************
ಪುರಂದರದಾಸರು
ಬದುಕಿದೆನು ಬದುಕಿದೆನು ಭವದುರಿತ ಹಿಂಗಿತುಪದುಮನಾಭನ ಪಾದದೊಲಿಮೆ ಎನಗಾಯಿತು ಪ
ಹರಿಯ ತೀರ್ಥ ಪ್ರಸಾದವು ಎನಗೆ ದೊರೆಕಿತು |
ಹರಿಕಥಾಮೃತವೆನ್ನ ಕಿವಿಗೊದಗಿತು ||
ಹರಿದಾಸರುಗಳೆನ್ನ ಬಂಧು ಬಳಗವಾದರು |
ಹರಿಯ ಶ್ರೀ ಮುದ್ರೆಯೆನಗೆ ಆಭರಣವಾಯ್ತು 1
ಮುಕ್ತರಾದರು ಎನ್ನ ನೂರೊಂದು ಕುಲದವರು |
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ||
ಸುಕೃತಿದೇಹಕ್ಕೆನ್ನ ಮನವು ತಾನೆಳಸಿತ್ತು |
ಅಕಳಂಕ ಹರಿನಾಮ ದಿವ್ಯಕೊದಗಿತ್ತು 2
ಇಂದೆನ್ನ ಸಂತತಿಗೆ ಸಕಲ ಸಂಪದವಾಯ್ತು |
ಮುಂದೆನ್ನ ಜನ್ನ ಸಾಫಲ್ಯವಾಯ್ತು ||
ತಂದೆ ಶ್ರೀಹರಿಪುರಂದರವಿಠಲ ರಾಯನೇ |
ಬಂದೆನ್ನ ಹೃದಯದೊಳು ನೆಲೆಯಾಗಿ ನಿಂತ 3
***