Showing posts with label ಮನೆಯಿಂದ ಸಂತೋಷ ಕೆಲವರಿಗೆ gopala vittala. Show all posts
Showing posts with label ಮನೆಯಿಂದ ಸಂತೋಷ ಕೆಲವರಿಗೆ gopala vittala. Show all posts

Thursday, 12 December 2019

ಮನೆಯಿಂದ ಸಂತೋಷ ಕೆಲವರಿಗೆ gopala vittala

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲಿ
ವನಿತೆಯಿಂ ಸಂತೋಷ ಕೆಲವರಿಗೆ ಲೋಕದಲಿ
ತನಯರಿಂ ಸಂತೋಷ ಕೆಲವರಿಗೆ ಲೋಕದಲಿ
ಇನಿತು ಸಂತೋಷ ಅವರವರಿಗಾಗಲಿ ||2||
ನಿನ್ನ ನೆನೆವೋ ಸಂತೋಷ ಎನಗಾಗಲಿ||2||
ನಮ್ಮ ರಂಗವಿಠಲಾ||3||

ಮನೆಯ ಕಟ್ಟುವರುಂಟು 
ಮಡದಿ ಮಕ್ಕಳು ಉಂಟು
ಧನವಗಳಿಸುವರುಂಟು 
ಗಳಿಸದಿದ್ದವರುಂಟು
                              ||ಮನೆಯ||
ಧನವ ಕಟ್ಟುವರುಂಟು 
ದಾನಮಾಡುವರುಂಟು||ಧನವ||
ಋಣವ ಕೊಟ್ಟವರುಂಟು 
ಋಣ ಮಾಡಿದವರುಂಟು||ಋಣವ||

ಮನೆಗಾರ ತಣವಿದರೊಳು ಎಂದಿಗು ಬೇಡ||2||
ಮುನಿಗಳು ಸಹಿತಾಗಿ 
ಮೋಸಹೋದರು ಇದಕೆ||ಮುನಿ||

ಗುಣಪೂರ್ವಚೆಲ್ವ ಗೋಪಾಲವಿಠ್ಠಲ ನಿನ್ನ||2||
ಗುಣಚಿಂತನೆಯೊಳಿಡು ಇಷ್ಟೇ ಸಾಕು||2||
ಇಷ್ಟೇ ಸಾಕು...||3||
********