..
ಎಂಥ ಸೊಗಸು ನೋಡ
ಚಿಂತಾಮಣಿಯು ಬಂದ
ಇನ್ನೆಂತಹದೆ ಮುಯ್ಯ ಹರಿಣಾಕ್ಷಿ
ಬಂದು ಎಂಥ ಸೊಗಸಿಲೆ ಕುಳಿತಾರೆ ಪ.
ಕುಂತಿ ಅರಮನೆಯೊಳು ಕಾಂತೆರುಕ್ಮಿಣಿ ಭಾವೆ
ಚಂದ್ರ ಕಾಂತಿಯಿಂದೊಪ್ಪ್ಪುತ ಕುಳಿತಾರೆ
ಕಾಂತಿಯಿಂದೊಪ್ಪುತ ಕುಳಿತಾರೆ ಪಾಂಡವರ
ಎಂಥ ಸುಕೃತವು ಫಲಿಸಿತು 1
ಛತ್ರ ಹಿಡಿದವರೆಷ್ಟು ಚಾಮರ ಬೀಸುವರೆಷ್ಟು
ನರ್ತನ ಮಾಡುವವರೆಷ್ಟು
ನರ್ತನ ಮಾಡುವವರೆಷ್ಟು ಸಭೆಯೊಳು
ಕೀರ್ತನ ಮಾಡುವವರೆಷ್ಟು 2
ಗಾಳಿ ಬೀಸುವವರೆಷ್ಟು ಬಹಳೇ ಹೊಗಳುವರೆಷ್ಟು
ಕೇಳೋ ರಾಮೇಶನ ಮಡದಿಯರ
ಕೇಳೋ ರಾಮೇಶನ ಮಡದಿಯರ ಮುಂದೆ ನಿಂತು ಹೇಳಿ ಕೊಂಬುವವರೆಷ್ಟು3
****