ಮಧ್ವಾಂತರ್ಗತ ಬಾರೋ ಶುದ್ಧಮೂರುತಿ ಬಾರೋ
ವ್ಯಾಸೇಂದ್ರ ವಿದ್ಯೆಯನಿತ್ತು ಭಯಭಂಗ ಮಾಡು ಬಾರೋ ll ಪ ll
ಪೂರ್ಣಗುಣರನ್ನ ಬಾರೋ ಸರ್ವಶಬ್ದಗೇಯ ಬಾರೋ
ಅ-ನಿರುದ್ಧಶಬ್ದಾನ್ವಯ ದೋಷಗಂಧದೂರ ಬಾರೋ ll 1 ll
ವಿ-ರಾಗದಿ ಧ್ಯಾನಿಪಗೆ ನಿಜಬಿಂಬದರ್ಶಿ ಬಾರೋ
ಕರ್ಮ-ಲಿಂಗಮೋಚಕ ಬಾರೋ ನಿಜಾನಂದಭೋಜಕ ಬಾರೋ ll 2 ll
ಆದರದಿ ಈ ಸೂತ್ರಾರ್ಥವ ಮಥಿಸುವ ಸೂರಿಗಳಿಗೆ
ವಿದ್ಯೇಶವಿಟ್ಠಲ ಕೃಷ್ಣ ನಿತ್ಯಾನಂದಭೋಜನದಾತ ll 3 ll
***