Tuesday, 13 April 2021

ಮಧ್ವಾಂತರ್ಗತ ಬಾರೋ ಶುದ್ಧಮೂರುತಿ ankita vidyesha vittala

 

ಮಧ್ವಾಂತರ್ಗತ ಬಾರೋ ಶುದ್ಧಮೂರುತಿ ಬಾರೋ 

ವ್ಯಾಸೇಂದ್ರ ವಿದ್ಯೆಯನಿತ್ತು ಭಯಭಂಗ ಮಾಡು ಬಾರೋ ll ಪ ll


ಪೂರ್ಣಗುಣರನ್ನ ಬಾರೋ ಸರ್ವಶಬ್ದಗೇಯ ಬಾರೋ

ಅ-ನಿರುದ್ಧಶಬ್ದಾನ್ವಯ ದೋಷಗಂಧದೂರ ಬಾರೋ ll 1 ll


ವಿ-ರಾಗದಿ ಧ್ಯಾನಿಪಗೆ ನಿಜಬಿಂಬದರ್ಶಿ ಬಾರೋ 

ಕರ್ಮ-ಲಿಂಗಮೋಚಕ ಬಾರೋ ನಿಜಾನಂದಭೋಜಕ ಬಾರೋ ll 2 ll


ಆದರದಿ ಈ ಸೂತ್ರಾರ್ಥವ ಮಥಿಸುವ ಸೂರಿಗಳಿಗೆ

ವಿದ್ಯೇಶವಿಟ್ಠಲ ಕೃಷ್ಣ ನಿತ್ಯಾನಂದಭೋಜನದಾತ ll 3 ll

***

No comments:

Post a Comment