Tuesday, 13 April 2021

ವಲಿದು ಮೊರಿಯಾ ಲಾಲಿಸೊ ankita tandegopala vittala

ವಲಿದು ಮೊರಿಯಾ ಲಾಲಿಸೊ l

ಅಲವ ಬೋಧರಾ ಹೃದಯಾ ಜಲಜವಾಸ ಕೃಷ್ಣ ll ಪ ll 


ದುರಿತಾದ್ರಿಕುಲಿಶಾ ಸುಂದರಾ ಸುಮಂಗಳಕರಾ l

ತರುಳಾ ಪ್ರಹ್ಲಾದಪಾಲಾ l

ಹರಿಯೆ ನಿನ್ನವರಾನೀಪರಿ ಬನ್ನಾ ಬಡಿಪಾರೆ l

ಶರಣಾರ  ಭಯವೆಂಬಾ ಕರಿಗೆ ಹರಿಯಕ್ಷಾ ll 1 ll


ದೋಷಾದೂರನೇ ನಿನ್ನಾದಾಸಾರು ಅನ್ಯರಾ l

ಯಾಸ ಸೈರಿಸಲಾರದೇ l

ಶ್ರೀಶಾ ನಿನ್ನಾಜ್ಞದಿ ಲೇಸು ಮಾಡಲು ನೀ ಆ l

ದೋಷಾವೆಣಿಸಿ ಈಗಾ ಘಾಸೆ ಬಡಿಸುವಾರೆ ll 2 ll


ಪನ್ನಗಾದ್ರಿನಿಲಯಾ ಅನಿಮಿತ್ತ ಬಂಧೋ l

ಮನ್ನಿಸೆನ್ನ ಬಿನ್ನಪಾ ll

ಧನ್ವಂತ್ರಿಯೆ ತಂದೆಗೋಪಾಲವಿಟ್ಠಲ l

ನಿನ್ನವರವನೆಂದು ಎನ್ನಾ ಕರವಾ ಪಿಡಿಯೊ ll 3 ll

***

No comments:

Post a Comment