Showing posts with label ಪರಮ ಸಂಜೀವನವು ಗುರು ನಿಮ್ಮ ನಾಮ mahipati. Show all posts
Showing posts with label ಪರಮ ಸಂಜೀವನವು ಗುರು ನಿಮ್ಮ ನಾಮ mahipati. Show all posts

Wednesday, 11 December 2019

ಪರಮ ಸಂಜೀವನವು ಗುರು ನಿಮ್ಮ ನಾಮ ankita mahipati

by ಮಹೀಪತಿದಾಸರು
ತಿಲಕಕಾಂಬೋದ ರಾಗ ಝಂಪೆತಾಳ

ಪರಮ ಸಂಜೀವನವು ಗುರು ನಿಮ್ಮ ನಾಮ
ಸುರಮುನಿಯು ಸೇವಿಸುವ ದಿವ್ಯನಾಮ ||ಪ||

ಕರಿಯ ಮೊರೆಯನು ಕೇಳಿ ದುರಿತ ಹರಿಸಿದ ನಾಮ
ಮೊರೆಯ ಹೊಕ್ಕವರ ಸ್ಥಿರ ಹೊರೆವ ನಾಮ
ತರಳ ಪ್ರಹ್ಲಾದನವಸರಕೆ ಒಲಿದಿಹ ನಾಮ
ಸ್ಮರಿಸುವರ ವಜ್ರಪಂಜರ ನಿಮ್ಮ ನಾಮ||೧||

ಧರೆಯೊಳಗೆ ದ್ರೌಪದಿಯ ಸ್ಮರಣೆಗೊದಗಿದ ನಾಮ
ಕರುಣದಿಂದಭಿಮಾನಗಾಯ್ದ ನಾಮ
ದಾರಿದ್ರ್ಯವನು ಸುಧಾಮನಿಗ್ಹಿಂಗಿಸಿದ ನಾಮ
ಸಿರಿಸಂಪತ್ತಿಯು ಆಯಿತೀ ನಾಮ ||೨||

ಹರುಷಕರವಿತ್ತು ಉಪಮನ್ಯುಗೊಲಿದ ನಾಮ
ಕ್ಷೀರಸಾಗರದಲಿಪ್ಪ ನಾಮ
ಶರಣುಹೊಕ್ಕವರ ಪರಿಪರಿ ಕಾಯ್ದ ನಾಮ
ಧೀರಧ್ರುವಗಚಲಪದವಿತ್ತ ನಾಮ ||೩||

ಕರೆದು ನಾರಗನೆಂದವನ ತಾರಿಸಿದ ನಾಮ
ಪರಮಪಾತಕ ಪರಿಹರಿಸಿದ ನಾಮ
ವರಮುನಿಜನರ ತೃಪ್ತಿಗೈಸುವ ನಾಮ
ಪರಮಭಕ್ತರ ಪ್ರಾಣಪ್ರಿಯ ನಾಮ ||೪||

ದುರಿತದಾರಿದ್ರ್ಯ ವಿಧ್ವಂಸಗೈಸುವ ನಾಮ
ಕರುಣಸಾಗರ ಪರಿಪೂರ್ಣ ನಾಮ
ನರಕೀಟಕ ಮಹೀಪತಿಯ ತಾರಕ ನಾಮ
ಪರಮಸಾಯುಜ್ಯ ಗುರುದಿವ್ಯನಾಮ ||೫||
****

ಪರಮ ಸಂಜೀವನವು ಗುರು ನಿಮ್ಮನಾಮ ಸರುಮುನಿಯು ಸೇವಿಸುವ ದಿವ್ಯನಾಮ pa


ದುರಿತ ಹರಿಸಿದ ನಾಮ ಮೊರೆಯ ಹೊಕ್ಕವರ ಸ್ಥಿರ ಹೊರೆವ ನಾಮ ತರಳ ಪ್ರಲ್ಹಾದನವಸರಕೆ ಒಲಿದಿಹ ನಾಮ ಸ್ಮರಿಸುವರ ವಜ್ರಪಂಜರ ನಿಮ್ಮ ನಾಮ 1 

ಧರೆಯೊಳಗೆ ದ್ರೌಪದಿಯ ಸ್ಮರಣಿಗೊದಗಿದ ನಾಮ ಕರುಣದಿಂದಭಿಮಾನಗಾಯ್ದ ನಾಮ ದಾರಿದ್ರ್ಯವನು ಸುಧಾಮನಿಗಿಂಗಿಸಿದ ನಾಮ ಸಿರಿ ಸಂಪತ್ತವು ಅಯಿತೀ ನಾಮ 2 

ಹರುಷಕರವಿತ್ತು ಉಪಮನ್ಯಗೊಲಿದ ನಾಮ ಕ್ಷೀರಸಾಗರದ ನಾಮ ಶರಣುಹೊಕ್ಕವರ ಪರಿಪರಿ ಕಾಯ್ದ ನಾಮ ಧೀರ ಧ್ರುವಗಚಳ ಪದವಿತ್ತ ನಾಮ3 

ಕರೆದು ನಾರಗ ನೆಂದವನ ತಾರಿಸಿದ ನಾಮ ಪರಮಪಾತಕ ಪರಿಹರಿಸಿದ ನಾಮ ವರ ಮುನಿಜನರ ತೃಪ್ತಿಗೈಸುವ ನಾಮ ಪರಮ ಭಕ್ತರ ಪ್ರಾಣಪ್ರಿಯ ನಾಮ 4 

ದುರಿತ ದಾರಿದ್ರ್ಯ ವಿಧ್ವಂಸಗೈಸುವ ನಾಮ ಕರುಣಸಾಗರ ಪರಿಪೂರ್ಣ ನಾಮ ನರಕೀಟಕ ಮಹಿಪತಿಯ ತಾರಕ ನಾಮ ಪರಮ ಸಾಯೋಜ್ಯ ಗುರು ದಿವ್ಯ ನಾಮ 5

ಕಾಖಂಡಕಿ ಶ್ರೀ ಮಹಿಪತಿರಾಯರು

***