Showing posts with label ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ ಪ್ರಸನ್ನ vijaya vittala. Show all posts
Showing posts with label ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ ಪ್ರಸನ್ನ vijaya vittala. Show all posts

Wednesday, 16 October 2019

ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ ಪ್ರಸನ್ನ ankita vijaya vittala

ವಿಜಯದಾಸ
ರಾಗ - : ತಾಳ -

ನಿನ್ನ ಮೂರುತಿ ನಿಲ್ಲಿಸೋ ವೆಂಕಟಸ್ವಾಮಿ l
ಪ್ರಸನ್ನ ವದನ ಭುಜಗನ ಗಿರಿಯ ತಿಮ್ಮಾ ll ಪ ll

ಪೊಳೆವ ಕಿರೀಟ ಕುಂಡಲ ಕರ್ಣ ಪಣೆಯಲ್ಲಿ l
ತಿಲಕ ಬಿಲ್ಲಿನ ಪುಬ್ಬು ಸುಳಿಗೂದಲಿಂ ದೊಲಿವ ll 1 ll

ಕದಪು ಕೂರ್ಮನಂತೆ ಸುಧಿಯ ಸುರಿವ ವದನ l
ಅಧರ ನಾಶಿಕ ಕಪೋಲ ಮುದ್ದು ನಗೆಯಿಂದೊಲಿವ ll 2 ll

ಕೊರಳ ತ್ರಿರೇಖೆ ಉಂಗುರಬೆರಳ ಶಂಖ l
ಸುದರುಶನ ಕಟಿ ಅಭಯ l ಕರ ಚತುಷ್ಟಯಯಿಂದೊಲಿವ ll 3 ll

ಶ್ರೀವತ್ಸ ಕೌಸ್ತುಭ ನ್ಯಾವಳ ವೈಜಯಂತೆ l
ಆವಾವಾ ಸರ ಉದರ ತ್ರಿವಳಿಯಿಂದೊಲಿವಾ ll 4 ll

ಬಡ ನಡು ನಾಭಿಯು ಉಡುದಾರ ಪೊಂಬಟ್ಟೆ l
ಉಡುಗೆ ಕಿಂಕಿಣಿ ಗಂಟಿ l  ನುಡಿ ತೊಡರಿಂದೊಲಿವಾ ll 5 ll

ಊರು ಜಾನು ಜಂಘೆ ಚಾರು ಪೆಂಡೆ ನೂಪುರ l
ಬೋರಗರೆವ ಗೆಜ್ಜೆ ತೋರುತ್ತ ನಳಿದೊಲಿವಾ ll 6 ll

ಧ್ವಜ ವಜ್ರಾಂಕುಶ ಸರಸಿಜ ರೇಖಿಯ ಚರಣ l
ವೈಜ ನಂದ ಬಾಲಕ ವಿಜಯವಿಟ್ಠಲ ತಿಮ್ಮಾ ll 7 ll
***


ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ ಪ್ರ
ಸನ್ನ ವದನ ಭುಜಗನ ಗಿರಿಯ ತಿಮ್ಮಾ ಪ

ಪೊಳೆವ ಕಿರೀಟಕುಂಡಲ ಕರ್ಣ
ಪಣೆಯಲ್ಲಿ ತಿಲಕ ಬಿಲ್ಲಿನ ಪುಬ್ಬು
ಸುಳಿಗೂದಲಿಂದೊಲಿವ 1

ಕದಪು ಕೂರ್ಮನಂತೆ ಸುಧೆಯ ಸುರಿವ ವದನ
ನಾಸಿಕ ಕಪೋಲ
ಮುದ್ದುನಗೆಯಿಂದೊಲಿವ2

ಕೊರಳ ತ್ರಿರೇಖೆ ಉಂಗುರ
ಕಟಿ ಅಭಯ
ಕರ ಚತುಷ್ಟಯಿಂದೊಲಿವ3

ಕೌಸ್ತುಭ ನ್ಯಾವಳ ವೈಜಯಂತ
ಆವಾವಾಸರ ಉದರ
ತ್ರಿವಳಿಯಿಂದೊಲಿವಾ4

ಬಡ ನಡು ನಾಭಿಯು ಉಡುದಾರ ಪೊಂಬಟ್ಟೆ
ಉಡಿಗೆ ಕಿಂಕಿಣಿಗಂಟಿ
ನುಡಿ ತೊಡರಿಂದೊಲಿವಾ 5

ಊರು ಜಾನು ಜಂಘೆ ಚಾರುಪೆಂಡೆ ನೂಪುರ
ಭೋರಗರೆವ ಗೆಜ್ಜೆ
ತೋರುತ್ತ ನಲಿದೊಲಿವಾ 6

ಧ್ವಜ ವಜ್ರಾಂಕುಶ ಸರ
ಸಿಜ ರೇಖಿಯ ಚರಣ
ವ್ರಜನಂದ ಬಾಲಕ ವಿಜಯವಿಠ್ಠಲ ತಿಮ್ಮಾ 7
*********