Showing posts with label ಶ್ರೀನಿವಾಸಾ ನಿನ್ನಯಾಟ ಏನು ಪೇಳಾಲಿ ಜ್ಞಾನಿಗಳು gurujagannatha vittala SRINIVASAA NINNAYAATA ENU PELAALI JNAANIGALU. Show all posts
Showing posts with label ಶ್ರೀನಿವಾಸಾ ನಿನ್ನಯಾಟ ಏನು ಪೇಳಾಲಿ ಜ್ಞಾನಿಗಳು gurujagannatha vittala SRINIVASAA NINNAYAATA ENU PELAALI JNAANIGALU. Show all posts

Saturday, 4 December 2021

ಶ್ರೀನಿವಾಸಾ ನಿನ್ನಯಾಟ ಏನು ಪೇಳಾಲಿ ಜ್ಞಾನಿಗಳು ankita gurujagannatha vittala SRINIVASAA NINNAYAATA ENU PELAALI JNAANIGALU



by ಗುರುಜಗನ್ನಾಥದಾಸರು
.ಶ್ರೀನಿವಾಸಾ ನಿನ್ನಯಾಟ ಏನು ಪೇಳಾಲಿ ||ಪ||

ಜ್ಞಾನಿಗಳು ನಿನ್ನಾ ಗುಣಗಳನ್ನು ತಿಳಿಯಾರೋ ||ಅ.ಪ||

ನಿತ್ಯತೃಪ್ತನೆನಿಸಿ ನೀನು ಸತ್ಯಜಗವನುಂಬುವೀ
ಸತ್ಯ ಸಂಕಲ್ಪನೆನಿಸೀ ನೀ ಮಿಥ್ಯ ಮಾತನಾಡುವೀ ||೧||

ನಾರನೆನಿಸಿ ವ್ರಜದ ಪರನಾರಿಯರ ಕೆಡಸೀದೀ
ಸಾರಜನರಘಾವಳೀ ಚೋರನೆನಿಸಿದೀ ||೨||

ಜನನರಹಿತನಾಗಿ ಗೋಪೀ ತನುಜನೆನಿಸೀದೀ
ಸ್ತನವನಿತ್ತ ಪೂತನಿಯನ್ನು ಹನನಮಾಡಿದೀ ||೩||

ದಾನವನಿತ್ತ ಬಲಿಯನೊತ್ತಿ ಹೀನ ಚೈದ್ಯನ ಪೊರೆದೆಯೋ
ಧ್ಯಾನಮಾಡುವ ಯೋಗಿವರರ ಕಾನನಕಟ್ಟೀದೀ ||೪||

ನಿನ್ನ ನಿಂದಿಪ ಜನಕೆ ಘನ್ನ ಸಂಪದ ನೀಡಿದೀ
ನಿನ್ನ ಸೇವಿಪ ಜನರಾ ಬನ್ನ ಬಡಿಸೀದೀ ||೫||

ನೀನೇ ಧ್ವರೀ ಎಂದು ಹೀಗೆ ನೀನು ಮಾಡುವರೇನೋ
ದೀನ ಜನರುದ್ಧಾರ ಮಾಡದೆ ದೀನ ಭಾವವ ತೋರುವೀ ||೬|| 

ಶ್ರೀತರುಣಿ ನಿನ್ನ ರಾಣಿ ಪೋತ ಪ್ರಾಣನಿರಲು 
ಕಷ್ಟ ಯಾತಕೆ ಗುರು ಜಗನ್ನಾಥವಿಠಲ ನಿನಗೇ ||೭||
***

Srinivasa ninnayata enu pelali ||pa||

Jnanigalu ninna gunagalannu tiliyaro ||a.pa||

Nityatruptanenisi ninu satyajagavanumbuvi
satya sankalpanenisi ni mithya matanaduvi ||1||

Naranenisi vrajada paranariyara kedasidi
sarajanaraghavali choranenisidi ||2||

Jananarahitanagi gopi tanujanenisidi
stanavanitta putaniyannu hananamadidi ||3||

Danavanitta baliyanotti hina chaidyana poredeyo
dhyanamaduva yogivarara kananakattidi ||4||

Ninna nindipa janake ghanna sampada nididi
ninna sevipa janara banna badisidi ||5||

Nine dhvari endu hige ninu maduvareno
dina janaruddhara madade dina bhavava toruvi ||6|| 

Sritaruni ninna rani pota prananiralu 
kasta yatake guru jagannathavittala ninage ||7||
***

ಶ್ರೀನಿವಾಸಾ ನಿನ್ನಯಾಟ ಏನು ಪೇಳಾಲಿ ಪ


ಜ್ಞಾನಿಗಳು ನಿನ್ನಾ ಗುಣಗಳನ್ನು ತಿಳಿಯಾರೂ ಅ.ಪಮಿಥ್ಯಮಾತನಾಡುವೀ1

ನಾರನೆನಿಸಿ ವ್ರಜದಪರಚೋರನೆನಿಸಿದೀ 2

ಹನನಮಾಡಿದೀ 3

ದಾನವನಿತ್ತ ಬಲಿಯನೊತ್ತಿಹೀನ ಚೈದ್ಯನ ಪೊರೆದೆಯೋಕಾನನಕಟ್ಟೀದೀ 4

ನಿನ್ನ ಸೇವಿಪ ಜನರಾಬನ್ನಬಡಿಸೀದೀ5

ದೀನಭಾವವ ತೋರುವೀ 6

ಪೋತಪ್ರಾಣನಿgಲು ಕಷ್ಟನ್ನಾಥವಿಠಲ ನಿನಗೇ 7
*******