..
kruti by shreeshapranesha vittala dasaru
ನಿರ್ಯಾಣ ಸ್ತೋತ್ರ
ವಾಸುದೇವನ ಪುರಕೆ ತೆರಳಿದಾರು |ಶ್ರೀಶನಾ ಪ್ರಿಯ ಗುರು ಪ್ರಾಣೇಶ ದಾಸಾರ್ಯ ಪ
ಸ್ನಾನ ಊಧ್ರ್ವಪುಂಡ್ರಗಳ ವಿಧಿಯಿಂಧರಿಸೀ ಸಂ |ಧ್ಯಾನ ಗಾಯತ್ರಿ ಜಪವನ್ನು ಮಾಡಿ ||ಮನುರಾಗದಿ ಬಿಂಬ ಮೂರ್ತಿ ಧ್ಯಾನಮಾಡೀ ತತ್ವ |ಮಾನಿಗಳೊಳೊಂಮ್ಮಿಂದೊಮ್ಮೆ ಆನಂದದಿಂದಲೀ 1
ಹರಿಯೆ ಸರ್ವೋತ್ತಮಾ ತದ್ರಾಣಿ ಶಿರಿಬೊಮ್ಮ |ಮರುತ ದೇವರೆ ಗುರುವು, ತಾರತಮ್ಯ ||ವರಪಂಚಭೇದ ಜ್ಞಾನವನರಿತು ಮನದಿ ಹರಿ |ಪುರದೊಳಿಹ ಪರಮ ಭಕ್ತರ ಕಾಣಬೇಕೆನುತ 2
ಮೋಕ್ಷರೌದ್ರೀ ಅಬ್ಧಮಾಘದರ್ಶಾ ಪೂರ್ವಭಾದ್ಧರಾ |ನಕ್ಷತ್ರ ಸೋಮವಾರದಿದ್ದವ ದ್ವಿತಿಯ ಯಾಮದೀ |ಲಕ್ಷಿ ಇಟ್ಟೂ ಲಯದ ಚಿಂತನೆಯ ಗೈಯುತಲಿ |ಪಕ್ಷಿವಾಹನ ಶ್ರೀಶಪ್ರಾಣೇಶ ವಿಠಲೆನುತ 3
***
kruti by shreeshapranesha vittala dasaru
ಶ್ರೀ ಮೊದಲಗಿತ್ತಿ ಕೃಷ್ಣಣ್ಣನವರಿಗೆ ಅಂಕಿತಪದ
ವೆಂಕಟ ವಿಠಲರೇಯ ನಿನ್ನಯಪದ |ಪಂಕಜ ಸ್ಮರಣಿಯಿತ್ತು ||
ಕೊಂಕು ಮತಿಯ ಕಳೆದು |ಸಂಕಟ ಪರಿಹರಿಸಿ ಕ |ಳಂಕ ರಹಿತನ ಮಾಡೋ ನೀ ಮಾಡೋ ಅ.ಪ.
ಸಂತತ ನಿನ್ನಯ ಚರಿತೆಯ ಕೇಳಲಿ |ಅಂತರಾಗದಿ ಪಾಡಲಿ |ಸಂತರ ಸಹವಾಸವನು ಕೊಟ್ಟು ಸತತ ನಿ |ಶ್ಚಿಂತ ಪುರುಷನ ಮಾಡೋ ಕಾಪಾಡೋ 1
ತರತಮ ಪಂಚಭೇದ ಮತಿಯನಿತು |ಮರುತ ಮತವನ್ನು ಪೊಂದಿ |ಸಿರಿಯರಸನೆ ತವಗುಣ ಕರ್ಮನಾಮವ |ವರ ಜಿಂಹ್ವಯೊಳಿರಿಸೋ, ಉದ್ಧರಿಸೋ 2
ಶ್ರೀಶ ಪ್ರಾಣೇಶ ವಿಠಲರೇಯ ನೀನ್ನನು |ಲೇಸಾಗಿ ಪ್ರಾರ್ಥಿಸುವೆ |ಆಶಿಯ ಬಿಡಿಸಿನ್ನು ಮೀಸಲ ಮನಮಾಡಿ |ನೀ ಸುಜ್ಞಾನವನೆ ಪಾಲಿಸೋ, ಲಾಲಿಸೋ 3
***