Showing posts with label ಬ್ಯಾಗ ಬರುವೇನೆಂದು ಸಾಗಿ ಮಧುರೆಗೆ ಹೋದ bheemesha krishna. Show all posts
Showing posts with label ಬ್ಯಾಗ ಬರುವೇನೆಂದು ಸಾಗಿ ಮಧುರೆಗೆ ಹೋದ bheemesha krishna. Show all posts

Wednesday, 1 September 2021

ಬ್ಯಾಗ ಬರುವೇನೆಂದು ಸಾಗಿ ಮಧುರೆಗೆ ಹೋದ ankita bheemesha krishna

 ..

ಬ್ಯಾಗ ಬರುವೇನೆಂದು ಸಾಗಿ ಮಧುರೆಗೆ ಹೋದ

ಹ್ಯಾಗೆ ಮಾಡುವೊಣುದ್ಧವ

ಭಾಗವತಪ್ರಿಯಗಿನ್ನು ಬಾಗಿ ನಮಿಸುತ ನಾವು

ಹೋಗಬ್ಯಾಡೆಂತೆಂದೆವೊ ಉದ್ಧವ ಪ


ಗೋಕುಲವಾಸ ಬಿಟ್ಟ್ಯಾಕೆ ತೆರಳಿದ ಸ್ವಾಮಿ

ಈ ಕಾರ್ಯವನು ತಿಳುಹಿಸೊ

ಶ್ರೀಕರ ಕಮಲಾರ್ಚಿತ ಚರಣಧ್ವಜವಜ್ರ-

ರೇಖಪಾದವ ಚಲಿಸಿದ

ಪಾಕಶಾಸನಪ್ರಿಯನು ಪರಮ ನಿರ್ದಯ ಮಾಡಿ

ವ್ಯಾಕುಲರಾಗಿದ್ದೆವೊ ಉದ್ಧವ 1


ಯಂತ್ರಮಾಯದಲಿ ಶ್ರೀಕಾಂತನೊಲಿಸುವುದಕ್ಕೆ

ಮಂತ್ರವನು ಮಾಡರಿಯೆವೊ

ಅಂತರಂಗದಲಿ ಅನಂತಗುಣ ಸ್ತುತಿಸಲೇ-

ಕಾಂತ ಭಕ್ತರಲ್ಲವೊ

ನಿಂತು ನಿತ್ಯಾನಂದಮೂರ್ತಿಯ ನೋಡದಲೆ

ಭ್ರಾಂತರಾಗಿ ಪೋದೆವಲ್ಲೊ ಉದ್ಧವ 2


ಅತಿಕ್ರೂರನೆನಿಸುವಕ್ರೂರ ಬಂದು ನಮಗ-

ಹಿತಮಾಡಿ ಪೋದನಲ್ಲೊ

ಮತಿಹೀನರಾಗ್ಹರಿಯ ರಥವ ನಿಲಿಸದಲೆ ಮುಂ-

ದೆತನ (ಯತ್ನ ?) ಮರಿಯದೆ ನಿಂತೆವೊ

ಪೃಥಿವಿ ಒಳಗಿಂಥ ಗೋಪಿಕಾಸ್ತ್ರೀಯರೆಂದು ಭಾಳಪ-

ಕೀರ್ತಿಗೊಳಗಾದೆವೋ ಉದ್ಧವ 3


ಸಕ್ಕರೆಯಂಥ ಸವಿಮಾತನಾಡುತ ನಮಗೆ

ದಕ್ಕಿದಕ್ಕದಲ್ಹೋದನೊ

ಮತ್ತೇನು ಪೇಳೋಣ ಮಂದಭಾಗ್ಯರು ಹರಿಯ

ದಕ್ಕಿಸಿಕೊಳ್ಳದ್ಹೋದೆವೊ

ಸಿಕ್ಕರೆ ಧನವು ಶತಸಾವಿರ ಕೊಪ್ಪರಿಗೆ ಅಷ್ಟ-

ಧಿಕ ಸುಖವಾದೀತೋ ಉದ್ಧವ 4


ಮಡದಿಯರು ಕೇಳಿಗೆ ಮಧುರಾಪಟ್ಟಣದಂಥ

ಚೆದುರೆಯರು ನಾವಲ್ಲವೊ

ಮದನನಾಟಕೆ ಮದಗಜಗಮನೇರಿಗಿನ್ನು

ಮುದದಿ ಮರುಳಾಗಿಪ್ಪನೊ

ವಿಧಿ ಬರೆದನೇನೆಂದರೀ ನಮ್ಮ ಪಣೆಯಲ್ಲಿ

ಪದುಮಾಕ್ಷನಗಲುವಂತೆ ಉದ್ಧವ 5


ಮಲ್ಲರನೆ ಮಡುಹಿದ್ದ ಮಾವನ್ವೈರಿಯು ನಮ್ಮ

ಕೊಲ್ಲಿ ಪೋದಂತಾಯಿತೊ

ಸಲ್ಲ ನಡತೆಯ ಸೊಟ್ಟಕುಬ್ಜೆಗೆ ಕಡೆಯು ನಾ-

ವಲ್ಲವೆಂದವಗೆ ಪೇಳೊ

ನಿಲ್ಲದ್ಹೋಗ್ಹಿಂದಕೆ ಸುಳ್ಳಲ್ಲೊಂದು ಬೆರೆಸದಲೆ

ಎಲ್ಲವಾರ್ತೆಗಳ ಹೇಳೊ ಉದ್ಧವ 6


ಕಲ್ಲಾಗದೀವಿಧಿಯ ಕಾಮನಪಿತನಗಲಿ

ಸೊಲ್ಲು ಸೊಲ್ಲಿಗೆ ಬಳಲ್ದೆವೊ

ಮಲ್ಲಿಗ್ವೊಣಗಿದ ದಾರದಂತೆ ಗೋವ್ರಜಮೂಲೆ-

ಯಲ್ಲಿ ನಾವಿರಲಾರೆವೊ

ಎಲ್ಲಿ ಬಂದೊದಗಿತೀ ಬಿಲ್ಲ ್ಹಬ್ಬನಮಗೆ ಭೀ-

ಮೇಶ ಕೃಷ್ಣನ ತೋರಿಸೊ ಉದ್ಧವ 7

***