Audio by Vidwan Sumukh Moudgalya
ಶ್ರೀ ವ್ಯಾಸರಾಜರ ರಚನೆ
ರಾಗ : ವಸಂತ ತ್ರಿಶ್ರನಡೆ
ಶೋಭಾನವೆ ಶೋಭನವೆ ॥ಪ॥
ಗೋಕುಲದೊಳಗೆ ಪೊಂಗಳಲೂದುತಾ
ಗೋವಳೆಯರ ಕೂಡ ನಲಿದಾಡುತಾ
ಶಕಟಾನ ಮುರಿದು ಕಾಳಿಂಗನ ಮರ್ದಿಸಿ
ಆಕಳ ಕಾಯ್ವ ಗೋಪಾಲ ಕೃಷ್ಣ ॥೧॥
ಸರಸಿಜಾಮಿತ್ರ ಸುತನ ಕಾಯ್ದೂ
ಸುರಪತಿ ಸುತನ ಪ್ರಾಣವ ತೆಗೆದೂ
ಭರದಿ ನಖವು ತಾ ಸೋಕಲಾಶಿಲಿಯನು
ತರುಣೀಯಮಾಡಿದ ರಾಮಚಂದ್ರಗೆ ॥೨॥
ಶಂಕರಭರಣನ ಶಯನನಿಗೇ
ಪಂಕಜೋದ್ಭವನ ಪಡದವಗೇ
ಶಂಕೆಯಿಲ್ಲದ ಸುರಪುಂಖವ ತರಿದವಗೆ
ಶಂಕಚಕ್ರವ ಪಿಡಿದ ಶಿರಿಕೃಷ್ಣಗೆ
******