ಜಾನ್ಹವಿಜನಕ ಶ್ರೀರಾಮ ಜಾನಕಿವರರಾಮ ಜಯಜಯರಾಮ ll ಪ ll
ದಶರಥಸುತ ಧೀರ ರಾಮ ದಶ ಅವತಾರದ ಲೀಲಾ ರಾಮ l
ದಶದಿಕ್ಕಿನಲಿ ವ್ಯಾಪ್ತರಾಮ ದಶಶಿರಸಖಶರ ಮುರಿದಾ ಶ್ರೀರಾಮ ll 1 ll
ಮಾನಿನಿ ಜಡಭಂಗ ರಾಮ ಮೌನಿಯಮಖ ಕಾಯ್ದಮಾನಿ ಶ್ರೀರಾಮ l
ಭಾನು ಕುಲೋದ್ಭವ ರಾಮ ಭಾನು ಶತಾಭನೆ ಭವಹರ ರಾಮ ll 2 ll
ಕೈವಲ್ಯದಾಯಕ ರಾಮ ಕೌಸಲ್ಯೋದರ ರಾಮ ಕಾಕುಸ್ಥರಾಮ l
ಕವಿ ಆದಿಕೃತೆ ಕಾರ್ಣರಾಮ ಕನಕೋದರಾನಂತಕಲ್ಪ ಶ್ರೀರಾಮ ll 3 ll
ಏಕವಚನ ಬಾಣರಾಮ ಏಕಾಂಕ ಪತ್ನಿಯೆ ವ್ರತ ಸ್ವೀಕರ ರಾಮ l
ಕಾಕುಕಾಮನಧ್ವಂಸಿ ರಾಮಾನೇಕ ಭಕ್ತರಭೀಷ್ಠಿಭಿರಿತಾಭೋ ರಾಮ ll 4 ll
ಗುಹಕನಾಮಕಗೊಲಿದ ರಾಮ ಅಹಿಕ ಪಾರತ್ರಿಕ ಸುಖದ ಶ್ರೀರಾಮ l
ಅಹಿತರಿಗತಿಕ್ರೂರ ರಾಮ ಸನ್ನಿಹಿತರ ಸಲಹುವ ಸ್ವಾಮಿ ಶ್ರೀರಾಮ ll 5 ll
ಪಾತ್ರಜನರ ಪ್ರೇಮರಾಮ ಅಪಾತ್ರ ಪ್ರತತಿಗೆಲ್ಲ ಪೂರ್ಣ ವಿರಾಮ l
ಪವನಾನಂದಾಭ್ದಿಗೆ ಸೋಮಾ ಪ್ರಮುಖ ಮುರವ್ರಾತ ಪ್ರಮಾದಕಾಮ ll 6 ll
ಸಿರಿವಿಧಿ ಶಿವನುತ ರಾಮ ಸಿರಿನಾರಿ ಅವಿಯೋಗಿ ಸಾಕಲ್ಯ ರಾಮ l
ಸೀತಾವಿಯೋಗ ಮೋಹ ನೇಮಾ ಸಾರಿಸಿದ ಸ್ವಗತ ತಾನೆ ಸರ್ವಜ್ಞ ರಾಮ ll 7 ll
ವನಜ ಭವಾದ್ಯರು ರಾಮ ತನ್ನ ತನುಜರಾಗಿರೆ ತಾನು ದಶರಥಪ್ರೇಮ l
ತನುಜನೆನಿಸೆ ನಿಸ್ಸೀಮಾ ಮಹಿಮಿಗಾಶ್ಚರ್ಯ ಬಡುವೋರು ಬಹು ಸುರಸ್ತೋಮ ll 8 ll
ಗುಣಾತ್ರಿ ನಿರ್ಲೇಪರಾಮ ಗುರುಶ್ರೀಶಪ್ರಾಣೇಶವಿಟ್ಠಲ ಶ್ರೀರಾಮ l
ಗುಹ್ಯ ಗಹನ ಭವ್ಯರಾಮ ಗುರುಪವಮಾನ ಗುಪಿತಾರ್ಥ ನೀನೆ ಶ್ರೀರಾಮ ll 9 ll
***
ರಾಗ - : ತಾಳ -