Showing posts with label ಕಾಯೋ ಹನುಮರಾಯ ನಿನ್ನ ತೋಯಜ ಪಾದಕೆ ಕಾಯ ಮನದಿ ನಮೋ ankita prasannashreenivasa. Show all posts
Showing posts with label ಕಾಯೋ ಹನುಮರಾಯ ನಿನ್ನ ತೋಯಜ ಪಾದಕೆ ಕಾಯ ಮನದಿ ನಮೋ ankita prasannashreenivasa. Show all posts

Thursday, 5 August 2021

ಕಾಯೋ ಹನುಮರಾಯ ನಿನ್ನ ತೋಯಜ ಪಾದಕೆ ಕಾಯ ಮನದಿ ನಮೋ ankita prasannashreenivasa

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು


ಕಾಯೊ ಹನುಮರಾಯ ನಿನ್ನ

ತೋಯಜ ಪಾದಕೆ ಕಾಯ ಮನದಿ ನಮೋ ಪ


ಭಾರತೀಶ ಕೃಪಾಸಮುದ್ರನೆ

ವಾರಿಜಜಾಂಡದಿ ಸರ್ವಜೀವರೊಳಿದ್ದು

ಮೂರೇಳು ಸಾಸಿರ ನೂರಾರು ಜಪಗಳ

ಇರುಳು ಹಗಲು ನರಹರಿಗೆ ಅರ್ಪಿಪ ಸುರ 1

ಮಾತರಿಶ್ವಪ್ರಖ್ಯಾತ ಮಹಿಮನೆ

ವೀತ ಕಲುಷನೆ ವಾತ ಪ್ರಭಂಜನ

ಸತತ ಎನ್ನನು ಅತಿ ಹಿತದಿ ನೀ ಸಲಹುವೆ

ಪ್ರತತ ಶ್ರೀ ನೃಹರಿಯ ಪ್ರಥಮಾಂಗನೆ ದಣಿ 2

ಪಾತ್ರರೊಳಗೆ ಸತ್ಪಾತ್ರ ಮಾಡೆನ್ನ

ಸೂತ್ರಸುಖ ಸಿತಗಾತ್ರ ಪವಿತ್ರನೆ

ಮಾತ್ರಾಕರಣನಿಯಂತೃ ಮಹಂತನೆ

ಚಿತ್ರ ಪುರುಷ ಮಾಕಳತ್ರನ ತೋರಿಸೊ 3

ದೇವಜನನುತ ಭಾವಿ ಬ್ರಹ್ಮನೆ

ಕಾವ ಕರುಣಿಯೆ ಪವಮಾನ ನಮೋ ನಮೋ

ಭಾವುಕರೊಡೆಯ ಶ್ರೀದೇವಿ ಶಾಂತಿಯ ಪತಿ

ದೇವವರೇಣ್ಯನನಿರುದ್ಧನ ತೋರಿಸೊ 4

ಶುದ್ಧ P್ಪರುಣಾಬ್ಧಿ ನಮೋ ನಮೋ

ಶುದ್ಧ ಭಕ್ತ್ಯಾದಿ ಸಂಪತ್ತು ಎನಗಿತ್ತು

ಉದ್ಧರಿಸೊ ಎನ್ನ ಶ್ರದ್ಧೇಶ ಮುಖ್ಯಪ್ರಾಣ

ಪದ್ಮೆ ಕೃತೀಶ ಪ್ರದ್ಯುಮ್ನಗೆ ಪ್ರಿಯತಮ 5

ಜ್ಞಾನಬಲರೂಪ ಹನುಮ ನಮೋ ನಮೋ

ಜ್ಞಾನಸುಖಮಯ ಜಾನಕೀಶನ ದೂತ

ಇನನ ಸುತನಿಗೆ ವಿಭೀಷಣನಿಗೆ ರಾಮ

ತಾನೂ ಒಲಿದ ನೀನೊಲಿದ ಕಾರಣದಿ 6

ಕುಂತಿಸುತ ಬಲವಂತ ಭೀಮ ಶ್ರೀ

ಕಾಂತ ಕೃಷ್ಣನೇಕಾಂತ ಭಕ್ತಾಗ್ರಣಿ

ಭ್ರಾಂತ ಕುಜನಕಲಿ ಅಂತಕ ಸುಜನರ

ಸಂತತ ಪೊರೆವ ಧನಂಜಯಗೊಲಿದನೆ 7

ಪಂಚಭೇದ ಪ್ರಪಂಚ ಸತ್ಯವಿ

ರಿಂಚಿಪಿತನೆ ಸ್ವತಂತ್ರ ಸರ್ವೋತ್ತಮ

ಚಿಂತಿಸೆ ಭಕ್ತಿಯಿಂ ಮಿಂಚುಪೊಲ್ ತೋರಿ ನಿ

ರಂತರ ನಿಜಸುಖವೀವನೆಂದೆಯೊ ಮಧ್ವ 8

ಶ್ರೀಶ ಚಿನ್ಮಯ ದೋಷದೂರನು

ವ್ಯಾಸ ಸುಖಮಯ ಪ್ರಸನ್ನ ಶ್ರೀನಿವಾಸ

ಭಾಸಿಪ ನಿನ್ನಯ ಹೃತ್ಸರಸಿಜದಲಿ

ದಾಶರಥಿಯ ಮುಖ್ಯ ದಾಸವರ್ಯನೆ ನಮೋ 9

***