ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಸದ್ಗುರು ಆರೆಂದು ನೋಡೊ ಗುರುತಿಟ್ಟು ಮನವೆ ಸೇವೆ ಮಾಡೊ ಪ
ಗುರುಗಳುಂಟು ಮನೆಮನೆ ಬಹಳ ಬ್ಯಾರೆ ಬ್ಯಾರೆ ಮಾಡುತ ತಮ್ಮ ಮ್ಯಾಳ ದೋರುತಿಹರು ಮೋಹಿಸುವ ವಾಗ್ಜಾಲ ಸರಿ ತಮಗಾರಿಲ್ಲೆಂದೆನ್ನು ತಲಾ ತೋಳ 1
ಎಲ್ಲ ಬಲ್ಲತನದಭಿಮಾನ ಅಲ್ಲೆ ಕೊಂಬುದೇನುಪದೇಶ ಜ್ಞಾನ ಸೊಲ್ಲಿಲ್ಹೇಳಿ ಕೇಳಿದರಾಹುದೇನ ಸಲ್ಲದರಲಿಹುದೆನೊಡೆತನ 2
ಸರ್ವಸಮ್ಮ ತಾಗುವ ಸುಜ್ಞಾನ ಗರ್ವಾಭಿಮಾನಗೆಲ್ಲಿಹುದು ಖೂನ ಪೂರ್ವಾಪರ ಸದ್ಗುರು ನಿಜಧ್ಯಾನ ದೋರ್ವದು ತಾಂ ಪಡೆದವಗ ಪೂರ್ಣ3
ವಿರಳಾಗತ ಎಲ್ಲಿಗೊಬ್ಬ ಮಹಿಮ ಶರಣ ಹೊಕ್ಕವಗೆ ಪೂಜ್ಯಪರಮ ಕರತಳಾಮಲಕವಾಗುವ ನಿಜವರ್ಮ ಗುರುಮಾರ್ಗದಾಗೆನಬೇಕು ನೇಮ 4
ಗುರುವರ ಶಿರೋಮಣಿ ಭಾನುಕೋಟಿ ಗುರುತಾದ್ಯೆನ್ನ ಮನದೊಳು ನಾಟಿ ಪರಬ್ರಹ್ಮನಹುದೊ ಜಗಜೇಟಿ ತರಳ ಮಹಿಪತಿ ಮನವಸೋಘಟಿ(?) 5
***