Showing posts with label ದೇಹವೇಕೆ ನಮಗೆ ದೇಹ ದೇಹ ಸಂಬಂಧ purandara vittala. Show all posts
Showing posts with label ದೇಹವೇಕೆ ನಮಗೆ ದೇಹ ದೇಹ ಸಂಬಂಧ purandara vittala. Show all posts

Thursday, 5 December 2019

ದೇಹವೇಕೆ ನಮಗೆ ದೇಹ ದೇಹ ಸಂಬಂಧ purandara vittala

ಪುರಂದರದಾಸರು
ದೇಹವೇಕೆ ನಮಗೆ ದೇಹ ದೇಹ ಸಂಬಂಧಗಳೇಕೆ |ಆಹುದೇನೊ ಹೋಹುದೆನೊ ಇದರಿಂದ ಹರಿಯೆ ಪ.

ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆ ಮನೆ ಏಕೆ |ಮುಚ್ಚಿ ಹೂಳಿದ ಹೊನ್ನು ಹಣವೇತಕೆ |ಪಚ್ಚೆ ಮಾಣಿಕವಜ್ರ ವೈಡೂರ್ಯವೇತಕೆ |ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ 1

ಹೆಂಡಿರು ಮಕ್ಕಳು ಏಕೆ - ಹಣ ಹೊನ್ನು ಎನಲೇಕೆ |ಕಂಡ ವೇದ ಶಾಸ್ತ್ರಗಳನೋದಲೇಕೆ - ಭೂ ||ಮಂಡಲಾಧಿಪತ್ಯವೇಕೆ - ಮೇಲೆ ಸೌಂದರ್ಯವೇಕೆ |ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ 2

ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ |ಚೆಂದುಳ್ಳ ವಿಹಿತ ಕರ್ಮಗಳೇತಕೆ |ಇಂದಿರೇಶ ನಮ್ಮ ಪುರಂದರವಿಠಲನ |ಪೊಂದಿ ಭಜಿಸಿದವನ ಇಂದ್ರಿಯಂಗಳೇಕೆ 3
***

pallavi

dEhavEke namage dEha dEha sambandhagaLEke AhudEno hOhudEno idarinda hariye

caraNam 1

mecci kaTTida celuva mALige mane Ekemucci huLida honnu haNavEtake
pacci mANika vajra vaiDUryavEtake acyutana dAsarali bhakti illada baLiga

caraNam 2

heNDiru makkaLu Eke-haNa honnu enalEke kaNDa vEda shAstragaLanOdalEke
bhUmaNDalAdhipatyavEke mEle saundaryavEke puNdarIkAkSana dAsanali bhaktiyillada baLiga

caraNam 3

mandAkini modalAda tIrtta yAtregaLeke cenduLLa vihita karmagaLEtake
indirEsha namma purandara viTTalana ponti bhajisadavana indriyangaLEke
***