Showing posts with label ಶರಣು ಶ್ರೀ ಗುರುರಾಘವೇಂದ್ರಗೆ gurujagannatha vittala SHARANU SRI GURU RAGHAVENDRAGE. Show all posts
Showing posts with label ಶರಣು ಶ್ರೀ ಗುರುರಾಘವೇಂದ್ರಗೆ gurujagannatha vittala SHARANU SRI GURU RAGHAVENDRAGE. Show all posts

Friday 27 December 2019

ಶರಣು ಶ್ರೀ ಗುರುರಾಘವೇಂದ್ರಗೆ ankita gurujagannatha vittala SHARANU SRI GURU RAGHAVENDRAGE



ರಾಗ : ಮಲಯಮಾರುತ ತಾಳ : ಮಿಶ್ರಛಾಪು
2nd Audio by Vidwan Sumukh Moudgalya



ಶರಣು ಶ್ರೀ ಗುರು ರಾಘವೇಂದ್ರಗೆ
ಶರಣು ಯತಿಕುಲತಿಲಕಗೆ ॥ ಪ ॥

ಶರಣು ಶರಣರ ಪೊರೆವ ಕರುಣಿಗೆ
ಶರಣು ಹರಿಗುಣಲೋಲಗೆ ॥ ಅ ಪ ॥

ಮಧ್ವಮತ ಶುಭವಾರ್ಧಿ ಚಂದ್ರಗೆ
ಸಿದ್ಧಸಾಧನ ಮೂರ್ತಿಗೆ
ಬದ್ಧ ಶ್ರೀಹರಿ ದ್ವೇಷಿ ಮಾಯಿಗಳ
ಗೆದ್ದ ರಘುಕುಲ ರಾಮದೂತಗೆ ॥ 1 ॥

ನಿತ್ಯ ನಿರ್ಮಲ ಪುಣ್ಯಗಾತ್ರಗೆ
ಭೃತ್ಯಪಾಲಕ ಸುಗುಣಪಾತ್ರಗೆ
ಸತ್ಯ ಜ್ಞಾನ ಸುಮೋದ ನೇತ್ರಗೆ
ಸ್ತುತ್ಯ ಯತಿವರ ಸುಜನಮಿತ್ರಗೆ ॥ 2 ॥

ಮೋದದಾಯಕ ಭೇದಸಾದಕ
ಮೇದಿನಿ ಸುರಜಾಲ ನಾಯಕ
ಮೋದತೀರ್ಥರ ಚರಣ ಸೇವಕ
ಆದಿ ಗುರುಜಗನ್ನಾಥ ವಿಟ್ಠಲಗೆ ॥ 3 ॥
***

ಶರಣು ಶ್ರೀ ಗುರು ರಾಘವೇಂದ್ರಗೆ
ಶರಣು ಯತಿ ಕುಲ ತಿಲಕಗೆ        || ಪ ||


ಶರಣು ಶರಣರ ಪೊರೆವ ಕರುಣಿಗೆ
ಶರಣು ಹರಿಗುಣ ಲೋಲಗೆ    || ಅ ||

ಮಧ್ವಮತ ಶುಭ ವಾರುಧಿಚಂದ್ರಗೆ
ಸಿಧ್ಧ ಸಾಧನ ಮೂರ್ತಿಗೆ
ಬಧ್ಧ ಶ್ರೀಹರಿ ದ್ವೇಷಿ ಮಾಯ್ಗಳ
ಗೆದ್ದ ರಘುಕುಲ ರಾಮದೂತಗೆ     || ೧ ||

ನಿತ್ಯ ನಿರ್ಮಲ ಪುಣ್ಯಗಾತ್ರಗೆ
ಭೃತ್ಯ ಪಾಲಕ ಸುಗುಣ ಪಾತ್ರಗೆ
ಸತ್ಯ ಜ್ಞಾನ ಸುಮೋದ ನೇತ್ರಗೆ
ಸ್ತುತ್ಯ ಯತಿವರ ಸುಜನ ಮಿತ್ರಗೆ  || ೨ ||

ಮೋದ ದಾಯಕ ಭೇದ ಸಾಧಕ
ಮೇದಿನಿ ಸುರಜಾಲ ನಾಯಕ
ಮೋದ ತೀರ್ಥರ ಚರಣ ಸೇವಕ
ಆದಿ ಗುರುಜಗನ್ನಾಥ ವಿಠ್ಠಲ ದೂತಗೆ | ೩ ||
***

Sharanu Shree Guru Raghavendrage
Sharanu yati kula tilakage || pa ||

Sharanu sharanara poreva karunige
Sharanu hariguna lolage || a ||

Madhvamata shuba varudhicandrage
Sidhdha sadhana murtige
Badha sri hari dveshi maygala
Ghedda raghukula ramadutage  || 1 ||

Nitya nirmala punya gatrage
Brutya palaka suguna patrage
Satya gyana sumodha netrage
Stutya yativara sujana mitrage  || 2 ||

Modha dhayaka bedha sadhaka
Medini surajala nayaka
Modha tirthara charana sevaka
Adi Guru Jagannatha vitthala duthage || 3 ||
***

pallavi

sharaNu sharaNu sharaNayya sharaNu

anupallavi

sharaNu shrI guru vAdirAjage sharaNu suravgaa manyage sharaNu sharaNara poreva karuNiya sharaNu hariguNa lOlage

caraNam 1

madhvamata shubhavArdhi candrage siddha sAdhana mUrtige
bhadra shrIhari dvESamAigaLa gedda hayamukha dAsage

caraNam 2

nitya nirmala nigama stOtrage nrtya pAlaka suguNa gAtrage
satyalOka sumukhya pAtrage stutya yativara dujana mitrage

caraNam 3

mOdadAyaka bhEda sAdhaka tOde kSEtrAdhIshage
vEda vEdyayadhIsha dAtage Adi guru jagannAtha viThalage
***


ಶರಣು ಶ್ರೀ ಗುರುರಾಘವೇಂದ್ರಗೆ
ಶರಣು ಯತಿಕುಲತಿಲಕಗೆ        || ಪ ||
ಶರಣು ಶರಣರ ಪೊರೆವ ಕರುಣಿಗೆ
ಶರಣು ಹರಿಗುಣ ಲೋಲಗೆ    || ಅ ||

ಮಧ್ವಮತ ಶುಭವಾರುಧಿಚಂದ್ರಗೆ
ಸಿಧ್ಧಸಾಧನಮೂರ್ತಿಗೆ
ಬಧ್ಧ ಶ್ರೀಹರಿದ್ವೇಷಿ ಮಾಯ್ಗಳ
ಗೆದ್ದ ರಘುಕುಲ ರಾಮದೂತಗೆ – ಶರಣು        || ೧ ||

ನಿತ್ಯನಿರ್ಮಲ ಪುಣ್ಯಗಾತ್ರಗೆ
ಭೃತ್ಯಪಾಲಕ ಸುಗುಣಪಾತ್ರಗೆ
ಸತ್ಯ ಜ್ಞಾನ ಸುಮೋದ ನೇತ್ರಗೆ
ಸ್ತುತ್ಯ ಯತಿವರ ಸುಜನಮಿತ್ರಗೆ – ಶರಣು    || ೨ ||

ಮೋದದಾಯಕ ಭೇದಸಾಧಕ
ಮೇದಿನಿಸುರಜಾಲನಾಯಕ
ಮೋದತೀರ್ಥರ ಚರಣಸೇವಕ
ಆದಿ ಗುರುಜಗನ್ನಾಥವಿಠ್ಠಲ ದೂತಗೆ – ಶರಣು        || ೩ ||
***

by ಗುರುಜಗನ್ನಾಥದಾಸರು
ಶರಣು ಶ್ರೀಗುರುರಾಘವೇಂದ್ರಗೆ ಶರಣು ಸುರವರಧೇನುಗೆ ಪ


ಬದ್ಧಶ್ರೀಹರಿ ದ್ವೇಷಿ ಮಾಯಿಗಳಗೆದ್ದ ರಘುಕುಲ ರಾಮದೂತಗೆ 1


ನಿತ್ಯನಿರ್ಮಲ ಪುಣ್ಯಗಾತ್ರಗೆನಿತ್ಯಕರ್ಮವ ಮಾಳ್ಪ ಧೊರಿಗೆ2


ದಾತಗುರುಜಗನ್ನಾಥವಿಠಲನಪ್ರೀತ ಸುಖಮಯ ದಾತಯತಿಗೆ 3
****