Showing posts with label ನೋಡು ನೋಡು ನೋಡು ಕಂಡ್ಯ ಹೀಗೆ purandara vittala. Show all posts
Showing posts with label ನೋಡು ನೋಡು ನೋಡು ಕಂಡ್ಯ ಹೀಗೆ purandara vittala. Show all posts

Friday, 6 December 2019

ನೋಡು ನೋಡು ನೋಡು ಕಂಡ್ಯ ಹೀಗೆ purandara vittala

ರಾಗ ಕಾಂಭೋಜ ಆದಿತಾಳ 

ನೋಡು ನೋಡು ನೋಡು ಕಂಡ್ಯ ಹೀಗೆ ಮಾಡುತಾನೆ
ಗಾಡಿಗಾರ ನಿನ್ನ ಮಗ ಕೃಷ್ಣರಾಯ ಕಾಣೆ ||ಪ||

ಸೆರಗ ಪಿಡಿದು ಬಂದು ನಮ್ಮ ಸ್ತನವ ಪಿಡಿವುತಾನೆ
ಮರೆಗೆ ನಿಂತು ಕರದಿ ಸನ್ನೆ ತಿರುಗಿ ಮಾಡುತಾನೆ
ಎರಳಯಂತೆ ಎರಗಿ ಬಂದು ಮೇಲೆ ಬೀಳುತಾನೆ, ಈ
ತರಳಗೆ ಬುದ್ಧಿಯ ಪೇಳಿ ನಿಲ್ಲಿಸುವರ ಕಾಣೆ ||

ಕಂಡ ಕಂಡ ಬಳಿಯ ನಿಂತು ಕಣ್ಣ ಮುಚ್ಚುತಾನೆ
ಗಂಡರಾಳಿದಂದದಲಿ ಆಳೇನೆನ್ನುತಾನೆ
ಪುಂಡತನ ಬೇಡವೆಂದರೆ ಹಟದಿ ಬರುತಾನೆ, ಈ
ಲಂಡಗೆ ಬುದ್ಧಿಯ ಪೇಳಿ ನಿಲ್ಲಿಸುವರ ಕಾಣೆ ||

ಗೋವರ್ಧನಗಿರಿಯನೆತ್ತಿ ಬಂದೆನೆನ್ನುತಾನೆ
ಆವು ತುರು ಕರುಗಳನೆಲ್ಲ ತಂದೆನೆನ್ನುತಾನೆ
ಭಾವೆಯರ ಕಾಣುತಲೆ ಮೀರಿ ಬರುತಾನೆ
ನಾವು ಪೇಳಿದರು ಮಾತ ಕೇಳಲೊಲ್ಲ ಜಾಣೆ ||

ಹಾಲು ಮೊಸರು ಬೆಣ್ಣೆಗಳ ಹಾಳು ಮಾಡುತಾನೆ
ಕೋಲ ಕೊಂಡು ಬಂದರೆ ಬಿಗಿದಪ್ಪಿಕೊಳ್ಳುತಾನೆ
ನೀಲಮೇಘಶ್ಯಾಮನೆಂದರೆ ಅಹುದು ಎನ್ನುತಾನೆ, ಈ
ಲೀಲೆಗಳೆಲ್ಲ ನಮಗೆ ತಾಳದಿನ್ನು ಕಾಣೆ ||

ನಾರಿಯರ ಬೆನ್ನ ಹತ್ತಿ ಮೇಲೆ ಬರುತಾನೆ
ಯಾರು ನೀನೆಂದರೆ ರುಕ್ಮಿಣಿಯರಸನೆನ್ನುತಾನೆ
ಕ್ಷೀರಸಾಗರವಾಸ ಎಂದರೆ ಅಹುದು ಎನ್ನುತಾನೆ
ವಾರಿಜಾಕ್ಷ ಪುರಂದರವಿಠಲ ತಾ ಕಾಣೆ ||
***

pallavi

nODu nODu nODu kaNDya hIge mADutAne gADigAra ninna maga krSNarAya kANe

caraNam 1

seraga piDidu bandu namma staLava piDivutAne marege nintu karadi sanne tirugi mADutAne
eraLayante eragi bandu mEle piLutAne I taraLage buddhiya pELi nillisuvara kANe

caraNam 2

kaNDa kaNDa baLiya nintu kaNNa muccutAne kaNDarALi tandadali ALEnennutAne
puNDatana bEDavendare haTadi barutAne I laNDage buddhiya pELi nillisuvara kANe

caraNam 3

gOvardhana giriyanetti bandenennutAne Avu turu karugaLanella tandenennutAne
bhAveyara kANutale mIri barutAne nAvu pELidaru mAta keLalolla jANe

caraNam 4

hAlu mosaru beNNegaLa hALu mADutAne kOla koNDu bandare bigidappi koLLutAne
nIla mEgha shyAmanendare ahudu ennutAne I lIlegaLella namage tALadindu kANe

caraNam 5

nAriyara benna hatti mEle barutAne yAru nInendare rukmiNiya rasanennutAne
kSIra sAgara vAsa endare ahudu ennutAne vArijAkSa purandara viTTala tA kANe
***