ಕಂಡೆ ಕಂಡೆ ಸ್ವಾಮಿಯ ಕಂಡೆ
ಕಂಡೆ ನಾ ಬ್ರಹ್ಮಾಂಡದೊಡೆಯನ
ಪಾಂಡವರ ಪರಿಪಾಲಿಸುವನ ಪ್ರ-
ಚಂಡ ಅಸುರರ ಶಿರವ ಚಕ್ರದಿ
ಚೆಂಡನಾಡಿದ್ದ ಚೆಲುವ ಕೃಷ್ಣನ ಪ
ಪಾದನಖದಿ ಭಾಗೀರಥ್ಯುದಿಸಿದಳು
ವಿರಿಂಚರು ನಾಭಿಕಮಲದಿ
ಈರೇಳು ಲೋಕವನಿಟ್ಟ ಉದರದೊ-
ಳಾದಿ ಮೂರುತಿ ಸಾರ್ವಭೌಮ 1
ಎಳೆದುಳಸಿ ಶ್ರೀವತ್ಸ ಕೌಂಸ್ತುಭ ಅ-
ರಳು ಮಲ್ಲಿಗೆ ಹಾರ ಪದಕವು ಕೊ-
ರಳೊಳಗೆ ವೈಜಯಂತಿ ಮಾಲೆಯಂ-
ತ್ಹೊಳೆವೊ ಮಾಣಿಕಾಭರಣ ಭೂಷಿತ 2
ಶೀಘ್ರದಲಿ ಜರೆಸುತನ ವಧÉ ಮಾ
ಡ್ಯಜ್ಞದಲಿ ಶಿಶುಪಾಲರಂತಕ
ರುಕ್ಮಿಣೀಪತಿ ಧರ್ಮಭೀಮರಿಂ-
ದಗ್ರಪೂಜೆ ತಕ್ಕೊಂಡ ಕೃಷ್ಣನ 3
ಕಂಕಣ ಕರದಲಿ ಶಂಖ ಚಕ್ರವು ಅರ-
ವಿಂದ ರೇಖವು ಚರಣದಲಿ
ಪಂಕಜಾಕ್ಷನ ಮುಖದ ಕಾಂತಿಯು
ಶಂಕೆಯಿಲ್ಲದೆ ಸೂರ್ಯರಂದದಿ 4
ಎಂಟು ಮಂದ್ಯೆರಡೆಂಟು ಸಾವಿರ ಸತಿಯ-
ರಿಂದ ದ್ವಾರಾವತಿಯನಾಳಿದ
ಪತಿತಪಾವನ ಪಾರಿಜಾತವ ಸತಿಗೆ
ತಂದ ಶ್ರೀಪತಿಯ ಪಾದವ 5
ನಳಿನಮುಖಿ ದ್ರೌಪದಿಯು ಕರೆಯಲು
ಸೆಳೆಯೆ ವಸ್ತ್ರ ಅಕ್ಷಯವ ಮಾಡಿಸಿ
ಖಳರ ಮರ್ದನ ಕರುಣ ಸಾಗರೆಂ
ದಿಳೆಯೊಳಗೆ ಹೆಸÀರಾದ ಕೃಷ್ಣನ 6
ನಂಬಿದವರನು ಬಿಡದೆ ತಾನಿ-
ದ್ದಿಂಬಿನಲಿ ಸ್ಥಳಕೊಟ್ಟು ಕರೆವನು
ಸುಂದರಾಂಗ ತಾ ಸೋಮಕುಲದಲಿ
ಬಂದುದಿಸಿದ ಭೀಮೇಶ ಕೃಷ್ಣನ 7
****