ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯಬೇಕೆನ್ನ ನೀ ಸದ್ಗುರು ರನ್ನಾ ಕಾಯೋ ನಂಬಿದೆ ನಾನು ಪ
ಮರಹು ಮುನಿಯನು ಸೇರಿದೇ ನಾ ನನ್ನೊಳಗ ಅರವಪಥಜರಿದೇ ಕರುಣಾ ಸಾಗರ ನೆಂದು ಮೊರೆಯ ಹೊಕ್ಕೆನುಬಂದು ತರಣೋಪಾಯವೆನ್ನೊಳು ಸಾರಿ ಉದಾರೀ ದಯ ಬೀರಿ 1
ಆರರಿಗಳ ಕಾಟದೀ ಅವರಾಕೂಡೀ ಮೀರಲಾರೆನೋ ನಾನು ಶ್ರೀರಮಣನ ದಯದೊಲವಾ ನಿಶ್ಚಲವಾ ಕಳವಳವಾಗಳವಾ 2
ಮೀರಿದ ತೂರ್ಯಾಗಾರವ ಸುಖದಿಂದಲಿ ಸಾರುವಂದದಿ ಮತಿ ಬೀರೊ ಶ್ರೀಮಹಿಪತಿ ತಾರಿಸೋ ಕೊಟ್ಟು ನಿನ್ನೆಚ್ಚರವೆ ಘನ ಬೆರುವೆ ನಿಜದರುವೇ ಸುರತರುವೆ ಗುರುವೆ 3
***