Showing posts with label ಹನುಮನ ಬಲಗೊಂಬೆ ಹರುಷದಲೆ ನಮ್ಮ ತನು ಮನ ramesha HANUMANA BALAGOMBE HARUSHADALE NAMMA TANU MANA. Show all posts
Showing posts with label ಹನುಮನ ಬಲಗೊಂಬೆ ಹರುಷದಲೆ ನಮ್ಮ ತನು ಮನ ramesha HANUMANA BALAGOMBE HARUSHADALE NAMMA TANU MANA. Show all posts

Thursday, 2 December 2021

ಹನುಮನ ಬಲಗೊಂಬೆ ಹರುಷದಲೆ ನಮ್ಮ ತನು ಮನ ankita ramesha HANUMANA BALAGOMBE HARUSHADALE NAMMA TANU MANA

ಹನುಮನ ಬಲಗೊಂಬೆ ಹರುಷದಲೆ ನಮ್ಮ 

ತನುಮನ ಧನ ಈತಗೊಪ್ಪಿಸುತಲೆ ಪ.

ರಾಣಿಗೆ ಮುದ್ರೆಯನಿಟ್ಟ ಜಾಣನೆನುತಲೆಮುಖ್ಯ ಪ್ರಾಣ ಮುಯ್ಯಾ ಗೆಲೆಸೋ ಈ ಕ್ಷಣ ಎನುತಲೆ 1

ಕೋತಿಯ ಸ್ವರೂಪನಾದ ಈತನೆನುತಲೆ ದೈತ್ಯ ಜಾತಿಯ ಸಂಹರಿಸಿ ಬಂದ ಖ್ಯಾತನೆನುತಲೆ2

ಸೀತೆಯ ಮನೆಗೆ ತಂದ ಮಹಾತ್ಮನೆನುತಲೆಈತಗೆ ಜೋಡ್ಯಾರು ಮುಂದೆ ಖ್ಯಾತನೆನುತಲೆ 3

ಕೃಷ್ಣನ ಸೇವೆಗೆ ಅತಿ ನಿಷ್ಠ ನೆನುತಲೆದುಷ್ಟ ಕೌರವರ ಕೊಂದ ಶ್ರೇಷ್ಠ ನೆನುತಲೆ 4

ಶ್ರೀಶ ರಾಮೇಶಗೆ ಮುಖ್ಯದಾಸನೆನುತಲೆ ವಾಸವಾದ ಬದರಿಯಲಿ ಮಧ್ವೇಶನೆನುತಲೆ5

***