Showing posts with label ಅನುಭವಿದೇ ನೋಡಿ ಆನಂದೋ ಬ್ರಹ್ಮ ಏನೆಂದ್ಹೇಳಲಿ mahipati ANUBHAVIDE NODI AANANDO BRAHMA ENENDHELALI. Show all posts
Showing posts with label ಅನುಭವಿದೇ ನೋಡಿ ಆನಂದೋ ಬ್ರಹ್ಮ ಏನೆಂದ್ಹೇಳಲಿ mahipati ANUBHAVIDE NODI AANANDO BRAHMA ENENDHELALI. Show all posts

Saturday, 4 December 2021

ಅನುಭವಿದೇ ನೋಡಿ ಆನಂದೋ ಬ್ರಹ್ಮ ಏನೆಂದ್ಹೇಳಲಿ ankita mahipati ANUBHAVIDE NODI AANANDO BRAHMA ENENDHELALI



.ಅನುಭವಿದೇ ನೋಡಿ ಆನಂದೋ ಬ್ರಹ್ಮ
ಏನೆಂದು ಹೇಳಲಿ ಇನ್ನಾಗು ಸಂಭ್ರಮ ||ಪ||

ಸುಖ ನೋಡಿ ನಮ್ಮ ಸ್ವಾನುಭವದ
ಸಖರಿಂದ ಮೀರಿ ಬಲು ಸುಸ್ವಾದ
ಆಖರಿಂದ ಕೇಳಿ ಗುರು ನಿಜಬೋಧ
ಶುಕಮುನಿ ಸೇವಿಸುವದಾ ||೧||

ಬೆರೆದು ನೋಡಿ ಆರು ಚಕ್ರವೇರಿ
ಸುರಿಯುತಿದೆ ಸುಖಸಂತ್ರಾಧಾರಿ
ಭೋರ್ಗರೆಯುತಿದೆ ಅನಂತಪರಿ-
ದೋರಿ ಕೊಡುತಾನೆ ಶ್ರೀಹರಿ ||೨||

ಸುಗ್ಗಿ ಇದೇ ನೋಡಿ ಸುಜ್ಞಾನಿಗಳು
ಲಗ್ಗೆ ಮಾಡಿಕೊಳ್ಳಿ ಅದೆ ಬಲು ಬಹಳ
ಬೊಗ್ಗಿ ಉಣಬೇಕು ಇದು ಸರ್ವಕಾಲ
ಹಿಗ್ಗಿಕೊಳ್ಳೊ ಮಹಿಪತಿ ನೀ ತರಳ ||೩||
***

Anubhavide nodi anando brahma
enendu helali innagu sambhrama ||pa||

Sukha nodi namma svanubhavada
sakharinda miri balu susvada
akharinda keli guru nijabodha
shukamuni sevisuvada ||1||

Beredu nodi aru chakraveri
suriyutide sukhasantradhari
bhorgareyutide anantapari-
dori kodutane srihari ||2||

Suggi ide nodi sujnanigalu
lagge madikolli ade balu bahala
boggi unabeku idu sarvakala
higgikollo mahipati ni tarala ||3||
***
ಅನುಭವಿದೇ ನೋಡಿ ಆನಂದೋ ಬ್ರಹ್ಮ
ಏನೆಂದ್ಹೇಳಲಿನ್ನಾಗು ಸಂಭ್ರಮ ||ಧ್ರುವ||

ಸುಖ ನೋಡಿ ನಮ್ಮ ಸ್ವಾನುಭವದ
ಸಖರಿಂದ ಮೀರಿ ಬಲು ಸುಸ್ವಾದ
ಆಖರಿಂದ ಕೇಳಿ ಗುರು ನಿಜಬೋಧ
ಶುಕಮುನಿ ಸೇವಿಸುವದಾ ||೧||

ಬೆರೆದು ನೋಡಿ ಆರು ಚಕ್ರವೇರಿ
ಸುರಿಯುತಿದೆ ಸುಖಸಂತ್ರಾಧಾರಿ
ಭೋರ್ಗರೆಯುತಿದೆ ಅನಂತಪರಿ-
ದೋರಿ ಕೊಡುತಾನೆ ಶ್ರೀಹರಿ ||೨||

ಸುಗ್ಗಿ ಇದೇ ನೋಡಿ ಸುಜ್ಞಾನಿಗಳು
ಲಗ್ಗೆ ಮಾಡಿಕೊಳ್ಳಿ ಅದೆ ಬಲು ಬಹಳ
ಬೊಗ್ಗಿ ಉಣಬೇಕು ಇದು ಸರ್ವಕಾಲ
ಹಿಗ್ಗಿಕೊಳ್ಳೊ ಮಹಿಪತಿ ನೀ ತರಳ ||೩||
***

ಮಾಲಕಂಸ್ ರಾಗ ತಾಳ ತ್ರಿತಾಳ

 kruti ಕಾಖಂಡಕಿ ಶ್ರೀ ಮಹಿಪತಿರಾಯರು

ಅನುಭವವಿದೇ ನೋಡಿ ಆನಂದೋ ಬ್ರಹ್ಮ ಏನೆಂದ್ಹೇಳಲಿನ್ನಾಗುವ ಸಂಭ್ರಮ ಧ್ರುವ ಸುಖ ನೋಡಿ ನಮ್ಮ ಸ್ವಾನುಭವದ ಸಖರಿಂದ ಮೀರಿ ಬಲು ಸುಸ್ವಾದ ಅಖರಿಂದ ಕೇಳಿ ನಿಜ ಬೋಧಾ ಶುಕಮುನಿ ಸೇವಿಸುದಾ 1 

ಬೆರೆದು ನೋಡಿ ಆರು ಚಕ್ರವೇರಿ ಸುರಿಯುತಿದೆ ಸುಖ ಸಂತ್ರಾಧಾರಿ ಭೋರ್ಗರೆಯುತಿದೆ ಅನಂತ ಪರಿ- ದೋರಿ ಕೊಡುತಾನೆ ಶ್ರೀಹರಿ 2 

ಸುಗ್ಗಿ ಇದೇ ನೋಡಿ ಸುಜ್ಞಾನಿಗಳು ಲಗ್ಗೆ ಮಾಡಿಕೊಳ್ಳಿ ಅದೆ ಬಲು ಬಹಳ ಬೊಗ್ಗಿ ಉಣಬೇಕು ಇದು ಸರ್ವಕಾಲ ಹಿಗ್ಗಿಕೊಳ್ಳೊ ಮಹಿಪತಿ ನೀ ತರಳ 3

***