ಕಾಖಂಡಕಿ ಪ್ರಸನ್ನ ವೆಂಕಟದಾಸರ stutih
ಸಿರಿವಿರಿಂಚಿ ಭವೇಂದ್ರಾದಿ ಸುರರಿಂದ ರ್ಚಿತನಾದ ಸಿರಿ ಪ್ರಸನ್ನವೆಂಕಟನ್ನನಿರುತ ಸ್ಮರಿಪ ಕಾಖಂಡಿಕಿ ವೆಂಕಪ್ಪನವರ ಚರಣವನೆ ನೆನೆವನೆ ಧನ್ಯಾಮಾನ್ಯ ಪ
ಮರುತ ಮತಾಬ್ಧಿ ಮರಕತ ಭೂಸುರಜನ್ಮ ಧರನಾಗಿಭೂಮಿಯೊಳುದಿಸಲುತರುಳತ್ವ ಕಳೆದು ತರುಣತನ ಬರಲಿನ್ನು ಅರಿವ ಕಾಣದೆ ಇರುತಿರಲುಹರಿನಾಮಾವಳಿಗಳು ಬರೆದು ಓದುವ ಭಾಗ್ಯ ಅರಿವೆನೆಂದರೆ ಬಾರದಿರಲುತೊರೆದು ಮನೆಯವರ ಗಿರಿಯಾತ್ರೆ ಮಾಳ್ಪರನನುಸರಿಸಿ ತೆರಳಿಬರುತಿರಲು 1
ಹಸನಾಗಿ ಕಪಿಲ ತೀರ್ಥದಲಿ ಮಜ್ಜನಗೈದು ಶಶಿಧರನ ಅಡಿಗಳಿಗೆರಗಿಎಸೆವ ಪರ್ವತಾರೋಹಣವ ಮಾಡಿ ಸ್ವಾಮಿ ಪುಷ್ಕರಣಿ ತೀರ್ಥದಲಿಮುಳುಗಿಬಿಸಜದಾಳಾಕ್ಷ ವರಾಹ ಮೂರ್ತಿಯನೆ ಕಂಡಾಲಸವ ಮಾಡದಲೆಚೆನ್ನಾಗಿಝಷಕೇತು ಜನಕನ ಪುಟ್ಟಿಸಿದ ಕಾರಣವೇನು ಉಸಿರೆಂದು ಚರಣಕ್ಕೆಬಾಗಿ 2
ವಂದಿಸಿದ ಕ್ಷಣ ಸ್ವಪ್ನದಿ ಪ್ರಸನ್ನವೆಂಕಟನೆಂದು ಬರೆಯೆ ನಾಲಿಗೆಲಿನಂದದಿಂದೆಚ್ಚೆತ್ತು e್ಞÁನವುದಿಸೆ ಮುಕುಂದನ ಕಂಡು ಎದೆಯಲಿಚಂದ ಚಂದದಿ ಪೊಗಳುತ್ತ ಕಂಗಳಿಂದಾ ನಂದಬಾಷ್ಪ ಸುರಿಸುತಲಿಇಂದು ಧನ್ಯನಾದೆನೆಂದು ತೋಷಾಬ್ಧಿಯ ಹೊಂದಿ ಹರಿಯಾಜ್ಞೆಯಲಿತೆರಳಿ 3
ಹಿತದಿ ಮಾತಿಗೆ ಬಂದಚ್ಯುತನ ನಾಮಾವಳಿ ಅತಿಶಯ ಭಕುತಿ ಪೂರ್ವಕದಿಸತತ ಅನೇಕ ಗ್ರಂಥಗಳು ದಶಮಸ್ಕಂಧ ಭಾಗವತ ಪೂರ್ವಾರ್ಧಕನ್ನಡದಿಮತಿಪೂರ್ವಕ ರಚಿಸುತಾನಂದವು ತುಳುಕು ತಿಹುದು ಕವಿತೆಯಲಿನುತಿಸಿ ದುರ್ಮತ ನಿರಾಕರಿಸಿ ಬಾಳಿ ಬಲು ಕುಲ ತತಿ ಶುದ್ಧಮಾಳ್ಪರು ಹರಿಪುರವಹೊಂದಿ 4
ಕಲಿಕಾಲದಿ ನರಹರಿ ನಾಮ ಸ್ಮರಣೆಯು ಮುಖದಿಂದ ಬರುವುದು ಅತ್ಯಸಾಧ್ಯಲಲಿತಕವನದಿ ತುತಿಸೆ ರಮಾಪತಿವಿಠಲನು ಒಲಿವನು ಇದು ಸತ್ಯಹಲವು ಮಾತೇಕಿವರು ಸುರರೇ ಸರಿ ನರರಲ್ಲ ಇದು ಸಿದ್ಧವೇ ಸಿದ್ಧಛಲದಿ ಮನುಜನೆಂಬಧಮನು ಹರಿಯಾಜ್ಞೆಯಲಿ ಬಲು ಬಲು ನರಕದೊಳು ಬೇಳುವುದುರಾದ್ಧ 5
****
ಶ್ರೀ ರಮಾಪತಿ ವಿಠಲರು...
ರಾಗ : ರೇಗುಪ್ತಿ ತಾಳ : ಝ೦ಪೆ
ಸಿರಿ ವಿರಿಂಚಿ ಭವೇಂದ್ರಾದಿ ಸುರರಿಂದರ್ಚಿತನಾದ ।
ಸಿರಿ ಪ್ರಸನ್ವೇ೦ಕಟನ್ನ ನಿರುತ ।
ಸ್ಮರಿಪ ಕಾಖಂಡಕೀ ವೆಂಕಪ್ಪನವರ ।
ಚರಣವನೆ ನೆನೆವನೆ ಧನ್ಯಾ - ಮಾನ್ಯ ।। ಪಲ್ಲವಿ ।।
ಮರುತಮತಾಬ್ಧಿ ಮರಕತ ।
ಭೂಸುರ ಜನ್ಮ ಧರನಾಗಿ ಭುವಿಯೊಳುದಿಸಲು ।
ತರಳತ್ವ ಕಳೆದು ತರುಣ ತನ ಬರಲಿನ್ನು ।
ಅರಿವೆ ಕಾಣದೆ ಇರುತಿರಲು ।।
ಹರಿ ನಾಮಾವಳಿಗಳ ಬರೆದು ಓದುವ ಭಾಗ್ಯ ।
ಅರಿವೆನೆಂದರೆ ಬಾರದಿರಲು ।
ತೊರೆದು ಮನೆಯವರ ಗಿರಿಯಾತ್ರೆ । ಮಾ ।
ಳ್ಪನನುಸರಿಸಿ ತೆರಳು ತಿರಲು ।। ಚರಣ ।।
****