Showing posts with label ಜಯ ಜಯ ಗುರುನಾಥ ದಯ ಗುಣದಲಿ ಅಖಂಡಿತ mahipati. Show all posts
Showing posts with label ಜಯ ಜಯ ಗುರುನಾಥ ದಯ ಗುಣದಲಿ ಅಖಂಡಿತ mahipati. Show all posts

Wednesday, 1 September 2021

ಜಯ ಜಯ ಗುರುನಾಥ ದಯ ಗುಣದಲಿ ಅಖಂಡಿತ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಜಯ ಜಯ ಗುರುನಾಥ ದಯ ಗುಣದಲಿ ಅಖಂಡಿತ ಪ  

ಅನುಗ್ರಹದಲಿ ಸಮರ್ಥ ಜನವನದೋರುವೆ ಪರಮಾರ್ಥ ನೀನೆ ಸಕಲಾರ್ಥ ಅಣು ರೇಣುಕ ಸುಹಿತಾರ್ಥ 1 

ಬಡವರಿಗಾಧಾರಿ ನೀಡುವುದರಲಿ ಘನ ಉದಾರಿ ಕುಡುವೆ ನಿಜದೋರಿ ಕಡೆಗಾಣಿಸುವೆ ಸಹಕಾರಿ 2 

ಪಿಡಿದವರ ಕೈಯ ಬಿಡ ಎಂದೆಂದಿಗೆ ನಿಶ್ಚಯ ಒಡೆಯನಹುದಯ್ಯ ಮೂಢ ಮಹಿಪತಿ ಮಹದಾಶ್ರಯ 3

****