Showing posts with label ಪಾಲಿಸೋ ನರಸಿಂಹ ಪಾಲಿಸೊ jagannatha vittala. Show all posts
Showing posts with label ಪಾಲಿಸೋ ನರಸಿಂಹ ಪಾಲಿಸೊ jagannatha vittala. Show all posts

Saturday, 14 December 2019

ಪಾಲಿಸೋ ನರಸಿಂಹ ಪಾಲಿಸೊ ankita jagannatha vittala

ರಾಗ - ಶಂಕರಾಭರಣ ( ಭೀಮ್ ಪಲಾಸ್) ಅಟತಾಳ ( ತೀನ್ ತಾಲ್) 

ಪಾಲಿಸೋ ನರಸಿಂಹ ಪಾಲಿಸೊ ||ಪ||

ಪಾಲಿಸೊ ಪರಮಪಾವನ ಕಮ-
ಲಾಲಯ ನಂಬಿದೆ ನಿನ್ನ ಆಹಾ
ಬಾಲೇಂದುಕೋಟಿಯ ಸೋಲಿಪ ನಖತೇಜ
ಮೂರ್ಲೋಕದರಸನೆ ಪಾಲಿಸು ಬಿಡದಲೆ ||ಅ.ಪ||

ಹಿಂದೆ ಪ್ರಹ್ಲಾದನ ಮೊರೆಯ ಕೇಳಿ
ಬಂದು ಕಾಯ್ದೆಯೊ ಭಕ್ತಪ್ರಿಯಸಖ
ಸಂದೋಹ ಮೂರುತಿ ಆಯತಾಕ್ಷ
ಎಂದೆಂದು ಬಿಡದಿರು ಕೈಯ ಆಹಾ
ವೃಂದಾರಕೇಂದ್ರಗಳ ಬಂದ ದುರಿತಗಳ
ಹಿಂದೆ ಮಾಡಿ ಕಾಯ್ದ ಇಂದಿರಾರಮಣನೆ ||೧||

ಹರಣದಲ್ಲಿ ನಿನ್ನ ರೂಪ ತೋರಿ
ಪರಿಹರಿಸೊ ಎನ್ನ ತಾಪ, ದೂರ
ಇರದಿರೊ ಹರಿ ಸಪ್ತದ್ವೀಪಾಧಿಪ
ಸಿರಿಪತಿ ಭಕ್ತ ಸಲ್ಲಾಪ ಆಹಾ
ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ
ನರಕಂಠೀರವ ನಿನ್ನ ಚರಣ ಆಶ್ರಯಿಸಿದೆ ||೨||

ಶರಣಪಾಲಕನೆಂಬೊ ಬಿರುದು ಕೇಳಿ
ತ್ವರಿತದಿ ಬಂದೆನೊ ಅರಿದು ಇನ್ನು
ಪರಿಪರಿ ಆರಾಧ ಮರೆದು , ಪರ -
ತರನೆ ನೋಡೆನ್ನ ಕಣ್ ತೆರೆದು ಆಹಾ
ಮರಣ-ಜನನಗಳ ತರಿದು ಬಿಸುಟು ನಿನ್ನ
ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ ||೩||

ಸಂಸಾರಸಾಗರದೊಳಗೆ ಎನ್ನ
ಹಿಂಸೆಗೊಳಿಸುವರೆ ಹೀಗೆ ಎಲೊ
ಕಂಸಾರಿ ಬಾಗೆ ಅನ್ಯರಿಗೆ ಮತ್ತೆ
ಸಂಶಯವಿಲ್ಲೀ ಮಾತಿಗೆ ಆಹಾ
ಹಂಸಡಿಬಿಕರನ್ನು ಧ್ವಂಸ ಮಾಡಿದ ಶೌರಿ
ಶಿಂಶುಮಾರಮೂರ್ತಿ ದಿವಸದಿವಸದಲ್ಲಿ ||೪||

ಸಿರಿಬೊಮ್ಮ ಭವಶಕ್ರಸುರರ ಕೈಯ
ನಿರುತ ಸ್ತುತಿಸಿಕೊಂಬ ಧೀರ ಶುಭ-
ಪರಿಪೂರ್ಣ ಗುಣ ಪಾರಾವಾರ ಪೊರೆ-
ವರ ಕಾಣೆನಂತ ಸುಂದರ ಆಹಾ
ಸ್ಮರನ ಕಾಂತಿಯ ನಿರಾಕರಿಸುವ ತೇಜನೆ
ಎರವು ಮಾಡದೆ ಹೃತ್ಸರಸಿಜದೊಳು ತೋರಿ ||೫||

ಮೊದಲು ಮತ್ಸ್ಯಾವತಾರದಿ ವೇದ
ವಿಧಿಗೆ ತಂದಿತ್ತೆ ವಿನೋದಿ ಆ Sಅ-
ರಧಿಯೊಳು ಸುರರಿಗೋಸ್ಕರ ನೀನು
ಸುಧೆಯ ಸಾಧಿಸಿ ಉಣಿಸಿ ದಿ ಆಹಾ
ಅದ್ಭುತ ಭೂಮಿಯ ತೆಗೆದೊಯ್ದನ ಕೊಂದು
ಮುದದಿ ಹಿರಣ್ಯಕನುದರ ಬಗೆದ ಧೀರ ||೬||

ಬಲಿಯ ಮನೆಗೆ ಪೋಗಿ ದಾನ ಬೇಡಿ
ತುಳಿದೆ ಪಾತಾಳಕ್ಕೆ ಅವನ ಪೆತ್ತ -
ವಳ ಶಿರತರಿದ ಪ್ರವೀಣ ನಿನ್ನ
ಚಲಕೆಣೆಗಾಣೆ ರಾವಣ ನ ಆಹಾ
ತಲೆಯನಿಳುಹಿ ಯದುಕುಲದಿ ಜನಿಸಿ ಮತ್ತೆ
ಲಲನೇರ ಪತಿವ್ರತವಳಿದ ಅಶ್ವಾರೂಢ ||೭||

ಮಾನಸಪೂಜೆಯ ದಯದಿ ಇತ್ತ್ಯು
ಶ್ರೀನಾಥ ಕಳೆ ಭವವ್ಯಾಧಿ, ಕಾಯೊ
ಅನಾಥ ಬಂಧು ಸುಮೋದಿ ಚತು-
ರಾನನಪಿತ ಕೃಪಾಂಬೋಧಿ ಆಹಾ
ನಾನೊಬ್ಬರನರಿಯೆ ಗಾನವಿನೋದಿಯೆ
ಏನೇನು ಮಾಡುವ ಸಾಧನ ನಿನ್ನದು ||೮||

ನಿನ್ನ ಸಂಕಲ್ಪವಲ್ಲದೆ ಇನ್ನು
ಅನ್ಯಥಾ ಆಗಬಲ್ಲುದೆ ಇದು
ಚೆನ್ನಾಗಿ ನಾ ತಿಳಿಯದೆ ಮಂದ
ಮಾನವನಾಗಿ ಬಾಳಿದೆ ಆಹಾ
ಎನ್ನಪರಾಧವ ಇನ್ನು ನೀ ನೋಡದೆ
ಮನ್ನಿಸು ದಯದಿ ಜಗನ್ನಾಥ ವಿಠಲ ||೯||
***

pallavi

pAlisO narasimhA pAlisO

anupallavi

pAlisO parama pAvana kamalAlaya nambide ninna AhA bAlEndu kOTiya sOlippa nakha tEja mUrlOkadarasane pAlisu biDadale

caraNam 1

hinde prahlAdana moreya kELi bandu kAideyO bhakta priya sakha
sandOha mUruti kAyatAksha endendu biDadiru kaiya AhA
vrandAra kEnrara banda duritagaLa hinde mADi kAida indirArAmaNane

caraNam 2

haraNadalii ninna rUpa tOri pariharisO enna tApa dUra iradirO hari
sapta dvIpAdhipa siripati bhakta sallApa AhA karaNa shuddhana mADi
kareyO ninna baLige narakaNThIrava ninna caraNa Ashrayiside

caraNam 3

sharaNa pAlakanembO birudu kELi tvaritadi bandenO aridu innu
paripari aparAda maredu paratarane nODenna kaN teredu AhA
maraNajananagaLa taridu bisuTu ninna sharaNara sangadallirisi uddarisanna

caraNam 4

samsAra sAgadoLage enna himsgoLisuvare hIge elO kansAribAge
anyarige matte samshayavillI mahatige AhA hamsaDibikarennu
dhvamsa mADida shauri shimshumAra mUrti divasa divasadalli

caraNam 5

siri bomma bhava shakra surara kaiy niruta stutisikomba dhIra
shubha paripUrNa guNa pArAvAra porevara kANenanta sundara AhA
smaraNakAntiya nirAkarisuva tEjane eravu mADade hrtsarasijadoLu tOri

caraNam 6

modalu matyAvatAradi vEda vidhige tanditte vinOdi A sharadhiyoLu
suararigOskaradi nInu sudheya sAdhisi uNisidi AhA adbhuta bhUmiya
tegedoidana kondu mudadi hiraNyakanudara bageda dhIra

caraNam 7

baliya manege pOgi dAnabEDi kuLide pAtALakke avana pettavaLa
shiratarida pravINa ninna chalakeNegANe rAvaNana AhA
taleya niruhi yadukuladi janisi matta lalanEra pativrata oLida ashvArUDha

caraNam 8

mAnasa pUjeya daydi ittu shrInAtha kaLe bhava vyAdhi kAyO
anAtha bandhu sumOdi caturAnana pita krpAmbOdhi AhaA
nAnobbara hariyE gAna vinOdiyE EnEnu mADuva sAdhana ninnadu

caraNam 9

ninna sankalpavalladE innu anyathA AgaballadE idu
cennAgi nA tiLiyadE mandamAnavAgi bALidE AhA
ennaparAdhava innu nI nODade mannisu dayadi jagannAtha viThala
***