ಚಲುವಾ ಕೃಷ್ಣಾ ನಿನ್ನ ನಿಲುವು ನೋಡದೆ ದುಃಖಬಲು ಭಾರವಾಗಿಹುದೋ ಪ
ನಳಿನ ನಯನನೆ ಮನ ನಿಲಯದೊಳಗೆಇಲ್ಲಿ ಸುಳಿವು ತೋರಿಸಬಾರದೆ - ಹೆಚ್ಚಿನದೆ ಅ.ಪ
ಇಂದು ಮಧ್ಯಾನ್ಹ ಒಂದೇ ಮನದಿ ನಾನುನಿನ್ನ ಮಾತೇ ಚಿಂತಿಸಿಕುಂದಣ ಕೆತ್ತಿದ ಸುಂದರಾಭರಣಗಳುಇಂದು ಶೋಭಿಪ ರೂಪದಿ ನೀ ಪೊಳೆದಿ 1
ಇಂಥಾ ರೂಪವೆ ಮತ್ತೆ ಕಂತುಪಿತನೆ ತೋರೋಅಂತರಂಗದಿ ಎನ್ನಲಿ ಚಿಂತಿಸಿದೆನುಸಿರಿಕಾಂತಾ ತೋರದ ದಾರಿಭ್ರಾಂತಿಯಾಗಿದೆ ಮನಕೆ ಪೇಳದಕ್ಕೆ 2
ಇಂದಿರೇಶನೆ ಇಂಥಾ ಆನಂದಕ್ಕೆ ಸಮವಾದಆನಂದವಿಲ್ಲವೋ ಜಗದಿನಿಂದು ಕರವ ಮುಗಿದು ಇಂದು ಪ್ರಾರ್ಥಿಪೆ ಬೇಗಾನಂದ ಬಾಲನೆ ಸುಳಿಯೋ ನೀ ನಲಿಯೋ 3
****