ankita ಶ್ರೀಕರವಿಠಲ
ರಾಗ: ಯದುಕುಲಕಾಂಬೋಜಿ ತಾಳ: ಆದಿ
ಸಾಗಿಬಾರೊ ಗುರು ರಾಘವೇಂದ್ರರಾಯ ಮುಗಿವೆನು ಕರಉಭಯ ಪ
ಬಾಗಿಭಜಿಪೆ ಅನುರಾಗದಿ ಕೋರಿಕೆಯ ಸಲಿಸಲು ಮುನಿರಾಯ ಅ.ಪ
ಮಾಗಧರಿಪುಮತ ಸಾಗರದೊಳಗಿರುವ ಮೀನನೆಂದೆನಿಸುವ
ಯೋಗಿವರ್ಯ ಕೃಪಾಸಾಗರ ಸಲ್ಲಿಸುವ ಸೇವೆಯ ಕೈಗೊಳುವ
ಕೂಗಿಕರೆಯಲತಿವೇಗದಿ ಬಂದು ಪೊರೆವ ಬಿರುದನೆ ಧರಿಸಿರುವ 1
ನೇಮದಿಂದಲಿ ತವ ನಾಮ ಸ್ಮರಣೆಯ ಮಾಡುವ ಬಹುಪರಿಯ
ಸ್ವಾಮಿ ನಿನಗೆನ್ನ ಮನಸಿನಸ್ಥಿತಿಯು ತಿಳಿಯದೆ ಮಹರಾಯ
ನೀ ಮಾಡದೆ ತಡ ನೀಡೆನಗಭಯವರಕವಿಜನಗೇಯ 2
ಶ್ರೀಕರವಿಠಲನ ವಾಕುಲಾಲಿಸಿ ಬಂದ ಯತಿರೂಪದಲಿಂದ
ಬೇಕಾದ ವರವನು ಪಡೆದ ಭಕ್ತವೃಂದನಿನ್ನಯ ದಯದಿಂದ
ಯಾಕೆ ನಿರ್ದಯವಿಷ್ಟು ಬಾರಯ್ಯ ತ್ವರದಿಂದ ಮಂತ್ರಾಲಯದಿಂದ 3
***