Showing posts with label ಹರಿನೀನೆವೆ ಸರ್ವ ಚೇತನ ಧೃತಿಯ ಸಕಲವೇ gurumahipati. Show all posts
Showing posts with label ಹರಿನೀನೆವೆ ಸರ್ವ ಚೇತನ ಧೃತಿಯ ಸಕಲವೇ gurumahipati. Show all posts

Wednesday 1 September 2021

ಹರಿನೀನೆವೆ ಸರ್ವ ಚೇತನ ಧೃತಿಯ ಸಕಲವೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹರಿ ನೀನೆವೆ ಸರ್ವ ಚೇತನ ಧೃತಿಯ ಸಕಲವೇ | ಧರಿಯೊಳು ನಾನೆಂಬುವ ಗುಣವೇ ವರಶೃತಿ ನೇಹನಾ ನಾಸ್ತಿಯಂದು | ಸಾರುವದಿದಕನು ಮಾನವೇ ಪ 


ಬಯಲೊಳು ಪುಟ್ಟದ ಪರಿಪರಿನಾದದ | ಹೊಯಿಲಿನ ಮಂಜುಳ ಶಬ್ದವಾ | ಬಯಲದಿ ಕೇಳಿತಲ್ಲಿನವ ಹೊಂದುವಾ | ಬಯಲಾಧಾರ ನೀನಲ್ಲವೇ 1 

ಸೃಷ್ಟಿಯೊಳಗ ಕಮನೀಯ ಲಾವಣ್ಯದು | ತ್ಕøಷ್ಟತರ ಮೋಹನ ರೂಪವಾ | ದೃಷ್ಟಿಲಿ ಕಾಣುತ ಸುಖದೋಳಗಾಗುವ | ದೃಷ್ಟಸ್ವ ತೇಜ ನೀನಲ್ಲವೆ 2 

ಕಮಲ ಪಾರಿಜಾತ ಮಲ್ಲಿಗೆ ಮಕ | ರಂಗದೊಳಗ ಸುಳಿದಾಡುತ | ಮಂದ ಮಾರುತ ಬಂದು ಸೋಕಲು ನಲಿವಾ | ಸುಂದರ ರೂಪನು ನೀನಲ್ಲವೆ 3 

ರಸಭರಿತ ಬೇರೆ ಬೇರೆ ದೋರುತಲಿಹಾ | ಅಸಮತೆರೆದ ಪದರ್ಥವನು | ರಸನಾದಿ ಕೊಂಡು ಸವಿಗೆ ತಲೆದೂಗುವಾ | ಕುಶಲ ಭೋಕ್ತನುನೀನಲ್ಲವೇ 4 

ಚೆನ್ನಾಗಿ ಕಸ್ತೂರಿ ಪುಳಕವ ಕೂಡಿಸಿ | ಪನ್ನೀರವನು ಮೇಲೆದಳಿದು | ಉನ್ನತ ಚಂದನ ಲೇಪಿಸೆ ಸುವಾ | ಸನೆ ಕೊಂಬುವ ನೀನಲ್ಲವೇ 5 

ಅಷ್ಟದಳ ಕಮಲದಳ ಗದ್ದುಗಿಯೊಳು ನಿಂದು | ಅಷ್ಟಮ ಸ್ಥಳಗಳ ಮುಟ್ಟಿಸಿ | ನೆಟ್ಟಿನೆ ಮುಖದೊಳು ಸವಿಸವಿ ಮಾತವ | ಸ್ಪಷ್ಟದಿ ನುಡಿಪ ನೀನಲ್ಲವೇ 6 

ಭಜಕನ ಮಾಡಿ ಸೌಮ್ಯತನದಿ ಕರದಿಂದ | ರಜತಮ ವಿರಹಿತ ದಾನವನಾ | ದ್ವಿಜರಿಗೆ ಕುಡಿಸಿ ಅದರಶ್ರಯ ಕೊಂಬುವ | ನಿಜಶಯ ಕರ್ತನು ನೀನಲ್ಲವೇ 7 

ಪವನಭ್ರವ ನಡೆಸುವಪರಿಚರಣದಿ | ಜವದಿ ಸುಕೇತ್ರ ಯಾತ್ರೆಯಾ | ಬವರದಿ ಮಾಡಿ ಪುಣ್ಯ ಅರ್ಪಿಸಿ ಕೊಂಬಾ | ಭುವನ ಪಾವನ ನೀನಲ್ಲವೇ 8 

ರಸನುಂಡು ಕಬ್ಬ ಹಿಪ್ಪಿಯುಗುಳುವಂತೆ | ಅಸಮತೆ ರಚಿಸಿ ಸರ್ವಾಂಗರ | ರಸವಿತ್ತು ಮಲವಘ ಮುಖದಿಂದ ಪವನದಿ | ಬಿಡಸುವನು ನೀನಲ್ಲವೇ 9 

ಅಂಗನೆಯರ ಧೃಡಾಲಿಂಗನವನು ಮನ| ದಿಂಗಿತದಂದದಿ ಗೈಯ್ಯಲು | ಅಂಗಸಂಗದ ಲೋದಗುವ ಭೋಗಿಪ | ಅಂಗಜ ಜನಕ ನೀನಲ್ಲವೇ 10 

ಯಂತ್ರವಾಹಕ ನಂದದಿ ಜಗನಿರ್ಮಿಸಿ | ಚಿತ್ರ ವಿಚಿತ್ರವ ದೋರುವಾ | ಅಂತ್ರ ಬಾಹ್ಯವ್ಯಾಪಕ ಮಹಿಪತಿ ಸುತ ಪ್ರಭು | ಸೂತ್ರಧಾರಿ ನೀನಲ್ಲವೆ 11

***