..
kruti by radhabai
ಪರಿಪಾಲಿಪುದೈ ಗುರುವೆ ನೆರೆನಂಬಿದೆನಯ್ಯ ಪ್ರಭುವೆ ಪ
ಮೋಸ ಹೋದೆನಲ್ಲಾ | ಬಲು ಘಾಸಿ ಗೊಂಡೆನಲ್ಲಾ
ಮಾಯಾ ಪಾಶದಿ ಸಿಲುಕಿದೆನಲ್ಲಾ | ಉ-
ಪಾಯ ವನರಿಯೆ ಪಾಲಿಸೈ ಪ್ರಭವೇ 1
ಆರಿಗೆ ಮೊರೆಯಿಡಲೋಲಿ ಮತ್ಯಾರನು
ಬೇಡಲೋ ಪ್ರಭುವೇ
ಆರೆನ್ನ ಸಲಹುವರೋ ದಾರಿಯಕಾಣೆನೊ
ಕಾಯೋ ಪ್ರಭುವೇ 2
ಶರಣೆಂದವರನು ಪೊರೆವಾ ಬಿರುದನು
ಉಳಿಸಿಕೊ ಗುರುದೇವಾ
ನಿರುತದಿ ಮಾಡುವೆ ನಿನ್ನ ಸೇವಾ ಕರುಣಿಸು
ಶ್ರೀ ರಾಘವೇಂದ್ರಾ 3
***