Showing posts with label ನೀನೇ ರಕ್ಷಿಸೋ ಎನ್ನ ಓ ಶ್ರೀನಿವಾಸ ದಾನವಾಂತಕ govinda NEENE RAKSHISO ENNA O SRINIVASA DAANAVAANTAKA. Show all posts
Showing posts with label ನೀನೇ ರಕ್ಷಿಸೋ ಎನ್ನ ಓ ಶ್ರೀನಿವಾಸ ದಾನವಾಂತಕ govinda NEENE RAKSHISO ENNA O SRINIVASA DAANAVAANTAKA. Show all posts

Wednesday, 10 November 2021

ನೀನೇ ರಕ್ಷಿಸೋ ಎನ್ನ ಓ ಶ್ರೀನಿವಾಸ ದಾನವಾಂತಕ ankita govinda NEENE RAKSHISO ENNA O SRINIVASA DAANAVAANTAKA

ರಾಗ ಜೋಗಿಯಾ

by ಗೋವಿಂದದಾಸ

ನೀನೆ ರಕ್ಷಿಸೋ ಎನ್ನ ಓ ಶ್ರೀನಿವಾಸ 
ದಾನವಾಂತಕ ದೀನಪಾಲ ಲಕ್ಷ್ಮೀಶಾ ಪ

ಮೌನಿ ಹೃದಯಾ ಸುಮವಾಸಾ ಸರ್ವೇಶಾಮೌನದಿಂದಿರಲೇನೋ ಕಾಣೆ ವಿಶೇಷಾಮೌನ ಮಂತ್ರವು ಸ್ನಾನಾ ಧ್ಯಾನಾವನರಿಯೆದೈನ್ಯ ಭಕ್ತಿಯೊಳ್ ಬೇಡಿಕೊಂಬೆ ಶ್ರೀಹರಿಯೆ 1

ಲೋಕನಾಥನೆಜವಶೋಕವಿಹಾರಾಏಕರೂಪನೆ ಸರ್ವ ಲೋಕ ಸಂಚಾರಾನಾಕಸುಖವ ನಾನು ಬಯಸುವನಲ್ಲಬೇಕಾದ ಸೌಭಾಗ್ಯವೆನಗಿತ್ತೆ ಎಲ್ಲಾ 2

ಮಂದರೋದ್ಧರ ಅರವಿಂದ ಲೋಚನನೇಇಂದಿರೆಯರಸ ಮುಕುಂದ ಮಾಧವನೇವಂದಿಸೂವೆನು ದಂದಶೂಕ ಶಯನನೇಸುಂದರಮೂರ್ತಿ ಗೋವಿಂದದಾಸನನೇ 3
****