Showing posts with label ಗುರುರಾಯಾ ಗುರುರಾಯಾ ಕರುಣಾನಿಧಿ ಕಲಿಯುಗದ ಕಲ್ಪತರು bhupati vittala. Show all posts
Showing posts with label ಗುರುರಾಯಾ ಗುರುರಾಯಾ ಕರುಣಾನಿಧಿ ಕಲಿಯುಗದ ಕಲ್ಪತರು bhupati vittala. Show all posts

Monday, 6 September 2021

ಗುರುರಾಯಾ ಗುರುರಾಯಾ ಕರುಣಾನಿಧಿ ಕಲಿಯುಗದ ಕಲ್ಪತರು ankita bhupati vittala

 ankita ಭೂಪತಿವಿಠಲ   

ರಾಗ: ಭೀಮ್‍ಪಲಾಸ್  ತಾಳ: ತ್ರಿ


ಗುರುರಾಯಾ ಗುರುರಾಯಾ ಕರುಣಾನಿಧಿ

ಕಲಿಯುಗದ ಕಲ್ಪತರು 


ನೀ ಕರುಣಿಸದೆ ನಿರಾಕರಿಸಿದರೆನ್ನ

ಸಾರುವರಾರೊ ದಯಾಸಾಂದ್ರ ರಾಘವೇಂದ್ರ  1

ನಂಬಿದೆ ನಿನ್ನನು ಅಂಬುಜನಾಭನ 

ಕಂಬದಿ ತೋರ್ದ ಗಂಭೀರ ಕುಮಾರಾ  2

ಹರಿಯ ಕುಣಿಸಿ ದೊರೆ ಭಯಪರಿಹರಿಸಿದ

ದುರ್ಮತ ತಿಮಿರ ಮಾರ್ತಾಂಡ ವ್ಯಾಸಮುನಿ  3

ಘನ್ನಮಹಿಮ ಸಂಪನ್ನ ಕಲ್ಪದ್ರುಮ

ನಿನ್ನನ್ನು ಬಿಟ್ಟರಿನ್ನಾರು ನಮಗೆ ಗತಿ ಗುರುರಾಯಾ  4

ಮೊರೆ ಹೊಕ್ಕವರನು ಪೊರೆಯುವನೆಂಬ ತವ 

ಬಿರುದು ಕಾಯೊ ಭೂಪತಿವಿಠಲ ಪ್ರೀಯಾ  5

***