Showing posts with label ಸುಕೃತ ಫಲಿಸಿತೆನಗೆ ಕೋವಿದಾಗ್ರಣಿ jagannatha vittala. Show all posts
Showing posts with label ಸುಕೃತ ಫಲಿಸಿತೆನಗೆ ಕೋವಿದಾಗ್ರಣಿ jagannatha vittala. Show all posts

Saturday, 14 December 2019

ಸುಕೃತ ಫಲಿಸಿತೆನಗೆ ಕೋವಿದಾಗ್ರಣಿ ankita jagannatha vittala

ಜಗನ್ನಾಥದಾಸರು
ಸುಕೃತ ಫಲಿಸಿತೆನಗೆ
ಕೋವಿದಾಗ್ರಣಿ ವ್ಯಾಸತತ್ವಜ್ಞರ ಕಂಡೆ ಪ

ಜೀವ ಸಾಮಾನ್ಯವೆಂದರಿಯದಿಲಿ ಶಾಸ್ತ್ರಗಳ
ನಾವಲೋಕನದಿ ಪೇಳ್ವರು ನಿತ್ಯದಿ
ದೇವಾಂಶರಿವರು ಸಂಶಯವು ಬಡಸಲ್ಲ ಮಾ
ಯಾ ವಲ್ಲಭನು ಇವರ ಹೃದಯದೊಳಗಿರುತಿಪ್ಪ 1

ಕವಿ ಭರಿಡಿತ ಮಹಾಮುನಿ ವ್ಯಾಸಕೃತ ಸುಭಾ
ಗವತಾದಿ ಗ್ರಂಥ ವ್ಯಾಖ್ಯಾನ ನೋಡಿ
ಭುವನೇಂದ್ರರಾಯರ ಕರುಣದಲಿ ತುರೀಯಾ ಶ್ರ
ಮನವಿತ್ತು ವ್ಯಾಸತತ್ವಜ್ಞ ರಹುದೆಂದು 2

ಈ ಜಗತ್ರಯ ದೊಳಗೆ ಪೂಜ್ಯ ಪೂಜಕರ ನಿ
ವ್ರ್ಯಾಜದಲಿ ತಳುಪಿದನು ಭಕ್ತಜನಕೆ
ಶ್ರೀ ಜಗನ್ನಾಥ ವಿಠಲನೊಬ್ಬ ಪೂಜ್ಯ ಪಂ
ಭವ ಭವರು ಪೂಜಕರೆಂಬುವರ ನೋಡ್ಡೆ 3
*********