ತಾನ್ಯಾರು ತನ್ನ ದೇಹವ್ಯಾರು
ದಿವ್ಯಜ್ಞಾನದಲಿ ತಿಳಿದಾತ ಪರಮ ಯೋಗಿ ಪ
ಸೂತಿಕಾವಸ್ಥೆಯಲಿ ನವಮಾಸ ನೆರೆದಾಗಮಾತೆಯುದರದಿ ಬಂದು ಬೆಳೆದು ನಿಂದುಪಾತಕವದೊಂದು ಮೂರುತಿಯಾದ ತನುವೆಂದುನೀತಿಯಲಿ ತಿಳಿದಾತ ಪರಮ ಯೋಗಿ 1
ಅಸ್ಥಿಪಂಜರದ ನರಗಳ ತೊಗಲಿನ ಹೊದಿಕೆಯವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯುರಕ್ತ ಮಲಮೂತ್ರ ಕೀವಿನ ಪ್ರಳಯದೊಡಲೆಂದುಸ್ವಸ್ಥದಿಂ ತಿಳಿದಾತ ಪರಮ ಯೋಗಿ 2
ಘೋರ ನರಕದ ತನುವು ಎಂದು ಮನದಲಿ ತಿಳಿದುಗೇರು ಹಣ್ಣಿನ ಬೀಜದಂತೆ ಹೊರಗಿದ್ದುಮಾರಪಿತ ಕಾಗಿನೆಲೆಯಾದಿಕೇಶವನ ಪಾದವಾರಿಜವ ನೆನೆದವನೆ ಪರಮ ಯೋಗಿ 3
***