Showing posts with label ಎರೆದು ಪೀತಾಂಬರವನುಡಿಸಿದಳಾಗ kamalanabha vittala. Show all posts
Showing posts with label ಎರೆದು ಪೀತಾಂಬರವನುಡಿಸಿದಳಾಗ kamalanabha vittala. Show all posts

Friday 27 December 2019

ಎರೆದು ಪೀತಾಂಬರವನುಡಿಸಿದಳಾಗ ankita kamalanabha vittala

by ನಿಡಗುರುಕಿ ಜೀವೂಬಾಯಿ
ಎರೆದು ಪೀತಾಂಬರವನುಡಿಸಿದಳಾಗವರಗೋಪಿಯು ಬೇಗಪ

ಮುರುಳಿಯನೂದುತ ಪರಿಪರಿ ಗೆಳೆಯರುಪರಮಾತ್ಮನೆ ನಿನ್ನರಸುತಲಿಹರೆಂದು ಅಪಗುರುಳು ಕೂದಲು ಮುಖದಲ್ಲಿ ಹೊಸ ಬೆವರುಥಳಥಳಿಸುತಲಿಹುದುಎಳೆಯ ಶ್ರೀ ತುಳಸಿಯ ವನಮಾಲೆಗಳುಗಳದಲಿ ಶೋಭಿಪುದುಅರಳು ಮಲ್ಲಿಗೆ ಪುಷ್ಪದ ಹಾರಗಳುಮುತ್ತಿನ ಪದಕಗಳುಕೊರಳೊಳು ಮುತ್ತಿನ ಸರಗಳಿಂದೊಪ್ಪುತಮುರುಳಿಯ ನೂದುತ ಸರಸರ ಬಾರೆಂದು 1

ಗುರುಳು ಕೂದಲೊಳೊಪ್ಪುವ ಅರಳೆಲೆಯುಸೊಗಸಿನ ನವಿಲ್ಗರಿಯುಬಿಗಿದು ಸುತ್ತಿದ ಸಿರದಲಿ ಕೇಶಗಳುಅತಿ ಶೋಭಿಸುತಿಹವುಚದುರಿದ ಕೇಶದಿ ಕೆಂದೂಳಿಗಳುಮಧುವೈರಿಯ ಕೇಳುವಿಧವಿಧ ರಾಗದಿ ಪಾಡುತ ನಿನ್ನನುಸದನದಿ ಪೂಜಿಸಿ ನೋಡುವೆ ಬಾರೆಂದು 2

ನೊಸಲಲ್ಲಿ ಕುಡಿನಾಮವನಿಟ್ಟಿಹಳುನೋಡುತ ಹಿಗ್ಗುವಳುಎಸಳು ಕಣ್ಣಿಗೆ ಕಪ್ಪನೆ ತೀಡುವಳುಬಣ್ಣಿಸಿ ಕರೆಯುವಳುಎಸೆವೊ ಕರ್ಣಕೆ ನೀಲದ ಬಾವುಲಿಯೂರತ್ನದ ಚೌಕಳಿಯುಬಿಸುಜನಾಭ ನಿನ್ನ ಶಶಿಮುಖಿಯರುಗಳುರಸಕಸಿ ಮಾಳ್ಪರು ಹಸನಾಗಿ ಕೂಡೆಂದು 3

ಅರಳುಕೆಂದಾವರೆ ಪೋಲುವಚರಣಸ್ಮರಿಸುವರ ಘಹರಣಸುರರುಕಿನ್ನರ ರೋಲೈಸುವಚರಣವರಸುಗುಣಾಭರಣಘಲುಘಲುಘಲುರೆಂದೊಪ್ಪುವಚರಣಸಜ್ಜನರಾಭರಣಅಡಿಯಿಡುತಲಿ ಬಾ ಮೃಡಸಖ ನಿನ್ನಯಅಡಿಗೆರಗುವರೈ ತಡೆಯದೆ ಬಾರೆಂದು 4

ವರಹಸ್ತದಿ ಬೆಣ್ಣೆಯ ಮುದ್ದೆಯ ಕೊಡುವೆಬಾರೆನ್ನಯ ದೊರೆಯೆಜರದೊಲ್ಲಿಯ ಮುರಳಿಸಹಿತ ನಡುವಿಗೆ ಕಟ್ಟುವೆನುಬಾ ಭಕುತರ ಪೊರೆಯೆಉಗುರಿಂದ ಗಿರಿಯನು ಎತ್ತಿದ ಧಣಿಯೆಸುರಚಿಂತಾಮಣಿಯೆಹಗಲು ಇರಳು ನಿನ್ನಗಲಿರಲಾರೆ ಶ್ರೀ-ಕಮಲನಾಭವಿಠ್ಠಲ ಬೇಗಬಾರೆಂದು 5
********