Showing posts with label ಮುನಿಯ ನೋಡಿರೊ ಮುಕುತಿ ಧನವ ಬೇಡಿರೊ gopala vittala MUNIYA NODIRO MUKUTI DHANAVA BEDIRO. Show all posts
Showing posts with label ಮುನಿಯ ನೋಡಿರೊ ಮುಕುತಿ ಧನವ ಬೇಡಿರೊ gopala vittala MUNIYA NODIRO MUKUTI DHANAVA BEDIRO. Show all posts

Saturday, 4 December 2021

ಮುನಿಯ ನೋಡಿರೊ ಮುಕುತಿ ಧನವ ಬೇಡಿರೊ ankita gopala vittala MUNIYA NODIRO MUKUTI DHANAVA BEDIRO



.ಮುನಿಯ ನೋಡಿರೋ 
ಮುಕುತಿಧನವ ಬೇಡಿರೊ ||ಪ|| 

ಜನುಮರಹಿತನಾಗಿ ನಿಂದು 
ಘನವರವೀವ ರಾಘವೇಂದ್ರ ||ಅ.ಪ||

ಸಂತರಗೂಡಿ ಸಕಲ ಚಿಂತೆಯ ಬಿಡಿ 
ಕುಪಂಥವ ಸುಡಿ ನಾನೆಂತೆಂಬೋದು ಬಿಡಿ 
ಅಂತರಂಗದಲ್ಲಿ ಹರಿಯ ಚಿಂತಿಸಿ ಏಕಚಿತ್ತದಲ್ಲಿ ||೧||

ಗೋಳಕತ್ರಯ ಇನ್ನು ಕೇಳು ನಿರ್ಣಯ 
ಆಲೋಚನೆಯಲ್ಲಿ ಶೀಲಮೂರ್ತಿಯ 
ಆಳು ಸಹಿತ ಇಪ್ಪನಿಲ್ಲಿ ಬಹಳ ಫಲವನೀವುತಲಿ ||೨|| 

ಮಂದಜನರನು ಪೊರೆಯೆ ಒಂದು ರೂಪದಿ
ಬಂದು ಹರಿಯು ತಾನಿಲ್ಲಿ ನಿಂದೀರೂಪದಿ 
ಸುಂದರಾಂಗ ಗೋಪಾಲವಿಠಲ ತಂದು ಫಲವನೀವುತಿಪ್ಪ ||೩||
***

Muniya nodiro 
mukutidhanava bediro ||pa|| 

Janumarahitanaginindu 
ghanavaraviva raghavendra ||a.pa||

Santaragudi sakala chinteya bidi 
kupanthava sudi nanentembodu bidi 
antarangadalli hariya chintisi ekachittadalli ||1||

Golakatraya innu kelu nirnaya 
alochaneyalli shilamurtiya 
alu sahita ippanilli bahala phalavanivutali ||2||

Mandajanaranu poreye ondu rupadi
bandu hariyu tanilli nindirupadi 
sundaranga gopalavittala tandu phalavanivutippa ||3||
***

ಮುನಿಯ ನೋಡಿರೊ – 
ಮುಕುತಿ ಧನವ ಬೇಡಿರೊ
ಜನುಮರಹಿತವಾಗಿ ನಿ೦ದು – 
ಘನವರವೀವ ರಾಘವೇ೦ದ್ರ    || ಪ ||

ಸ೦ತರಗೂಡಿ – ಸಕಲ ಚಿ೦ತೆಯ ಬಿಡಿ ಕು
ಪ೦ಥವ ಸುಡಿ – ನಾನೆ೦ತೆ೦ಬೋದು ಬಿಡಿ
ಅ೦ತರ೦ಗದಿ ಅಲ್ಲಿ – ಹರಿಯಾ
ಚಿ೦ತೀಸೇಕಚಿತ್ತದಲ್ಲಿ                                        || ೧ ||

ಗೋಳಕತ್ರಯಾ – ಇನ್ನು ಕೇಳು ನಿರ್ಣಯಾ
ಆಲೋಚನಯಾ – ಅಲ್ಲಿ ಶೀಲಮೂರ್ತಿಯಾ
ಆಳುಸಹಿತ ಇಪ್ಪನಿಲ್ಲಿ – ಬಹಳ
ಫಲನೀವುತಲೀ                                                 || ೨ ||

ಮ೦ದಜನರನು – ಪೊರೆಯಲ್ಲಿನ್ನು
ಒ೦ದುರೂಪದಿ ಬ೦ದು – ಹರಿಯು ತಾನಿಲ್ಲಿ ನಿ೦ದು
ಒ೦ದುರೂಪದಿ ಸು೦ದರಾ೦ಗ ಗೋಪಾಲವಿಠ್ಠಲ
ತ೦ದು ಫಲವನೀವುತಿಪ್ಪ                                   || ೩ ||
********