Showing posts with label ಬಿಲ್ವೊದೇಶ್ವರ ಶ್ರೀ ಮದುಮಾವಲ್ಲ prasannavenkata. Show all posts
Showing posts with label ಬಿಲ್ವೊದೇಶ್ವರ ಶ್ರೀ ಮದುಮಾವಲ್ಲ prasannavenkata. Show all posts

Thursday, 14 November 2019

ಬಿಲ್ವೊದೇಶ್ವರ ಶ್ರೀ ಮದುಮಾವಲ್ಲ ankita prasannavenkata

by ಪ್ರಸನ್ನವೆಂಕಟದಾಸರು
ಬಿಲ್ವೊದೇಶ್ವರ ಶ್ರೀ ಮದುಮಾವಲ್ಲಭಸಂತತ ಪಾಲಯಮಾಂ ಪ.

ನಾಕಪವಂದ್ಯ ಕೃಪಾಕರ ಪಾಪನೇಕ ನಿವಾರಕ ಮೂಕಹರಲೋಕೇಶೇಶ ನಿಶಾಕರ ಶೇಖರಶ್ರೀಕರಕಾಯ ಪಿನಾಕಧರ 1

ಭುಜಗಾಭರಣ ಗಜಮದಹರಣಗಜಚರ್ಮಾಂಬರ ಸುಜನವರದ್ವಿಜರವಿ ವೃಷಧ್ವಜಾಸಮಲೋಚನರಜನೀಚರ ತ್ರಿಪುರಜಮಥನ 2

ದುರ್ಧರ್ಷಾಂಧಕ ಮದರ್Àಕ ಶಂಭೊನಿರ್ದೋಷ ಶ್ವೇತಾದ್ರಿ ಪ್ರಭೊಸ್ವರ್ಧುನಿಸಹಿತ ಕಪರ್ದಿನ್ ಶಿವಶಿವಊಧ್ರ್ವ ಪಟಾರ್ಚಕವದನಭೋ3

ಗರಕಂಧರ ವೃಷಚರ ಅದ್ಭುತ ನಿಕರಪರಿಚರ ಪಾಂಡುರಗಾತ್ರಶಿರಮಾಲಾನ್ವಿತ ಸ್ಫುರತ್ಕಪಾಲಿನ್ಹರಹರಭವಸುಖಕರ ಮೂರ್ತೆ4

ಶಂಕರ ಸುಗುಣಾಲಂಕೃತ ಭಕ್ತಾತಂಕವಿದೂರಕ ಶಂಖ ರಥಾಂಗಾಂಕಿತ ಪ್ರಸನ್ವೆಂಕಟನಾಯಕಕಿಂಕರಜನಪ್ರಿಯ ತ್ವಂ ಕೃಪಯಾ5
********