ಶ್ರೀ ಗೋಪಾಲದಾಸರ ಉಗಾಭೋಗಗಳು
ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯಪಾಪವರಿಯದೆ ಬದುಕುವ ಮನುಜನಿಗಿಂತ
ನಾಯಿಕುನ್ನಿ ಲೇಸಯ್ಯ
ಕುಲಹೀನನಾದರೂ ಸುಖ ದುಃಖಗಳನು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠ್ಠಲ
ಗುರು ರಾಘವೇಂದ್ರರೇ
ನಿಮ್ಮ ನಿಜ ಕರುಣದಿ ಸಂಚರಿಪ ಸುಜನರಿಗೆ
ದುರುಳರಿಂ ಮಾಡಲ್ಪಟ್ಟ ದುಷ್ಕೃತಗಳೆಲ್ಲ ಮುಂದೋಡದೆ ಹಿಂಜರಿದು ಓಡುವವು ನಾ ಬಲ್ಲೆ ?
ಗುರು ರಾಘವೇಂದ್ರರೇ
ಅಸ್ತ್ರಗಳೆಲ್ಲ ಒಂದಾಗಿ ಕೂಡಿ ಇಂದ್ರನ ವಜ್ರಾಯುಧವನೆದುರಿಸ ಬಲ್ಲವೇ ?
ಗುರು ರಾಘವೇಂದ್ರರೇ
ಕ್ಷುದ್ರಮೃಗಗಳೆಲ್ಲ ಒಂದಾಗಿ ಕೂಡಿ ಸಿಂಹಗೆ ಉಪದ್ರವ ಕೊಡಬಲ್ಲವೇ ?
ಗುರು ರಾಘವೇಂದ್ರರೇ
ಪಕ್ಷಿಗಳೆಲ್ಲ ಒಂದಾಗಿ ಕೂಡಿ ಖಗಪತಿನೆದುರಿಸ ಬಲ್ಲವೇ ?
ಗುರು ರಾಘವೇಂದ್ರರೇ ನಿಮ್ಮ ಭದ್ರವಾದ ಕರುಣಾ ಅಭಯ ಛತ್ರದೊಳು
ನಾನಿರಲು ನಿದ್ರೆಯಲ್ಲಿಯೂ ಭೀತಿ ಎನಗಿಲ್ಲ ಗೋಪಾಲವಿಠಲನಾಣೆ
Guru Rāghavēndrarē
Nim’ma nijakaruṇadi san̄caripa sujanarige
duruḷariṁ māḍalpaṭṭa duṣkr̥tagaḷella mundōḍade hin̄jaridu ōḍuvavu nā balle?
Guru Rāghavēndrarē
Astragaḷella ondāgi kūḍi indrana vajrāyudhavanedurisa ballavē?
Guru Rāghavēndrarē Kṣudra mr̥ugagaḷella ondāgi kūḍi sinhage upadrava koḍaballavē?
Guru Rāghavēndrarē
Pakṣigaḷella ondāgi kūḍi khagapati nedurisa ballavē?
Guru Rāghavēndrarē nim’ma bhadravāda karuṇā abhaya chatradoḷu
nāniralu nidreyalliyū bhīti enagilla gōpālaviṭhalanāṇe!
*
Meaning :
ದುಷ್ಕೃತ – duṣkřta – a sinful or wicked man; a miscreant.
ಉಪದ್ರವ – upadrava – infliction
ಖಗಪತಿ – khagapati – Garuḍa, the king of birds
ಅಭಯ – abhaya – the act, assurance that removes the fear.
Guru Raghavendra! Thank you for your true compassion
I do know that all the wicked who brutalize do not advance and run away far behind me?
Guru Raghavendra! Can all the weapons come together and face Indra’s diamond sword?
Guru Raghavendra! Can all the small animals gather together and harm the lion?
Guru Raghavendra! Can all the birds come together and stand in front of Garuda?
O Guru Raghavendra, With your secure mercy and assurance that removes any fear, I don’t even get scared even in my dream I promise on GopalaVittala!
***
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತ ಉದಕದಿ ಮಜ್ಜನವೆ
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತ ಉಡಗಿಯ ವಸನಂಗಳೆ
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತ ಜಡಗಳು ಆಭರಣವೇ
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತ ಗಂಧ ತುಲಸಿ ಪುಷ್ಫವೇ
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತ ಧೂಪ ದೀಪದಾರ್ತಿಯೆ
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತದನ್ನವು ನೈವೇದ್ಯವೇ
ಪ್ರಾಕೃತ ಬದ್ಧನ ಮಾಡಿ ಎನ್ನಿಂದಲಿ
ಪ್ರಾಕೃತ ಪೂಜಿಯ ಕೈಕೊಂಬಿ
ಪ್ರಾಕೃತದೊಳು ನೀನು ಅಪ್ರಾಕೃತನಾಗಿದ್ದು
ಈ ಪರಿಯಲಿ ನಿತ್ಯ ಪೂಜಿಗೊಂಬೆ
ಪ್ರಾಕೃತ ರಹಿತನಾಗಿ ನಿನ್ನ ದಾಸರು
ಪ್ರಾಕೃತದೊಳಗಿನ್ನು ಇಪ್ಪುವರು
ಪ್ರಾಕೃತರಹಿತನೆಂದೀಪರಿ ಚಿಂತಿಪರ
ಪ್ರಾಕೃತ ಬದ್ಧದಿ ರಹಿತರ ಮಾಡುವಿ ಅ -
ಪಾರ ಮಹಿಮನೆ ಗೋಪಾಲವಿಟ್ಠಲ
ಈ ಪರಿಯಲಿ ನಿನ್ನ ಚಿಂತಿಪರೊಡನಿಡಿಸೊ ॥
***
ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು
ಧನವ ಗಳಿಸುವರುಂಟು ಗಳಿಸದಿದ್ದವರುಂಟು
ಧನವ ಕಟ್ಟುವರುಂಟು ದಾನ ಮಾಡುವರುಂಟು
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು
ಮಣೆಗಾರತನವಿದರೊಳೆಂದಿಗೂ ಬೇಡ
ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ
ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ಗುಣ ಚಿಂತನೆಯೊಳಿಡು ಇಷ್ಟೇ ಸಾಕು
*********
ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯಪಾಪವರಿಯದೆ ಬದುಕುವ ಮನು-
ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-
ಹೀನನಾದರು ಸುಖ ದುಃಖಗಳನು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ
--- ಗೋಪಾಲದಾಸರು
********
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯಪಾಪವರಿಯದೆ ಬದುಕುವ ಮನು-
ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-
ಹೀನನಾದರು ಸುಖ ದುಃಖಗಳನು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ
--- ಗೋಪಾಲದಾಸರು
********
ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ
ಅಂಭ್ರಮಣಿ ಕಂಭಕ್ಕೆ ಸುತ್ತಲೂ ಗುಣರೂಪ
ಶಂಭುವಂದಿತ ವತ್ಸಸಂಭ್ರಮದಲಿ ಇರಲು
ಅಂಬುಜಸಮನ ಗುರುತಂದೆ ಗೋಪಾಲವಿಠಲನ
ಬೆಂಬಿದದೆ ತೋರೋ ಪ್ರಾಣ
--ಗೋಪಾಲದಾಸರು
********
ಅಂಭ್ರಮಣಿ ಕಂಭಕ್ಕೆ ಸುತ್ತಲೂ ಗುಣರೂಪ
ಶಂಭುವಂದಿತ ವತ್ಸಸಂಭ್ರಮದಲಿ ಇರಲು
ಅಂಬುಜಸಮನ ಗುರುತಂದೆ ಗೋಪಾಲವಿಠಲನ
ಬೆಂಬಿದದೆ ತೋರೋ ಪ್ರಾಣ
--ಗೋಪಾಲದಾಸರು
********
ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದ-ಸ್ನಾನಾನುಷ್ಠಾನಕಾಲದಲ್ಲಿಶ್ರೀಶರಂಗಹರಿಯೆ ಸರ್ವೋತ್ತಮ ಮರುತ ದೇವನೆವೇದಾರ್ಥಗಳನೆಲ್ಲ ವ್ಯಾಖ್ಯಾನ ಮುಖದಿಂದದರಹಾಸಸರಿತೆ ತೀರ ಮಂತ್ರಾಲಯದಲ್ಲಿಮರುತಾಂತರ್ಗತ ಗೋಪಾಲವಿಠಲನ್ನ
ಗೋಪಾಲದಾಸರು
********
ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯಪಾಪವರಿಯದೆ ಬದುಕುವ ಮನುಜನಿಗಿಂತ
ನಾಯಿಕುನ್ನಿ ಲೇಸಯ್ಯ
ಕುಲಹೀನನಾದರೂ ಸುಖ ದುಃಖಗಳನು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠ್ಠಲ
ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು
ಧನವ ಗಳಿಸುವರುಂಟು ಗಳಿಸದಿದ್ದವರುಂಟು
ಧನವ ಕಟ್ಟುವರುಂಟು ದಾನ ಮಾಡುವರುಂಟು
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು
ಮಣೆಗಾರತನವಿದರೊಳೆಂದಿಗೂ ಬೇಡ
ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ
ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ಗುಣ ಚಿಂತನೆಯೊಳಿಡು ಇಷ್ಟೇ ಸಾಕು
**********
ಶ್ರೀ ಗೋಪಾಲದಾಸರ “ಉಗಾಭೋಗಗಳು “
ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯ ಪಾಪವರಿಯದೆ ಬದುಕುವ ಮನು-
ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-
ಹೀನನಾದರೂ ಸುಖದು:ಖಗಳು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ
****
ಎಷ್ಟು ಮಂದಿ ಧರಣಿ ಆಳಿ ಅರಸುಗಳೆನಿಸಿ
ನಷ್ಟವಾಗಿ ಪೋದರಲ್ಲ ನೋಡನೋಡಾ
ಕಟ್ಟುಕೊಂಡೊಯ್ದರೆ ನೋಡನೋಡಾ
ಕಟ್ಟುಕೊಂಡೊಯ್ದರೆ ತೃಣವಾದರೂ ಹಿಂದೆ
ಇಷ್ಟನಿಷ್ಟಕೆ ಪಾತ್ರರಾಗುವರು
ದಿಟ್ಟ ತಾ ಹರಿಗೋಲದಾಟಿಪನೊಂದು
ಹುಟ್ಟಿಲಿ ನೀರು ತಿರುಹಿ ಕಡೆದಾಟಿಸೆ
ಹುಟ್ಟಿದ ಆ ಕೀರ್ತಿ ಹಾಕಿದವನದು ಎಂದು
ಕೊಟ್ಟವರವಗುಂಟು ಬಹುಮಾನವ
ಎಷ್ಟೇ ಉದಕದಿ ಹುಟ್ಟು ಹೊರಳಿ ಆದಿದರದಕೆ
ಎಷ್ಟು ಹೊತ್ತೋದು ಜಲವು ಅಷ್ಟೇ ಅಲ್ಲದೆ
ಇಷ್ಟು ಹರಿಯಾಧೀನ ನಂಬಿದಂಬಿಗನಯ್ಯ
ಇಷ್ಟರೊಳು ಚೆಲುವ ಗೋಪಾಲವಿಠಲ
ಇಷ್ಟನಾಗಿ ಸರ್ವಾಭೀಷ್ಟಗಳನೀವ
****
ಎಂತು ಪೋಪದು ಮನದ ಕಿಂತು ಎಂಬೋದು ಎನ್ನ
ಅಂತರಂಗದಲ್ಲಿಪ್ಪನು ಸುಂದರಾಂಗ
ಪಿಂತಿನ ಸಂಸಾರ ಮರೆಗುಪೋಗಿತ್ತು ಈಗ
ಚಿಂತನೆಗೆ ಬಂದು ಬಹುದಣಿಸುವದು
ಎಂತು ವಿಹಿತದಲ್ಲಿ ಬಿಡಿಸುವೆ ಈ ಅರ್ಥಿ
ನಿಂತಲ್ಲಿ ಕುಳಿತಲ್ಲಿ ಹತ್ತಿಹ್ಯದು
ನಿಂತು ಮಾತೆಯಲ್ಲಿ ಪುಟ್ಟಿಸಿದವನಾರು
ಚಿಂತಾಯಕದೇವ ಗೋಪಾಲವಿಠಲ
ನಿಶ್ಚಿಂತನಿಗೆ ವಿಷಯನಾಗಿರು ಸರ್ವದಾ |
****
ಕ್ಷೀರಸಾಗರ ಬಿಟ್ಟು ಲವಣ ಸಾಗರದಲ್ಲಿ
ಮನೆಯ ಕಟ್ಟುವರೇನೋ ?
ಉತ್ತಮ ತ್ರಿಧಾಮವ ಬಿಟ್ಟು ಮರ್ತ್ಯಲೋಕದಲ್ಲಿ
ಬಂದು ಪುಟ್ಟುವರೇನೋ ?
ನಿತ್ಯ ಸರ್ವಜ್ಞ ಪ್ರಕಾಶ ಮತ್ತೆ ಯಾದವರ
ಕೂಡಿ ಆದುವುದೇನೋ ?
ನಿತ್ಯತೃಪ್ತನು ನೀನು ಮುಕ್ತರೊಡೆಯ ರಂಗ
ಮತ್ತೆ ವಿದುರನ ಮನೆಯ ಪಾಲ್ಕುಡಿವರೇನೋ ?
ಸತ್ಯ ಸಂಕಲ್ಪ ಗೋಪಾಲವಿಠಲ ನಿನ್ನ
ಕೃತ್ಯಕೊಂದನಂತಾನಂತ ನಮೋ ನಮೋ ಎಂಬೆ |
****
ತನ್ನನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣು ಇಲ್ಲದ ಈಪರಿ ಮಾನ ಉಳಿಸಯ್ಯಾ
ಅಜ್ಞಾನಿಗಳ ಮುಂದೆನ್ನ ಮಾನಕಳೆಯಯ್ಯಾ
ಸುಜ್ಞಾನಿಗಳ ಮುಂದೆ ನಾನು ಎಂಬದು ಬಿಡಿಸು
ಸಕಲ ಕರ್ತೃತ್ವದೊಳು ನೀನು ಎಂಬೋದು ತಿಳಿಸು
ಅಲ್ಲಲ್ಲಿ ಶ್ವಾನಸೂಕರ ನಾನಾಯೋನಿಗಳು ಬರಲಿ
ಜ್ಞಾನವಿದು ಒಂದೀಯೋ
ದೀನರೊಡೆಯ, ಜ್ಞಾನಮಯ ಗೋಪಾಲವಿಠಲ
ಮೌನಿಗಳರಸ ನಮೋ ಎಂಬೆನೋ |
****
ತೀರಿತೆ ನಿನ್ನ ಸೃಷ್ಟಿ ಸ್ಥಿತಿ ಲಯ ವ್ಯಾಪಾರ
ಪೋರನೊಬ್ಬನಗಲಿಸಿ ಸೆಳೆದು ವೈದದರಿಂದ
ಪೂರುತಿ ಆಯಿತೆ ನಿನ್ನ ಸಂಕಲ್ಪಕ್ಕೆ
ಕಾರುಣ್ಯನಿಧಿ ಕಪಟನಾಟಕನೇ
ಧಾರುಣಿಯೊಳಗವನ ಸೃಜಿಸಿ ಇಟ್ಟಿದರಿಂದ
ಕೀರುತಿಯ ತಂದಿತ್ತ ಧರ್ಮದಲಿ
ತೀರಿತೋ ಅವನ ಪುಣ್ಯ ತೋರಿತೋ ಮ್ಯಾಲಾವದೋ
ತೋರದೆನಗೆ ಒಂದೂ ಆರಿಂದಾರೋ
ಭಾರವಾದರೂ ಬಲು ಪೊತ್ತಿದ್ದಿ ಎನ್ನೊಳಗೆ
ಕೀರುತ್ಯಪಕೀರುತಿನಾರದಯ್ಯ
ಭಾರ ಪೊರುತಿಯಾಯಿತೇ ಅವನ ಸಾಧನವೆಂಬೆನೆ
ತೋರುತಿದೆ ಮನಕೆ ಮತ್ತೆಲ್ಲಿ ಜನನ
ಭಾರ ನಿನ್ನದು ಎನ್ನ ಎಲ್ಲಿ ನೀನಿರಿಸಿದರೂ
ಸಾರಿ ಮೊರೆಯಿಡುವೆ ಲಾಲಿಸು ಬಿನ್ನಪ
ಭಾರತೀಶನೊಡೆಯ ಗೋಪಾಲವಿಠಲ
ಈರೀತಿ ಮಾಳ್ಪದನರಿಯಲಿಲ್ಲ |
****
ನಂಬು ನಂಬು ಎನ್ನ ಎಂದು ಆಡುವ ಸ್ವಾಮಿ
ಬಿಂಬದವನಲ್ಲವೆ ಎನಗೆ ಅಂದು ನೋಡೆ
ಸಂಭ್ರಮ ಪೂರ್ತಿಸದು ಕಾಂಬೋಣಾದರೂ ಮನದ
ಹಂಬಲವು ಬಿಡದೋ, ವಿಷಯದಲ್ಲಿ
ನಂಬಿದರೆ ಅವನ ನಂಬಿದವನೇ ಅಲ್ಲ
ಅಂಬಿಕಾಹೃದಯಸ್ಥನೆನ್ನು ಭೇದವ ತಿಳಿದು
ಸಂಭ್ರಮದ ಜಾಗೃತಿ ಹುಟ್ಟಲಿ ಅವನಲ್ಲಿ
ಬೊಂಬೆಯಾಗಿ ಎದುರು ನಿಂತು ತೋರಿ ಆಡೆ
ನಂಬಿಗೆಯು ಸಾಲದೋ ಅಂಬುಜಾಕ್ಷ
ನಂಬಿ ಇಪ್ಪೆನು ಕಂಡ್ಯ ಈ ಪರಿ ಚೆನ್ನಾಟ
ಸಂಭ್ರಮದಲೆನ್ನ ಮೋಹಿಸಬ್ಯಾಡ
ನಂಬಿಗಿ ಬಲು ಉಂಟು ಆಗಿರಲಿ ನಿನ್ನಲಿ
ನಂಬುವರೋ ಜನ ಅನ್ಯಹಂಬಲಿಸದೆ
ನಂಬಿ ನಿನ್ನನರಿಯೆ ಹಿಂದೆ ಇಂದು ಮುಂಡೆ ಘನ
ನಂಬಿಗೆ ಇತ್ತರೆ ನಿನ್ನ ನಂಬುವೆನಯ್ಯ
ಬಿಂಬಮೂರಿತಿಯೇ ಗೋಪಾಲವಿಠಲ
****
ನೀನು ಕೊಡುವದೆನಗೆ ಏನು ಎನಗಿಂದದರ
ಖೂನವಾದರೂ ತೋರು ಎನ್ನ ಕುರಿತು
ನಾನು ಬಲು ಅರಸಿ ನೋಡಿದರೂ ನಿಜಗಾಣೆನು
ಪಾಣಿದ್ವಯ ಮುಗಿದು ಬಿನ್ನೈಪೆ ದೇವ
ನೀನೋ ನಾನೋ ಪೇಳೊ ನಿನ್ನ ತಿಳಕೊಂಬಲ್ಲಿ
ಜ್ಞಾನಿಗಳೇ ಇದಕೆ ಮಧ್ಯಸ್ಥರಯ್ಯಾ
ಏನು ನೀ ಕೊಡುವದು ಮುದವೇ ಎಲ್ಲಿಗೆ ಪೋದರೂ
ಕಾಣದೆ ಹುಡುಕುವೆ ಅದು ಏನೇನೆಂದು
ಶ್ರೀನಿವಾಸರಂಗ ಗೋಪಾಲವಿಠಲ ಆ
ದಿನ ನಿನ್ನದು ಎಂದೇನಿದ್ದರೂ |
****
ಪರಮಪುರುಷ ಪಾಪನಾಶ ಪತಿತಪಾವನ ಪರತರ
ಪರಮ ಆಪ್ತ ಪರಾತ್ಪರಾತ್ಮಕ
ಪರಂಜ್ಯೋತಿಸ್ವರೂಪ ಪರಮಮಂಗಳ
ಪರಮಕರುಣಿ ಪಾಹಿ ಪಂಢರಿರಾಜ
ಪರಮಪುರುಷ ಶರಣ ಜನಪಾಲಕನೇ ಜಯ ಜಯ
ಶರಧಿ ಬಂಧನ ರಾಮ ಜಯ ಜಯ
ಶರಧಿಶಯನ ಶ್ವೇತವರ್ಣ ಶ್ವೇತವಾಹನ
ಪ್ರಿಯನೇ ಭಾರತೀಶನೊಡೆಯನೇ, ಯೇ
ಭೂಭಾರ ನಿಳಿಹಿದ ಸ್ವಾಮಿ ನಮೋ ನಮೋ
ಚಾರುಶ್ವೇತದ್ವೀಪವಾಸಿ ಗೋಪಾಲವಿಠಲ
ಸಾರ್ವಭೌಮ ಪರಮಪುರುಷ |
****
ಶರಧಿಯ ಉದಕವು ಮೇಘಭಾಯೊಳು ಬಿದ್ದು
ಧರೆಯೊಳಗೆ ಮಧುರವನು ತೋರಿದಂತೆ
ಕರಿಯ ದಂತವು ಜಂಗುಳಿಗುರುಗಳಂದಣವಾಗಿ
ಪರಿಪರಿಯ ಪೂಜೆ ಕೈಕೊಂಡತೆರದಿ
ಇರುತಿಪ್ಪ ನರನಿಗೆ ಹರಿನಿನ್ನ ಅರವಿಂದ-
ಚರಣದಾಶ್ರಯವ ಕೊಟ್ಟು ಪೊರೆಯೋಎನ್ನ
ಕರೆ ಕರೆ ಸಂಸಾರ, ಉರುಗನ ಹೆಡೆ ನೆರಳು
ಹರುಷವೆಂದು ಮಲಗಿಕೊಂಡಾತೆರದಿ
ಕರುಣಾಕರ ರಂಗ ಗೋಪಾಲವಿಠಲ
ಮೊರೆಹೊಕ್ಕರೆ, ಕಾವ ಬಿರಿದುಂಟು ದೇವ |
****
ಹಲ್ಲಣವಿಲ್ಲದ ಕುದುರೆ ಹತ್ತಿ ಓಡಿಸಿದಂತೆ
ಬೆಲ್ಲಹಾಕದ ಪರಮಾನ್ನದಂತೆ
ಇಲ್ಲದೆ ಹುಟ್ಟು ಹರಿಗೋಲನೇರಿದಂತೆ
ಸೊಲ್ಲಿಗೆಬುಡದಲ್ಲಿ ಅಳೆದಂತೆ ಸಾಧನ
ಎಲ್ಲ ಒಂದೇ ಎಂಬ ಜ್ಞಾನ ಉಂಟಾದವ
ಎಲ್ಲ ಸಾಧನಗಳ ಮಾಡಲೇನು
ಬೆಲ್ಲವು ಬೇವೇ ಆಗುವುದು ಅವನಿಗಿನ್ನು
ಎಲ್ಲ ಕಡೆಯಲಿ ನೋಡಿ ಮೆದ್ದರನ್ನ
ಮಲ್ಲಮರ್ಧನ ಗೋಪಾಲವಿಠಲನಂಘ್ರಿ-
ಪಲ್ಲವ ಕಾಣೆನೋ ಎಲ್ಲಿ ಪೋದರನ್ನ |
****
ಹರೇ ಶ್ರೀನಿವಾಸ 🙏
ಶ್ರೀ ಗೋಪಾಲದಾಸ ಗುರುಭ್ಯೋ ನಮಃ🙏
ಅಪರೋಕ್ಷ ಜ್ಞಾನಿಗಳಾದ ಶ್ರೀ ಗೋಪಾಲದಾಸರ ಆರಾಧನೆ ಪರ್ವಕಾಲದ ನಿಮಿತ್ತ ಅವರ ಒಂದು ಉಗಾಭೋಗದ ಸಂಕ್ಷಿಪ್ತದ ಅರ್ಥಚಿಂತನೆ ಸೇವಾ ರೂಪದಲಿ...... 🙏🙏
ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು
ಧನವ ಗಳಿಸುವರುಂಟು ಗಳಿಸದಿದ್ದವರುಂಟು
ಧನವ ಕಟ್ಟುವರುಂಟು ದಾನ ಮಾಡುವರುಂಟು
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು
ಮಣೆಗಾರತನವಿದರೊಳೆಂದಿಗೂ ಬೇಡ
ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ
ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ಗುಣ ಚಿಂತನೆಯೊಳಿಡು ಇಷ್ಟೇ ಸಾಕು.🙏🙏
ಮನೆಯ ಕಟ್ಟುವರುಂಟು......
ಮನೆ ಅಂದ್ರೆ ಈ ಶರೀರ... ಇದನ್ನು ಸಾಧನೆಗಾಗಿ ಬಳಸುವವರು ಉಂಟು, ಭೋಗಕ್ಕಾಗಿ ಬಳಸುವರು ಉಂಟು.
ಮಡದಿ ಮಕ್ಕಳುಂಟು.....
ಸತಿ ಅನುಕೂಲ ಬೇಕು ಸುತನಲಿ ಗುಣಬೇಕು.
"ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು."...
ಎಂಬಂತೆ ಇರಬೇಕು
ಸಾಧನೆ ಶರೀರ ಬಂದರು ಅದಕ್ಕೆ ಅನುಕೂಲವಾಗಿ ಸಾಧನೆ ಮಾರ್ಗದಲ್ಲಿ ಜೊತೆಯಾಗಿ ನಡೆಯುವ ಮಡದಿ ಮಕ್ಕಳು ಎಂಬ ಪರಿವಾರವಿರಬೇಕು.
ಧನವ ಗಳಿಸುವರುಂಟು ಗಳಿಸದಿದ್ದವರುಂಟು
ಲೌಕಿಕ ವಿಷಯ ಆಸಕ್ತರಾಗಿ ಇಂದ್ರಿಯಗಳ ಭೋಗಕ್ಕಾಗಿಯೆ ಧನವನ್ನು ಗಳಿಸುವರುಂಟು......
ಆದರೆ ನಿಜವಾದ ಧನ, ಸಂಪತ್ತು ಯಾವುದು ಅಂದ್ರೆ
ಜ್ಞಾನ, ವಿಷಯ ವಿರಕ್ತಿ, ಇಂದ್ರಿಯ ನಿಗ್ರಹ ಇವೆಲ್ಲ ಸಾಧಕನಿಗೆ ಸಾಧನೆ ಮಾರ್ಗದಲ್ಲಿ ನಡಿಯುವದಕ್ಕೆ ಇರುವ ನಿಜವಾದ ಸಂವತ್ತು ಇದನ್ನುಗಳಿಸುವ ಜನರೂ ಉಂಟು.
ಧನವ ಕಟ್ಟುವರುಂಟು ದಾನ ಮಾಡುವರುಂಟು
ತಮ್ಮ ಸ್ವಾರ್ತಕ್ಕಾಗಿ ಧನವನ್ನು ಸೇರಿಸಿ ಅದು ಒಂದುದಿನ ಉಪಯೋಗವಿಲ್ಲದೆ ನಾಶವಾಗುವದು ಎಂಬ ಎಚ್ಚರವಿಲ್ಲದೆ ಅದನ್ನು ಸೇರಿಸುವರುಂಟು......
ಧನ ನಿಲ್ಲದಯ್ಯ ಸಾಧನ ನಿಲ್ಲುವುದಯ್ಯ
ಎಂಬ ದಾಸರ ಮಾತಿನಂತೆ.
ಗಳಿಸಿದ ಹಣದಲ್ಲಿ ಒಂದು ಭಾಗ ಸತ್ಪಾತ್ರರಿಗೆ ಧಾನವನ್ನು ಮಾಡಿ ಅದನ್ನು ಸಾಧನೆಗಾಗಿ ಬಳಿಸುವರೂ ಉಂಡು....
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು
ಋಣ ಅಂದ್ರೆ....
ಸಾಧನೆಗಾಗಿ ಶರೀರವನ್ನು ಕೊಟ್ಟ ಪಿತೃ ಋಣ....
ಇಂದ್ರಿಯಗಳೊಳಗಿದ್ದು ನಮ್ಮಿಂದ ನಾನಾ ರೀತಿಯ ಸಾಧನೆ ಮಾಡಿ ಮಾಡಿಸುವ ತದಭಿಮಾನಿ ದೇವತೆಗಳ ಋಣ..... ಸಾಧನೆಗೆ ಬೇಕಾದ ಜ್ಞಾನವನ್ನು ಕೊಟ್ಟ ಋಷಿಗಳ ಋಣ.... ಈ ದೇವ, ಋಷಿ,ಪಿತೃ ಋಣವನ್ನು ತೀರಿಸುವ ಪ್ರಯತ್ನ ಮಾಡಲೇಬೇಕು ತಪ್ಪಿಸಲೇಬಾರದು.... ಈ ಋಣಗಳನ್ನು ಬಿಟ್ಟವರೂ ಉಂಟು,
ಧನವನ್ನೆ ಕೊಡಿಸು ದಾನವನೆ ಮಾಡಿಸು
ಗುಣವುಳ್ಳ ಮನುಜನೆನಿಸು ಮನಸು
ಚಂಚಲನೆನಿಸು ಮಾತುಗಳ ಪುಸಿಯೆನಿಸು
ಕ್ಷಣದೊಳಗೆ ಶುದ್ಧನೆನಿಸು ಋಣದ ಭಯವನೆ
ಹೊರಿಸು ರಿಕ್ತ ನಾನೆಂದೆನಿಸು ತೃಣದಂತೆ ಮಾಡಿ
ನಿಲಿಸು ನಿತ್ಯ ಮನದಿಚ್ಛೆಗಾರನೆ ದಿನ
ಪ್ರತಿದಿವಸವಾಗೆ, ದೇವ... ಎಂಬ
ಶ್ರೀ ವಿಜಯಪ್ರಭುಗಳ ಅದ್ಭುತ ವಾಣಿಯಂತೆ ಇದನ್ನು ಮಾಡುವವರು ಉಂಟು..
ಮನಣೆಗಾರತನವಿದರೊಳೆಂದಿಗೂ ಬೇಡ
ಅನುಕೂಲವಿಲ್ಲದ ಈ ಮನೆ, ಮಡದಿ, ಮಕ್ಕಳು,ಧನಗಳೆಂಬ ಈ ವಿಷಯಾಸಕ್ತಿನಾಗುವ ಈ ಸಾಲಿನಲ್ಲಿ ನನ್ನನ್ನು(ನಮ್ಮನ್ನು)ಎಂದೆಂದಿಗೂ ಸೇರಿಸಬೇಡಾ (ಅಪರೋಕ್ಷ ಜ್ಞಾನಿಗಳು ನಮ್ಮ ಮೇಲಿರುವ ಕಾರುಣ್ಯದಿಂದ ಹೇಗೆ ಪ್ರಾರ್ಥನೆ ಮಾಡಬೇಕು ಅಂತ ತಿಳಿಸುತ್ತಾರೆ)....
ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ
ಮುನಿಗಳು ಅಂದ್ರೆ ಜ್ಞಾನಿಗಳು ಸಹಿತ ಕರ್ಮವಶಾತ್ ಸಾಧನೆ ಮಾರ್ಗದಲ್ಲಿಂದ ತಪ್ಪಿದ್ದು ಉಂಟೆ( ಸಾಮಾನ್ಯರ ಪಾಡೇನು??).....
( ಸಾಕ್ಷಾತ್ ಜಗನ್ನಿಯಾಮಕನಾದ ಪರಮಾತ್ಮನೆ ತನ್ನ ಮಗನಾದ ಜಡ ಭರತನಿಗೆ ಉಪದೇಶ ಮಾಡಿದ್ದಾದರೂ ಪ್ರಾರಬ್ಧವನ್ನು ತಪ್ಪಿಸುವದಕ್ಕೆ ಆಗಲಿಲ್ಲಾ)
ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ಗುಣ ಚಿಂತನೆಯೊಳಿಡು ಇಷ್ಟೇ ಸಾಕು...
ಪರಮಾತ್ಮ ನಿನ್ನ ಗುಣಗಳ ಚಿಂತನೆ ಮುಖ್ಯಸಾಧನೆ ಅದರಲ್ಲಿ ನಿರಂತರ ನನ್ನನ್ನು ಇಟ್ಟು ಸಲಹು ಎಂಬ ಪ್ರಾರ್ಥನೆ ಒಂದಿಗೆ ಮಹಾನುಭಾವರಾದ ದಾಸರ ಅಡಿದಾವರೆಗಳಲ್ಲಿ ನಾವು, ಅವರ ಶಿಷ್ಯರಾದ ಶ್ರೀ ಮಾನವಿ ಪ್ರಭುಗಳು ಹೇಗೆ ಪ್ರಾರ್ಥಿಸಬೇಕು ಅಂತ ತಿಳಿಸಿಕೊಟ್ಟಂತೆ ನಮ್ಮೆಲರ ಪ್ರಾರ್ಥನೆ ಆಗಲಿ....
ಪಂಚವಕ್ತ್ರನ ತನಯ ಭವದೊಳು ವಂಚಿಸದೆ ಸಂತೈಸು
ವಿಷಯದಿ ಸಂಚರಿಸದಂದದಲಿ ಮಾಡು ಮನಾದಿ ಕರಣಗಳ....
ಎಂಬ ಈ ಸ್ಮರಣೆಯೆ ಸಮರ್ಪಣೆ ಒಂದಿಗೆ...
ಶ್ರೀ ಕೃಷ್ಣಾರ್ಪಣಮಸ್ತು.
***
by …...✍.....ಶ್ರೀಸುಗುಣವಿಠಲ
ಕ್ಷೀರಸಾಗರವ ಬಿಟ್ಟು ಲವಣಸಾಗರದಲ್ಲಿ ಮನೆಯ ಕಟ್ಟುವರೇನೋ|
ಉತ್ತಮ ತ್ರಿಧಾಮವ ಬಿಟ್ಟು ಮರ್ತ್ಯಲೋಕದಲ್ಲಿ ಬಂದು ಪುಟ್ಟುವರೇನೋ|
ನಿತ್ಯ ಸರ್ವಜ್ಞಪ್ರಕಾಶ ಮತ್ತೆಯಾದವರ ಕೂಡಿ ಆಡುವುದೇನೋ
ನಿತ್ಯ ತೃಪ್ತನು ನೀನು ಮುಕ್ತರೊಡೆಯ ರಂಗ ಮತ್ತೆ ವಿದುರನಮನೆ ಪಾಲ್ಕುಡಿವರೇನೋ
ಸತ್ಯಸಂಕಲ್ಪ "ಗೋಪಾಲವಿಠಲ" ನಿನ್ನ ಕೃತ್ಯಕೆ
ಒಂದು ಅನಾಂತನಂತ ನಮೋ ನಮೋ ಎಂಬೆ||
ದಾಸಚತುಷ್ಟಯರಲ್ಲಿ ..ಒಬ್ಬರಾದ ಶ್ರೀಗೋಪಾಲದಾಸರು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೊಸರುಕಲ್ಲು ಗ್ರಾಮದಲ್ಲಿ ಹರಿತಸ ಗೋತ್ರದಲ್ಲಿ ಮುರಾರಿ&ವೆಂಕಮ್ಮ ದಂಪತಿಗಳ ಸತ್ಪುತ್ರರಾಗಿ ಅವತರಿಸಿದ ಮಹಾನುಭಾವರು.ಇವರ ತಮ್ಮ "ರಂಗದಾಸರ " ೮೪ ನುಡಿಗಳ ದೇವರ ನಾಮವು ಈ ವಾಕ್ಯಗಳಿಗೆ ಪ್ರಮಾಣವಾಗಿದ್ದು
ಭಕ್ತಿಯಲಿ ಭಾಗಣ್ಣ ರೆಂದೇ ಪ್ರಸಿದ್ಧರಾದ ಶ್ರೀಗೋಪಾಲದಾಸರ ರಚನೆಗಳಲ್ಲಿತತ್ವಪ್ರಮೇಯವಾಧರಿಸಿದ ಸುಳಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಚಿತವಾಗಿವೆ.
ಅಂಥ ಒಂದು ಸುಳಾದಿಯ ಯಥಾಮತಿ ತತ್ವಚಿಂತನೆಯನ್ನು ಶ್ರೀಸುಗುಣವಿಠಲನ ಪ್ರೇರಣಾನುಸಾರ ಪ್ರಯತ್ನ.....
ಕ್ಷೀರಸಾಗರವ ಬಿಟ್ಟು ಲವಣಸಾಗರದಲ್ಲಿ ಮನೆಯ ಕಟ್ಟುವರೇನೋ|.......
ಕ್ಷೀರಸಾಗರ.....ಎಂದೆಂದೂ ಬತ್ತದ ಆನಂದಮಯವಾದ ನಿತ್ಯನಿರಂತರ ಭಗವನ್ಮೋದದ ಶಾಶ್ವತ ಸುಖಕರವಾದ ಸರ್ವರಿಗೂ ಪರಮಪುರುಷಾರ್ಥದಾಯಕವಾದ ಲಿಂಗದೇಹ ಭಂಗವಾಗಿ ಸ್ವರೂಪ ಸುಖದ ಅವಿರ್ಭಾವದ ಭಗವಂತನ ತಾಣವೇ ...ಕ್ಷೀರಸಾಗರ.!
ಧರ್ಮಾರ್ಥ ಕಾಮಾಃ ಸರ್ವೇಪಿ ನ ನಿತ್ಯಾ, ಮೋಕ್ಷ ಏವ ಹಿ ನಿತ್ಯಾ|
ಮೋಕ್ಷೋಹಿ ಸರ್ವ ಪುರುಷಾರ್ಥೋ ಉತ್ತಮಃ||
.....(ಭಾಲ್ಲವೇಯ ಶ್ರುತಿ)
ಉತ್ತಮ ಜೀವಿಯು ಸ್ವರೂಪತಃ ಆನಂದಮಯನೇ ಆದರೂ ...ಪ್ರಾಕೃತ ಲಿಂಗದೇಹ ,ಅವಿದ್ಯಾ ಆವರಣದಿಂದ ತನ್ನ ಸ್ವರೂಪಾನಂದವನ್ನು ಆತನು ಅನುಭವಿಸಲಾರ. ಶ್ರೀಹರಿಯ ಪ್ರಸಾದದಿಂದಲೇನೇ ..ಲಿಂಗದೇಹ ಭಂಗವಾಗಿ ಸ್ವರೂಪ ಸುಖದ ಅವಿರ್ಭಾವ ವಾಗುವುದೇ ..ಮೋಕ್ಷ.
ಇದು ಶಾಶ್ವತ ಸುಖದ ತಾಣ. ಎಲ್ಲರೂ ಬಯಸುವುದು ಸುಖ.ಆದರೇ ಅದನ್ನು ಕ್ಷೀರಸಾಗರಶಾಯಿಯಾದ ಭಗವಂತನ ಸಾನ್ನಿದ್ಯದ ಮುಕುತಿಯ ಮಕರಂದವನ್ನು ಅನುಭವಿಸಲು ಪ್ರಯತ್ನಿಸಬೇಕೇ ಹೊರತು....ಲವಣ
ಸಮುದ್ರದಲ್ಲಿ ಸ್ನಾನ ಮಾಡಿದಂತೇ....ಈಸಂಸಾರದಲ್ಲಿ ಬರುವ ಅಲ್ಪ ಅಶಾಶ್ವತ ತುರಿಕೆಯ ಕ್ಷಣಿಕ ಮೋಹಾತ್ಮಕವಾದ ,ಮರುಕ್ಷಣದಲ್ಲೇ ದುಂಖದ ಕರಿನೆರಳಿನಿಂದ ಆವೃತವಾದ ಅಪಾರದುಂಖದ ಈ ಲವಣದ ಈ ಭವ ಸಾಗರದಲ್ಲಿ ...ನಮ್ಮ ಮನೆಯನ್ನು ಅರ್ಥಾತ್ ಜೀವನದ ಜೀವಮಾನವನ್ನು ವ್ಯರ್ಥಮಾಡಿ ಹುಸಿಯಾದ ,ಮಂಜಿನಂತೆ ಕರಗುವ ನಮ್ಮ ಸಾಧನಾ ಪ್ರಯತ್ನವನ್ನು ಮಾಡುವುದು ಸರ್ವಥಾಸಾಧುವಲ್ಲಾ...
ಅಲ್ಲಿದೇ ನಮ್ಮನೆ ಇಲ್ಲಿ ಬಂದೆ ಸುಮ್ಮನೆ......ಎಂಬ ದಾಸವಾಣಿಯಂತೇ...ಅಲ್ಲಿಯ ಕ್ಷೀರಸಾಗರದ ಮನೆಗೆ ಸೇರವಂಥ ಪಥದಲ್ಲಿ ಈ ಸಾಧನಾ ಶರೀರವೆಂಬ ಮನೆಯನ್ನು ೩೦ಭಾಗವತ ಧರ್ಮನುಷ್ಟಾಗಳೆಂಬ ಘಟ್ಟಿಯಾದ ಇಟ್ಟಿಗೆಗಳಿಂದ ..ನವವಿಧಭಕ್ತಿಗಳೆಂಬ ಗಾರೆ ನೀರು ..ಸಕಲ ಸಾಮಗ್ರಿಗಳನ್ನು ಬಳಸಿಕೊಂಡು ಹರಿವಾಯುಗುರುಗಳ ಸೇವಾ ಸಿಂಚನದೊಂದಿಗೆ ಆಚಾರ್ಯಮಧ್ವಮತ ಸಿದ್ಧಾಂತದ ಯೋಜನೆಯಲ್ಲಿ ಮುಖ್ಯಪ್ರಾಣದೇವರ ತಾಂತ್ರಿಕ ನಿರ್ದೇಶನದಡಿಯಲ್ಲಿ ...ಎಂದೆಂದೂ ಈ ಭವ ಲವಣಸಾಗರಕ್ಕೆ ಬೀಳದಂತೇ ಶಾಶ್ವತವಾದ ಕ್ಷೀರಸಾಗರದಲ್ಲಿ ಯಥಾಯೋಗ್ಯತಾನುಸಾರ ಮನೆಯನ್ನು ಕಟ್ಟಬೇಕೂ..ಈ ದಿಸೆಯಲ್ಲಿ ನಮ್ಮ ದ್ವಾದಶೇಂದ್ರಿಯಗಳೂ ಪ್ರವೃತ್ತವಾಗಬೇಕೂ......ಎಂಬ ಯಥಾಮತಿ ಅರ್ಥಾನುಸಂಧಾನ&ಚಿಂತನದೊಂದಿಗೆ ..ಪತ್ಯಂತರ್ಗತ *ಶ್ರೀಗೋಪಾವದಾಸಾಂತರ್ಗತ ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ
ಶ್ರೀಸುಗುಣವಿಠಲಾರ್ಪಣಮಸ್ತು
✍.....ಶ್ರೀಸುಗುಣವಿಠಲ
****