Showing posts with label ಗೋಪಿ ನಿನ್ನ ಮಗಗಂಜುವೆನಮ್ಮ purandara vittala GOPI NINNA MAGAGANJUVEYAMMA. Show all posts
Showing posts with label ಗೋಪಿ ನಿನ್ನ ಮಗಗಂಜುವೆನಮ್ಮ purandara vittala GOPI NINNA MAGAGANJUVEYAMMA. Show all posts

Thursday, 5 December 2019

ಗೋಪಿ ನಿನ್ನ ಮಗಗಂಜುವೆನಮ್ಮ purandara vittala GOPI NINNA MAGAGANJUVEYAMMA

csr and tvg




 ರಾಗ ಮೋಹನ ರೂಪಕತಾಳ 
3rd Audio by Mrs. Nandini Sripad

ಶ್ರೀ ಪುರಂದರದಾಸರ ಕೃತಿ 


ಗೋಪಿ ನಿನ್ನ ಮಗಗಂಜುವೆವಮ್ಮ ॥ ಪ ॥

ಪರಮಾತ್ಮನು ಬೆಣ್ಣೆಯ ಬೇಡುತ್ತಲಿಹನೇ ॥ ಅ ಪ ॥

ಕಡೆವುತ್ತ ಪಾಡಲು ಅತಿಶಯ ಹರುಷದಿ ।
ಕಡಗ ಪೆಂಡೆಯ ಕಾಲ್ ಝಣರೆನ್ನುತ್ತ ॥
ಕಡೆಯದೆ ಕೈಯ್ಯಾಡದೆ ಸುಮ್ಮನಿರಲು ।
ತುಡುಕಿ ಬೆಣ್ಣೆಯ ಮೆದ್ದು ಓಡಿಹೋದ ॥ 1 ॥

ಮುಂಗಾಲ ಮಕ್ಕಳ ತೊಟ್ಟಿಲೊಳಗೆ ಹಾಕಿ ।
ತಿಂಗಳ ಶಿಶುವ ನೆಲಕೆಡಹಾಕುವ ॥
ಅಂಗಳದೊಳಗೆಲ್ಲ ಚಾಲಿವಾರಿ ವ್ಯಾಪಾರ ।
ಹೆಂಗಳೊಡನೆ ಮಾತನೊಲಿದಾಡುವ ॥ 2 ॥

ಅರೆವ ಗುಂಡ ದೇವರ ಜಗಲಿಯೊಳಿಟ್ಟ ।
ಹರಿಗಳ ತಂದು ರಾಯ ಕಲ್ಲ ಮೇಲಿಟ್ಟ ॥
ಮರೆದೊರಗಿದ್ದ ಮಕ್ಕಳ ಬಡಿದೆಬ್ಬಿಸಿ ।
ಅರಿಯದಂತೆ ಬೊಬ್ಬಿಡುವ ॥ 3 ॥

ದೈವದೆಡೆಯಲ್ಲಿದ್ದ ಮೀಸಲನೆಲ್ಲವ ।
ನೈವೇದ್ಯ ಸಲದೆಂದು ನಗುತಲುಂಡ ॥
ದೈವವು ತನಗಿಂತ ಮಿಗಿಲೆ ಮರುಳುಗಳಿರಾ ! 
ದೈವವೆಲ್ಲವೂ ತಾನೆಯೆಂದಾ ॥ 4 ॥

ಕಾದಾರಿದ ಹಾಲ ಕಲಕಿ ಕೆನೆಯ ಮೆದ್ದು ।
ಕಾದಿಹನಂತೆ ಬೆಕ್ಕ ಬೆದರಿಸುವ ॥
ಮಾಧವನ ಮಹಿಮೆ ಅಳವಲ್ಲವಾರಿಗೂ ।
ಶ್ರೀದ ಪುರಂದರವಿಠಲ ನಮ್ಮ ಬಿಡನಲ್ಲ ॥ 5 ॥
***

pallavi

gOpi ninna magagajjuvenamma paramAtmanu beNNeya bEDuttalihane gOpi ninna magagajjuvenamma

caraNam 1

kaDevutta pADalu atishaya haruSadi kaDakaDa peNdeya kAl jhaNarenuta
kaDyade kaiyADade summaniralu tuDugi beNNeya meddu Odi hOha

caraNam 2

mukkAla makkaLa toTTiloLage hAki tingaLa shishuva nelakaDa hAkuva
angaLadoLagella cAlivArI vyApAra hengaLoDane mAtanolidADuva

caraNam 3

arave guNDa dEvara jagaliyoLiTTu harigaLa tandu rAya kalla mEliTTa
maredoragidda makkaLa baDidebbisi ariyadante bobbiDuva

caraNam 4

daivadeDeyalidda mIsalanellava naivEdya salladendu nagutaluNDa
daivavu tanaginta migile maruLugaLira daivavillavu tAnEyenda

caraNam 5

kAdArida hAla keneya meddu kAdihanante bekka bedarisuva
mAdhavana mahime aLavallavyArigU shrI purandara viTTala namma biDanalla
***


ರಾಗ ಕೇದಾರಗೌಳ. ಆದಿ ತಾಳ

ಗೋಪಿ ನಿನ್ನ ಮಗಗಂಜುವೆನಮ್ಮ
ಪರಮಾತ್ಮನು ಬೆಣ್ಣೆಯ ಬೇಡುತ್ತಲಿಹನೆ
ಗೋಪಿ ನಿನ್ನ ಮಗಗಂಜುವೆನಮ್ಮ ||ಪ||

ಕಡೆವುತ್ತ ಪಾಡಲು ಅತಿಶಯ ಹರುಷದಿ
ಕಡಗ ಪೆಂಡೆಯ ಕಾಲ್ ಝಣರೆನುತ
ಕಡೆಯದೆ ಕೈಯಾಡದೆ ಸುಮ್ಮನಿರಲು
ತುಡುಕಿ ಬೆಣ್ಣೆಯ ಮೆದ್ದು ಓಡಿ ಹೋಹ ||

ಮುಂಗಾಲ ಮಕ್ಕಳ ತೊಟ್ಟಿಲೊಳಗೆ ಹಾಕಿ
ತಿಂಗಳ ಶಿಶುವ ನೆಲಕೆಡಹಾಕುವ
ಅಂಗಳದೊಳಗೆಲ್ಲ ಚಾಲಿವಾರೀ ವ್ಯಾಪಾರ
ಹೆಂಗಳೊಡನೆ ಮಾತನೊಲಿದಾಡುವ ||

ಅರೆವ ಗುಂಡ ದೇವರ ಜಗಲಿಯೊಳಿಟ್ಟು
ಹರಿಗಳ ತಂದು ರಾಯ ಕಲ್ಲ ಮೇಲಿಟ್ಟ
ಮರೆದೊರಗಿದ್ದ ಮಕ್ಕಳ ಬಡಿದೆಬ್ಬಿಸಿ
ಅರಿಯದಂತೆ ಬೊಬ್ಬಿಡುವ ||

ದೈವದೆಡೆಯಲಿದ್ದ ಮೀಸಲನೆಲ್ಲವ
ನೈವೇದ್ಯ ಸಲ್ಲದೆಂದು ನಗುತಲುಂಡ
ದೈವವು ತನಗಿಂತ ಮಿಗಿಲೆ ಮರುಳುಗಳಿರ
ದೈವವೆಲ್ಲವು ತಾನೇಯೆಂದ ||

ಕಾದಾರಿದ ಹಾಲ ಕಲಕಿ ಕೆನೆಯ ಮೆದ್ದು
ಕಾದಿಹನಂತೆ ಬೆಕ್ಕ ಬೆದರಿಸುವ
ಮಾಧವನ ಮಹಿಮೆ ಅಳವಲ್ಲವಾರಿಗೂ
ಶ್ರೀ ಪುರಂದರವಿಠಲ ನಮ್ಮ ಬಿಡನಲ್ಲ ||
********