Showing posts with label ಭಜಿಸುವೆ ನಿನ್ನನು ವಿಜಯದಾಸಾರ್ಯನೆ ಪೊರೆಯೊ uragadrivasa vittala dasara stutih. Show all posts
Showing posts with label ಭಜಿಸುವೆ ನಿನ್ನನು ವಿಜಯದಾಸಾರ್ಯನೆ ಪೊರೆಯೊ uragadrivasa vittala dasara stutih. Show all posts

Monday 2 August 2021

ಭಜಿಸುವೆ ನಿನ್ನನು ವಿಜಯದಾಸಾರ್ಯನೆ ಪೊರೆಯೊ ankita uragadrivasa vittala dasara stutih

dasara stutih  ದಾಸ ಸ್ತುತಿ 

ಭಜಿಸುವೆ ನಿನ್ನನು ವಿಜಯದಾಸಾರ್ಯನೆ ಪೊರೆಯೊ ಪ


ಭಜಿಸುವೆ ನಿನ್ನ ಪಾದಭಜಕಜನರ ಪಾದ

ರಜದೊಳಿಟ್ಟು ನನ್ನ ರಜತಮ ಹರಿಸೊಅ.ಪ


ವಿಜಯಸಾರಥಿಪ್ರಿಯ ನಿಜದಾಸ ನೀನೆಲೋ ಗುರುವೆ

ಅಜಪಿತನಜಸುತ ನಿಜಲೋಕಗಳೆಲ್ಲ

ಬಿಜಯ ಮಾಡಿ ನಿಜಗತಿಪ್ರದನಾರೆಂದು ನಿಜವನರಿತು

ಶ್ರೀ ಭುಜಗಶಯನ ಮೂರ್ಜಗಕೆ

ದೈವಾವೆಂದರುಹಿದ ಭೃಗುಮುನಿ1


ರಕ್ಷಿಸಬೇಕೋ ಶ್ರೀ ಲಕ್ಷ್ಮೀಶ ದಾಸನೆ ಗುರುವೆ

ಪಕ್ಷಿವಾಹನನ ನೀ ವಕ್ಷತಾಡನ ಮಾಡೆ ತಕ್ಷಣ

ಈ ಕ್ಷಿತಿ ಗಿರಿಯೊಳು ನಿಂದಾ

ಕುಕ್ಷಿಯೊಳು ಜಗದ್ರಕ್ಷಕನಾದ ಮು

ಮುಕ್ಷುಗಳೊಡೆಯನೆ ನೀಕ್ಷಿಸಿದಾ ಧೀರಾ2


ದ್ವಾಪರದಲ್ಲಿ ನಿಕಂಪನೆಂದೆನಿಸಿದೆ ಮೆರೆದೆ

ಶಾಪತನದಿ ವ್ಯಾಧರೂಪದಿಂದ ಶ್ರೀ ಗೋಪಾಲಗೆ ಬಾಣ

ಶ್ರೀಪಾದದಲ್ಲಿಟ್ಟು ಸರ್ಪಗಿರಿಯ ಶ್ರೀ ವೆಂಕಟೇಶ ನ

ಮ್ಮಪ್ಪನೆಂದು ತ್ರಿಜಗಕೆ ತೋರ್ದೆ 3


ಉದ್ಧರಿಸಲು ನೀನುದ್ಭವಿಸಿದೆಯೋ

ಮಧ್ವಪತಿಯ ಅಭಿದಾನದಿ ನೀನು

ಮಧ್ವಾಗಮ ಶೋಧಿಸಿ ಸುಧೆಯ ತಂದು

ಶುದ್ಧ ದುಗ್ಧರನೆಲ್ಲ ಉದ್ಧಾರಮಾಡಿ ಪ್ರ

ಸಿದ್ಧಿ ಪಡೆದ ಅನಿರುದ್ಧನ ದಾಸನೆ 4


ಪುರಂದರದಾಸರ ವರ ಸುಕುಮಾರ ಧೀರಾ

ಉರಗಾದ್ರಿವಾಸವಿಠಲನ ದಾಸ ಭೂಸುರನಾಗಿ ಚಿಪ್ಪಗಿರಿಯೊಳು

ಮೆರೆಯುತಾ ನಿರುತ ಶ್ರೀಹರಿದಾಸರ ವೃಂದಗಳಿಂದ

ಪರಿಪರಿ ಸಾಧನ ತೋರಿ ಮೆರೆವ ಗುರು 5

****