Showing posts with label ಕರುಣಿಸು ಹರಿಬಾಲ ಅರಳಿಸೊಹೃತ್ಕಮಲ siriaja vittala. Show all posts
Showing posts with label ಕರುಣಿಸು ಹರಿಬಾಲ ಅರಳಿಸೊಹೃತ್ಕಮಲ siriaja vittala. Show all posts

Monday, 6 September 2021

ಕರುಣಿಸು ಹರಿಬಾಲ ಅರಳಿಸೊಹೃತ್ಕಮಲ ankita siriaja vittala

 check ankita Shreesha Vittala?

ರಾಗ: [ಕುರಂಜಿ] ತಾಳ: [ಆದಿ (ತಿಶ್ರನಡೆ)]

ಕರುಣಿಸು ಹರಿಬಾಲ ಅರಳಿಸೊಹೃತ್ಕಮಲ

ಕರಗಿಸುರಿಸೊವರ ಕರುಣಿ ವಿಶಾಲ


ತಂದೆ ನಿಮ್ಮಯ ಹರಕೆ ತಂದು ಬರಲಿ ಶಿರಕೆ ಹಾ-

ಗೆಂದು ನಮಿಪೆ ಅಡಿಗೆ ಮುಂದಾಗಿರಿಸೊ ಜಗಕೆ 1

ಪ್ರಥಮ ಶ್ರೇಣಿಯಲಿ ಪಥವು ಜರಗುತಿರಲಿ

ಪತಿತರಾಗದೆ ಇಳೆಲಿ ಪ್ರಥಮ ಭಕ್ತ ನೀನೊಲಿ 2

ಏಕಾಂತ ಭಕ್ತನೆ ಲೋಕದಿ ಗುರುವನೆ(?)

ವ್ಯಾಕುಲ ಕಳೆಯಿಸೊ ಶ್ರೀಕರಾರ್ಚಿತ ಪ್ರಿಯನೆ 3

ಪಾದ ಸೇವಕಳಯ್ಯ ನಿನ್ನ ಪಾದ ನಂಬಿಹೆನಯ್ಯ ಶ್ರೀ-

ಪಾದರಾಯರ ಶಿಷ್ಯ ಸ್ವಾಪಾದ ಕರುಣಿಸಯ್ಯ 4

ಸಿರಿ ಅಜವಿಠಲ ಕರುಣಿ ಭಕ್ತರಮಲ್ಲ

ಸಿರಿಯನೀಡಲು ಬಲ್ಲ ಸರಿ ನಿನಗ್ಯಾರಿಲ್ಲ 5

***